Nameless elderly man dies: Police appeal to find heirs
ಅನಾಮಧೇಯ ವೃದ್ಧೆ ಮೃತ: ವಾರಸುದಾರರ ಪತ್ತೆಗಾಗಿ ಪೊಲೀಸರ ಮನವಿ
ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): ಗದಗ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಳೆಆಲೂರು ರೈಲ್ವೆ ನಿಲ್ದಾಣದ ಸಮೀಪ ಅಪರಿಚಿತ ವೃದ್ಧೆಯು ಮೃತಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಗದಗ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಆಗಸ್ಟ್ 23 ರಂದು ಹೊಳೆಆಲೂರು ರೈಲ್ವೆ ನಿಲ್ದಾಣದ ಸಮೀಪ ಸುಮಾರು 65 ರಿಂದ 70 ವಯಸ್ಸಿನ ವೃದ್ಧೆಯು ಚಲಿಸುವ ಡೌನ್ ರೈಲುಗಾಡಿಗೆ ಸಿಕ್ಕು ಮೃತಪಟ್ಟಿದ್ದು, ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯ ಯು ಡಿ ಆರ್ ನಂ.37/2026 ಕಲಂ 194 ಬಿ. ಎನ್.ಎಸ್.ಎಸ್ ಅಡಿಯಲ್ಲಿ ರೀತ್ಯಾ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
*ವೃದ್ಧೆಯ ಚಹರೆ ಪಟ್ಟಿ:* ವೃದ್ಧೆಯ ಮುಖವು ರೈಲಿಗೆ ಸಿಕ್ಕು ನುಜ್ಜಾಗಿದ್ದು, ಹಗಲವಾದ ಮೂಗು, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.2 ಅಡಿ ಎತ್ತರ, ತಲೆಯಲ್ಲಿ ಸುಮಾರು 7-8 ಇಂಚು ಕಪ್ಪು ಮತ್ತು ಬಿಳಿ ಬಣ್ಣದ ಕೂದಲು ಇದ್ದು,ಮೈಮೇಲೆ ಹಸಿರು ಬಣ್ಣದ ಹಳದಿ ಗೆರೆಯ ಇಳಕಲ್ ಸೀರೆ ಹಾಗೂ ಚಾಕಲೇಟ್ ಬಣ್ಣದ ಕುಪ್ಪಸ ಧರಿಸಿರುತ್ತಾಳೆ.
ಈ ವೃದ್ಧೆಯ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರಿದ್ದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08372-278744 ಅಥವಾ ಮೊ. ನಂ. 9480802128 ಮತ್ತು ಇಮೇಲ್ gadagrly@Ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಮ್ ನಂ.080-22871291 ಗೆ ಸಂಪರ್ಕಿಸಲು ಗದಗ ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views:
0
ಜಾಹೀರಾತು