ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ,ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಶ್ರೀ ಪಾಟೀಲ್ ಹೇಳಿಕೆ

H.Mallikarjun
H.Mallikarjun - Kalyanasiri
2 Min Read

Computer knowledge is essential for everyone, says Mahantagouda Sri Patil, Assistant Director of the Taluk Panchayat.




ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ,ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಶ್ರೀ ಪಾಟೀಲ್ ಹೇಳಿಕೆ

ಜಾಹೀರಾತು

ವಡ್ಡರಹಟ್ಟಿ ಅರಿವು ಕೇಂದ್ರದಲ್ಲಿಉಚಿತ ಕಂಪ್ಯೂಟರ್ ತರಬೇತಿ

ಗಂಗಾವತಿ : ವಡ್ಡರಹಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಸೆ.1 ರಿಂದ 30 ರವರೆಗೆ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾ.ಪಂ. ಸಹಾಯಕ ನಿರ್ದೇಶಕರಾದ ಶ್ರೀ ಮಹಾಂತಗೌಡ ಪಾಟೀಲ್ ಅವರು ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಅರಿವು ಕೇಂದ್ರದಲ್ಲಿ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಕಂಪ್ಯೂಟರ್ ಕಲಿಕೆಗೆ ಮಕ್ಕಳು ನಗರಕ್ಕೆ ಹೋಗಬೇಕು, ಸ್ಥಳೀಯ ಪಂಚಾಯತ್ ವತಿಯಿಂದ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಇಂದಿನ ಎಐ ಕಾಲದಲ್ಲಿ ಸರಕಾರಿ ಶಾಲೆ ಮಕ್ಕಳು ಪ್ರೌಢ ಶಿಕ್ಷಣ ಹಂತದಲ್ಲೇ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಚಲವಾದಿ ಅವರು ಮಾತನಾಡಿ, ಈ ತರಬೇತಿಯಲ್ಲಿ ಕಂಪ್ಯೂಟರ್‌ನ ಮೂಲಭೂತ ಜ್ಞಾನ, MS Office, ಇಂಟರ್‌ನೆಟ್ ಬಳಕೆ, ಟೈಪಿಂಗ್, ಆನ್‌ಲೈನ್ ಸೇವೆಗಳು ಸೇರಿದಂತೆ ಉದ್ಯೋಗಕ್ಕೆ ಅಗತ್ಯವಾದ ವಿವಿಧ ಕಂಪ್ಯೂಟರ್ ಕೌಶಲ್ಯಗಳನ್ನು ಕಲಿಸಲಾಗುವುದು.
ಆಸಕ್ತ 14 ರಿಂದ 24 ವಯಸ್ಸಿನ ವಿದ್ಯಾರ್ಥಿಗಳು ಉಚಿತ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಸುಮಿತ್ರಾ ಮೆಣಸಿಕಾಯಿ ಅವರು ಮಾತನಾಡಿ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡುವ ವ್ಯವಸ್ಥೆಯೂ ಇರಲಿದೆ. ಆಸಕ್ತರು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಿ ಕಂಪ್ಯೂಟರ್ ಕೌಶಲ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಿಮ್ಮನಾಯಕ ಸರಕಾರಿ ಪ್ರೌಢಶಾಲೆ ಸಹಶಿಕ್ಷಕರಾದ ರಾಮಚಂದ್ರಪ್ಪ, ಅರಿವು ಕೇಂದ್ರದ ಮೇಲ್ವಿಚಾರಕರಾದ ವೀರೇಶ, ಟಾಟಾ ಟ್ರಸ್ಟ್ ಕಲಿಕಾ ಕೇಂದ್ರದ ಗ್ರಾಮದ ಪ್ರೇರಕರಾದ ಸುಷ್ಮಾ, ಸಿಬ್ಬಂದಿಗಳಾದ ರುದ್ರಸ್ವಾಮಿ, ಮಹ್ಮದ್ , ರಾಜಾಭಕ್ಷಿ, ಸುಜಾತ, ಶೈಲಾಶ್ರೀ, ಗ್ರಾಪಂ ಕರವಸೂಲಿಗಾರಾದ ಆಂಜನೇಪ್ಪ ಅವರು ಸ್ವಾಗತಿಸಿ, ನಿರೂಪಿಸಿದರು. ಗ್ರಾಪಂ ಇತರೆ ಸಿಬ್ಬಂದಿಗಳು ಇದ್ದರು.

Total Views: 1
ಜಾಹೀರಾತು
Share This Article