Kalma T Women’s College celebrates Friendship Day:
ಕಲ್ಮ ಠ ಮಹಿಳಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ
ಗಂಗಾವತಿ ಸ್ಥಳೀಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಮಹಾವಿದ್ಯಾಲಯದಲ್ಲಿ ದಿನಾಂಕ 20 ,8 ,2026ರಂದು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ , ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದ ಸಹಯೋಗದಲ್ಲಿ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ ಭಾರತ ದೇಶವು ವೈವಿಧ್ಯಮಯವಾದ ಜೀವನ ಸಂಸ್ಕೃತಿ ,ಪರಂಪರೆ ಮತ್ತು ಜನಾಂಗವನ್ನು ಒಳಗೊಂಡ ದೇಶವಾಗಿದೆ .ಇಷ್ಟೆಲ್ಲ ವೈವಿಧ್ಯತೆ ಇದ್ದರೂ ಏಕತೆ ನಮ್ಮ ದೇಶದ ಆದರ್ಶವಾಗಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬುದು ಭಾರತವು ಜಗತ್ತಿಗೆ ತೋರಿಸಿಕೊಟ್ಟ ಸಂದೇಶವಾಗಿದೆ. ಸುಮಾರು 5000 ವರ್ಷಗಳ ನಾಗರಿಕ ಇತಿಹಾಸ ಹೊಂದಿರುವ ಭಾರತ ತನ್ನ ಸಾಂಸ್ಕೃತಿಕ ವೈವಿಧ್ಯತೆಯಲ್ಲೂ ಏಕತೆಯನ್ನು , ಭಾವೈಕ್ಯತೆಯನ್ನು, ಸೌಹಾರ್ದತೆಯನ್ನು ಉಳಿಸಿಕೊಂಡು ಬಂದಿರುವುದು ನಮ್ಮ ದೇಶದ ಹಿರಿಮೆಯಾಗಿದೆ.ಆ ವೈಶಿಷ್ಟತೆ ಎಂದೆಂದಿಗೂ ಮುಂದುವರಿಯಬೇಕಾಗಿದೆ .ಅದಕ್ಕಾಗಿ ಭಾರತೀಯರಾದ ನಾವೆಲ್ಲ ನಮ್ಮ ನಮ್ಮ ಪ್ರಾದೇಶಿಕ ಭಾವನೆ ,ಭಾಷೆ ,ಜಾತಿ ,ಧರ್ಮಗಳ ಸಂಕುಚಿತತೆಯಲ್ಲಿ ಬಾಳದೆ ,ಎಲ್ಲಾ ಜನತೆ ಭಾವೈಕ್ಯತೆಯಿಂದ, ಸೌಹಾರ್ದತೆಯಿಂದ ಬಾಳಬೇಕು. ನಮ್ಮ ಸಾಂಸ್ಕೃತಿಕ ವೈಶಿಷ್ಟಗಳನ್ನು ಉಳಿಸಿಕೊಂಡು ರಾಷ್ಟ್ರೀಯ ಮನೋಭಾವನೆಯನ್ನು ಹೊಂದಿ ಬದುಕಲಿಕ್ಕೆ ಬೇಕಾದ ಅವಕಾಶಗಳನ್ನು ನಮ್ಮ ಸಂವಿಧಾನ ಕಲ್ಪಿಸಿದೆ ಎಂದರು .ಮತ್ತು ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯಾದ “ಜಾತಿ ,ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇದಭಾವವಿಲ್ಲದೆ ಭಾರತದ ಎಲ್ಲ ಜನತೆಯ ಭಾವೈಕ್ಯತೆ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಅಲ್ಲದೆ ವೈಯಕ್ತಿಕವಾಗಿ ಆಗಲಿ ಅಥವಾ ಸಾಮೂಹಿಕವಾಗಿ ಆಗಲಿ ನಮ್ಮಲ್ಲಿರುವ ಎಲ್ಲ ಭೇದ ಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಪ್ರತಿಜ್ಞೆ ಮಾಡುತ್ತೇನೆ “ಎಂಬ ಪ್ರಮಾಣವಚನವನ್ನು ಬೋಧಿಸಿದರು .ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ. ಕೆ ಎಮ್ ಬಸವರಾಜ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಾಣಿಶ್ರೀ ಪಾಟೀಲ್, ಡಾ. ಸುರೇಶ್ ಗೌಡ, ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಡಾ. ಜರಿನಾ ,ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೇಣುಕಾ ಸಹಕಾರ್ಯದರ್ಶಿ ಪರಿನ್ ಬಾನು ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
Total Views:
0
ಜಾಹೀರಾತು


