ಸೆ.6 ರಿಂದ 13 ರವರೆಗೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

H.Mallikarjun
H.Mallikarjun - Kalyanasiri
1 Min Read

Taluk-level Dasara sports festival from Sep 6 to 13

ಸೆ.6 ರಿಂದ 13 ರವರೆಗೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ


ಕೊಪ್ಪಳ ಸೆಪ್ಟೆಂಬರ್ 04, (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27ನೇ ಸಾಲಿನ ದಸರಾ ಕ್ರೀಡಾಕೂಟಗಳನ್ನು ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗಾಗಿ ತಾಲೂಕು, ಜಿಲಾ,್ಲ ವಿಭಾಗ ಹಾಗೂ ರಾಜ್ಯ ಮಟ್ಟಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಅದರಂತೆ ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳನ್ನು ಸೆಪ್ಟೆಂಬರ್ 6 ರಿಂದ 13 ರವರೆಗೆ ವಿವಿಧ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 6 ರಂದು ಆಯೋಜಕರಾದ ಈಶಪ್ಪ ಗಾಜಿ, ದೈಹಿಕ ಶಿಕ್ಷಕರು (ಮೊ.ಸಂ. 9535831941) ಇವರ ನೇತೃತ್ವದಲ್ಲಿ ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ, ಸೆಪ್ಟೆಂಬರ್ 8 ರಂದು ತಿಪ್ಪಣ್ಣ ಹಿರೇಖೇಡ, ದೈಹಿಕ ಶಿಕ್ಷಕರು (ಮೊ.ಸಂ. 9008867656) ಇವರ ನೇತೃತ್ವದಲ್ಲಿ  ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ, ಸೆಪ್ಟೆಂಬರ್ 10 ರಂದು ಕೊಪ್ಪಳ ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ್ (ಮೊ.ಸಂ. 9591292420) ಇವರ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣ, ಕೊಪ್ಪಳದಲ್ಲಿ, ಸೆಪ್ಟೆಂಬರ್ 11 ರಂದು ಶಿವರಾಜ ಚಲುವಾದಿ, ದೈಹಿಕ ಶಿಕ್ಷಕರು (ಮೊ.ಸಂ. 9743462276) ಇವರ ನೇತೃತ್ವದಲ್ಲಿ ತಾಲ್ಲೂಕು ಕ್ರೀಡಾಂಗಣ ಕುಷ್ಟಗಿಯಲ್ಲಿ, ಸೆಪ್ಟೆಂಬರ್ 12 ರಂದು ದ್ಯಾಮಣ್ಣ ಗೊಂದಿ, (ಮೊ.ಸಂ. 9741742731) ಇವರ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ತಾಲ್ಲೂಕು ಕ್ರೀಡಾಂಗಣ ಯಲಬುರ್ಗಾದಲ್ಲಿ, ಸೆಪ್ಟೆಂಬರ್ 12 ರಂದು ಈಶಪ್ಪ ಗಾಜಿ, ದೈಹಿಕ ಶಿಕ್ಷಕರು (ಮೊ.ಸಂ. 9535831941) ಇವರ ನೇತೃತ್ವದಲ್ಲಿ ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ, ಸೆಪ್ಟೆಂಬರ್ 13 ರಂದು ವಿನಾಯಕ ಭಸಲಾಪೂರ, (ಮೊ.ಸಂ. 9071841825) ಇವರ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ತಾಲ್ಲೂಕು ಕ್ರೀಡಾಂಗಣ ಯಲಬುರ್ಗಾದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಜರುಗಲಿವೆ.
2026-27 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳನ್ನು ಸೆಪ್ಟೆಂಬರ್ 18 ಮತ್ತು 19 ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
ಜಾಹೀರಾತು
Share This Article