ಗೃಹಜ್ಯೋತಿ ಯೋಜನೆ; ದಾಖಲಾತಿಗಳ ಮರುಪರಿಶೀಲನಾ ಕಾರ್ಯದ ಸದುಪಯೋಗಕ್ಕೆ ಸಲಹೆ

H.Mallikarjun
H.Mallikarjun - Kalyanasiri
1 Min Read

 

Gruha Jyothi Scheme: Suggestions for the effective utilization of the document re-verification process.

ಗೃಹಜ್ಯೋತಿ ಯೋಜನೆ; ದಾಖಲಾತಿಗಳ ಮರುಪರಿಶೀಲನಾ ಕಾರ್ಯದ ಸದುಪಯೋಗಕ್ಕೆ ಸಲಹೆ

ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲಾತಿಗಳ ಮರು ಪರಿಶೀಲನಾ ಕಾರ್ಯವು ಜುಲೈ 1ರಿಂದಲೇ ಚಾಲ್ತಿಯಲ್ಲಿದ್ದು, ಈ ಯೋಜನೆಯ ಫಲಾನುಭವಿಗಳು ಸಂಬಂಧಿಸಿದ ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ ಆಗಸ್ಟ್ 31ರೊಳಗೆ ಅಗತ್ಯ ದಾಖಲಾತಿಗಳನ್ನು ನೀಡಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಲ್ಲಿ ಮನವಿ ಮಾಡಿದ್ದಾರೆ.
ಗೃಹ ಜ್ಯೋತಿ ಯೋಜನೆ ಜಾರಿಯಿಂದಾಗಿ ಜಿಲ್ಲೆಯಲ್ಲಿನ ಲಕ್ಷಾಂತರ ಫಲಾನುಭವಗಳಿಗೆ ಅನುಕೂಲವಾಗಿದೆ. ಈ ಯೋಜನೆಯ ಲಾಭ ಅರ್ಹರಿಗೆ ಸಿಗಬೇಕು. ಅರ್ಹರಿದ್ದು ಇದುವರೆಗೆ ಈ ಯೋಜನೆಯ ವ್ಯಾಪ್ತಿಗೆ ಒಳಪಡದೇ ಇರುವವರಿಗೆ ಈ ಯೋಜನೆಯಿಂದ ಅನುಕೂಲವಾಗಬೇಕಿದೆ. ಈ ದಿಶೆಯಲ್ಲಿ ಈ ಯೋಜನೆಯ ಫಲಾನುಭವಿಗಳ ದಾಖಲಾತಿಗಳ ಮರು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ದಾಖಲಾತಿಗಳ ಮರು ಪರಿಶೀಲನಾ ಕಾರ್ಯಕ್ಕೆ ಆಗಸ್ಟ್ 31 ಕೊನೆಯ ದಿನಾಂಕ ಆಗಿರುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,99,064 ಫಲಾನುಭವಿಗಳು ಗೃಹ ಜ್ಯೋತಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಇದುವರೆಗೆ 1,61,245 ಗೃಹ ಜ್ಯೋತಿ ಫಲಾನುಭವಿಗಳ ದಾಖಲಾತಿಗಳ ಮರು ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಇನ್ನು 37,719 ಫಲಾನುಭವಿಗಳ ದಾಖಲಾತಿಗಳ ಮರು ಪರಿಶೀಲನಾ ಕಾರ್ಯ ಬಾಕಿ ಇದೆ. ಆದ್ದರಿಂದ ಬಾಕಿ ಇರುವ ಫಲಾನುಭವಿಗಳು ಈ ಬಗ್ಗೆ ಗಮನ ಹರಿಸಿ ಕೂಡಲೇ ದಾಖಲಾತಿಗಳನ್ನು ಅಧಿಕಾರಿಗಳಿಗೆ ನೀಡಿ ಸಹಕರಿಸಬೇಕು. ದಾಖಲಾತಿಗಳ ಮರು ಪರಿಶೀಲನಾ ಕಾರ್ಯದಿಂದ ಈಗಿರುವ ಫಲಾನುಭವಿಗಳಿಗೆ ಯಾವುದೇ ರೀತಿಯ ಅಡಚಣೆಯಾಗುವುದಿಲ್ಲ ಎಂದು ರೆಡ್ಡಿ ಶ್ರೀನಿವಾಸ ಅವರು ತಿಳಿಸಿದ್ದಾರೆ.
Total Views: 0
ಜಾಹೀರಾತು
Share This Article