Green Building Technologies & Sustainable Construction: 3-Day Workshop by Karnataka Academy of Science and Technology
ಹಸಿರು ಕಟ್ಟಡ ತಂತ್ರಜ್ಞಾನಗಳು & ಸುಸ್ಥಿರ ನಿರ್ಮಾಣ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 3 ದಿನಗಳ ಕಾರ್ಯಾಗಾರ
ಕೊಪ್ಪಳ ಆಗಸ್ಟ್ 19 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು (ಕವಿತಂಅ) “ಹಸಿರು ಕಟ್ಟಡ ತಂತ್ರಜ್ಞಾನಗಳು ಮತ್ತು ಸುಸ್ಥಿರ ನಿರ್ಮಾಣ” (Green Building Technologies and Sustainable Construction) ಎಂಬ ವಿಷಯದ ಕುರಿತು 3 ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದೆ.
ಈ ಕಾರ್ಯಾಗಾರವು ದಿನಾಂಕ ಆಗಸ್ಟ್ 27 ರಿಂದ ಆ. 29ರವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯ ಜಿ.ಕೆ.ವಿ.ಕೆ ಆವರಣದಲ್ಲಿರುವ ಪ್ರೊ. ಯು. ಆರ್. ರಾವ್ ವಿಜ್ಞಾನ ಭವನದ ಅಕಾಡೆಮಿ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಾಗಾರದದಲ್ಲಿ ತಾಂತ್ರಿಕ ಉಪನ್ಯಾಸಗಳು ಜರುಗಲಿದ್ದು, ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪರಿಣಿತ ವಿಜ್ಞಾನಿಗಳು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಲು ಅವಕಾಶವಿದ್ದು, ಆಸಕ್ತರು ಆ. 24ರೊಳಗೆ ಗೂಗಲ್ ಫಾರ್ಮ್ https://forms.gle/ 6DfZbyciVWWDNTcv7 ರ ಮೂಲಕ ನೋಂದಾಯಿಸಿಕೊಳ್ಳಬಹುದು.
ಕಾರ್ಯಾಗಾರದದಲ್ಲಿ ತಾಂತ್ರಿಕ ಉಪನ್ಯಾಸಗಳು ಜರುಗಲಿದ್ದು, ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪರಿಣಿತ ವಿಜ್ಞಾನಿಗಳು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಲು ಅವಕಾಶವಿದ್ದು, ಆಸಕ್ತರು ಆ. 24ರೊಳಗೆ ಗೂಗಲ್ ಫಾರ್ಮ್ https://forms.gle/
ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ಅಧಿಕೃತ ವೆಬ್‌ಸೈಟ್ kstacademy.in ಗೆ ಭೇಟಿ ನೀಡಬಹುದು ಅಥವಾ ಕಾರ್ಯಾಗಾರದ ಸಂಯೋಜಕರಾದ ಉಮೇಶ ಘಾಟಗೆ (ಮೊ: 9743084194) ಅಥವಾ ಚಂದ್ರಶೇಖರಮೂರ್ತಿ (ಮೊ: 9686449019) ಅವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
1
ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು

