ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಮಾರೋಪ: ಕೆರೆಹಳ್ಳಿಯಲ್ಲಿ ಕೃಷಿ ಸಂಭ್ರಮ

H.Mallikarjun
H.Mallikarjun - Kalyanasiri
3 Min Read

Valedictory of Rural Agricultural Work Experience Camp: Agricultural Celebration at Kerehalli

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಮಾರೋಪ: ಕೆರೆಹಳ್ಳಿಯಲ್ಲಿ ಕೃಷಿ ಸಂಭ್ರಮ

ಜಾಹೀರಾತು


ಕೊಪ್ಪಳ: ಜಿಲ್ಲೆಯ ಕೆರೆಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ 11ರಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಕೊನೆಯ ದಿನವನ್ನು ‘ಕೃಷಿ ಸಂಭ್ರಮ’ ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೃಷಿ ಮಹಾವಿದ್ಯಾಲಯ, ಗಂಗಾವತಿಯ ಶಿಬಿರಾರ್ಥಿಗಳು ಗ್ರಾಮದಲ್ಲಿ ನಡೆಸಿದ ಗ್ರಾಮೀಣ ಕೃಷಿ ಕಾರ್ಯಾನುಭವದ ಸಮಾರೋಪದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಶಿಬಿರಾರ್ಥಿಗಳು ಕುಂಭ ಹೊತ್ತು ಮೆರವಣಿಗೆ ನಡೆಸಿದರು. ಬಳಿಕ ಗಣ್ಯರ ನೇತೃತ್ವದಲ್ಲಿ ರಾಶಿ ಪೂಜೆ ನೆರವೇರಿಸುವ ಮೂಲಕ ಕೃಷಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ರಾಶಿಗೆ ಜೋಳ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಿಕ್ಷಣ ನಿರ್ದೇಶಕರಾದ ಡಾ. ಗುರುರಾಜ್ ಸುಂಕದ್, ಅಧ್ಯಕ್ಷರಾಗಿ ಡಾ. ಯಂಜೇರಪ್ಪ ಎಸ್.ಟಿ., ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀ ತಿಮ್ಮಣ್ಣ ಸೋಮಪ್ಪ ಚವಡಿ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಶೇಖರ್, ರೈತ ಸಂಪರ್ಕ ಕೇಂದ್ರ, ಹುಲಗಿಯ ಕೃಷಿ ಅಧಿಕಾರಿ ಶ್ರೀ ಪುಟ್ಟಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿಯ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಹಾಂತ ಶಿವಯೋಗಯ್ಯ, ಕೃಷಿ ಮಹಾವಿದ್ಯಾಲಯ ಗಂಗಾವತಿಯ ಸಸ್ಯರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ಬಿ. ಗೌಡರ್, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ. ಎಂ.ವಿ. ರವಿ, ಸಹ ಸಂಯೋಜಕರಾದ ಡಾ. ವಾಸುದೇವ ನಾಯಕ್ ಕೆ., ಡಾ. ಚೇತನ್ ಟಿ., ಡಾ. ಸಾಹೇಬಗೌಡ, ಡಾ. ರಸೂಲ್ ಸಾಬ್ ಹಾಗೂ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಾರ್ಥನಾ ಗೀತೆ ಹಾಗೂ ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಶಿಬಿರಾರ್ಥಿಗಳು ಸಿದ್ಧಪಡಿಸಿದ್ದ ಸಮಗ್ರ ಕೃಷಿ ಪದ್ಧತಿ, ಜಲನಯನ ಪ್ರದೇಶ, ಪೌಷ್ಟಿಕ ಕೈತೋಟ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಪ್ರಾತ್ಯಕ್ಷಿಕೆಗಳು ಹಾಗೂ ಮಳಿಗೆಗಳನ್ನು ಗಣ್ಯರು ಮತ್ತು ರೈತರು ವೀಕ್ಷಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ. ಎಂ.ವಿ. ರವಿ ಅವರು ನೀಡಿದರು.
ಬಳಿಕ ಶಿಬಿರಾರ್ಥಿಗಳಾದ ಎಚ್. ವಸಂತ ಕುಮಾರ್ ಅವರು ಶಿಬಿರದ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ನೇತ್ರಾವತಿ ಅವರು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಡಾ. ಗುರುರಾಜ್ ಸುಂಕದ್, ಮುಖ್ಯ ಅತಿಥಿಗಳಾದ ಶ್ರೀ ತಿಮ್ಮಣ್ಣ ಸೋಮಪ್ಪ ಚವಡಿ, ಗುಳದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಶರಾಮ ಸಿಳ್ಳಿಕೇತ್ ಹಾಗೂ ರೈತರಾದ ಗವಿಸಿದ್ದಪ್ಪ ಡೊಳ್ಳಿನ ಅವರು ಮಾತನಾಡಿ, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಮಹತ್ವ, ರೈತರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಗ್ರಾಮದ ರೈತ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಯಂಜೇರಪ್ಪ ಎಸ್.ಟಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ರೈತರೊಂದಿಗೆ ನೇರವಾಗಿ ಬೆರೆತು ಕೃಷಿಯ ವಾಸ್ತವಿಕ ಅನುಭವ ಪಡೆದುಕೊಳ್ಳುವುದು ಅವರ ಶೈಕ್ಷಣಿಕ ಹಾಗೂ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಒಟ್ಟಾರೆ, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳು ರೈತರ ಸಹಕಾರದೊಂದಿಗೆ ಕೈಗೊಂಡ ವಿವಿಧ ಕೃಷಿ ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸುವ ಮೂಲಕ ‘ಕೃಷಿ ಸಂಭ್ರಮ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ರೈತರು, ಗ್ರಾಮಸ್ಥರು ಹಾಗೂ ಕೃಷಿ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಯ ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

Total Views: 0
ಜಾಹೀರಾತು
Share This Article