ಪ್ರಜಾಸೇವಾ ಆಂದೋಲನ ಸಭೆಯಲ್ಲಿ ತಹಶೀಲ್ದಾರರಿಗೆ ಮನವಿ: ವಿರುಪಾಪುರ ತಾಂಡಾದ ಬಡ ಕಾರ್ಮಿಕರ ಸೂರು ರಕ್ಷಣೆಗೆ ಆಗ್ರಹ

H.Mallikarjun
H.Mallikarjun - Kalyanasiri
2 Min Read
 Memorandum submitted to the Tahsildar at the Public Service Movement meeting: Demand to protect the homes of poor workers in Virupapura Tanda.
 

ಪ್ರಜಾಸೇವಾ ಆಂದೋಲನ ಸಭೆಯಲ್ಲಿ ತಹಶೀಲ್ದಾರರಿಗೆ ಮನವಿ: ವಿರುಪಾಪುರ ತಾಂಡಾದ ಬಡ ಕಾರ್ಮಿಕರ ಸೂರು ರಕ್ಷಣೆಗೆ ಆಗ್ರಹ

ಜಾಹೀರಾತು

 

ಗಂಗಾವತಿ: ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ, ವಿರುಪಾಪುರ ತಾಂಡಾದ ಬಡ ಕಟ್ಟಡ ಕಾರ್ಮಿಕರು ಹಾಗೂ ಲಂಬಾಣಿ ಸಮುದಾಯದ ನೂರಾರು ನಿವಾಸಿಗಳ ವಾಸಸ್ಥಳವನ್ನು ಕೆರೆ ಜಾಗವೆಂದು ತೆರವುಗೊಳಿಸಲು ನೀಡಿರುವ ನೋಟಿಸ್ ರದ್ದುಪಡಿಸುವಂತೆ ಮಾನ್ಯ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ‘ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ’ದ ವತಿಯಿಂದ ಅಧಿಕೃತ ಮನವಿ ಪತ್ರ ಸಲ್ಲಿಸಲಾಯಿತು.
ವಿರುಪಾಪುರ ತಾಂಡಾದಲ್ಲಿ 2-3 ತಲೆಮಾರುಗಳಿಂದ 300ಕ್ಕೂ ಹೆಚ್ಚು ಕುಟುಂಬಗಳು ಶಾಂತಿಯುತವಾಗಿ ನೆಲೆಸಿವೆ. ಸರ್ಕಾರವೇ ಈ ಹಿಂದೆ ಇಂದಿರಾ ಆವಾಸ್, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನಗರಸಭೆಯಿಂದ ಫಾರಂ ನಂ. 3 ನೀಡಲಾಗಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಒದಗಿಸಲಾಗಿದೆ. ನಿವಾಸಿಗಳು ಪ್ರತಿವರ್ಷ ನಗರಸಭೆಗೆ ಕಂದಾಯ ಪಾವತಿಸುತ್ತಿದ್ದಾರೆ.
ಹೀಗಿರುವಾಗ, ಸರ್ವೇ ನಂ. 55ರಲ್ಲಿ ರಾಮಲಿಂಗೇಶ್ವರ ಕೆರೆ ಜಾಗವೆಂದು ಏಕಾಏಕಿ ತೆರವು ನೋಟಿಸ್ ಜಾರಿ ಮಾಡಿ ಬಡ ಕಾರ್ಮಿಕರ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಅತ್ಯಂತ ಅನ್ಯಾಯದ ಕ್ರಮವಾಗಿದೆ. ವಾಸ್ತವವಾಗಿ ವಾಸಸ್ಥಳ ಕೆರೆಯಿಂದ ಸಾಕಷ್ಟು ದೂರದಲ್ಲಿದ್ದು, ಸ್ಥಳ ಪರಿಶೀಲನೆ ನಡೆಸದೆ ಮುಗ್ಧ ಕಾರ್ಮಿಕರಿಗೆ ತೊಂದರೆ ನೀಡಲಾಗುತ್ತಿದೆ. ಆದ್ದರಿಂದ ಜಾರಿ ಮಾಡಿರುವ ನೋಟಿಸ್‌ಗಳನ್ನು ಕೂಡಲೇ ಹಿಂಪಡೆದು, ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ಹಾಗೂ ರಕ್ಷಣೆ ಒದಗಿಸಬೇಕು ಎಂದು ನಿಯೋಗವು ಬಲವಾಗಿ ಒತ್ತಾಯಿಸಿತು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ, ಹನುಮಂತ ಮೇಸ್ತ್ರಿ, ಕೃಷ್ಣ ನಾಯ್ಕ ಮೇಸ್ತ್ರಿ, ರವಿಚಂದ್ರ ಮೇಸ್ತ್ರಿ, ಶಂಕರ, ಕ್ರಷ್ಣ ನಾಯ್ಕ್, ಕೆ.ಆರ್ ಸಂತೋಷ್, ಪ್ರಾಣೇಶ್, ಕುಮಾರ್, ರಾಜು, ಸಂಘದ ಸದಸ್ಯರು ಹಾಗೂ ತಾಂಡಾದ ಮಹಿಳೆಯರು ಮತ್ತು ನಿವಾಸಿಗಳು ಉಪಸ್ಥಿತರಿದ್ದರು.

 

Total Views: 0
ಜಾಹೀರಾತು
Share This Article