ನಶಾ ಮುಕ್ತ ಭಾರತ ಜನಜಾಗೃತಿ

H.Mallikarjun
H.Mallikarjun - Kalyanasiri
2 Min Read

Awareness for a drug-free India

ನಶಾ ಮುಕ್ತ ಭಾರತ ಜನಜಾಗೃತಿ

 


ಬೀದರ್: ಯುವಜನತೆ ಉತ್ತಮ ಸಂಸ್ಕಾರ, ಶಿಸ್ತು, ಸೇವಾ ಮನೋಭಾವ ಹಾಗೂ ಆರೋಗ್ಯ ಕರ
ಜೀವನಶೈಲಿಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪರಮ ಪೂಜ್ಯ
ಶ್ರೀ ಹವಾ ಮಲ್ಲಿನಾಥ ಮಹಾರಾಜರು ತಮ್ಮ ದಿವ್ಯ ಸಾನಿಧ್ಯದಲ್ಲಿ ಆಶೀರ್ವಾದ ಸಂದೇಶ ನೀಡಿ ಭಕ್ತರಿಗೆ ಕರೆ
ನೀಡಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಂಸ್ಥಾಪ ಕರಾದ ಸರ್ ಸೊರಾಬ್ಜಿ ಪೋಚ್ಖನಾವಾಲಾ ಅವರ ಜನ್ಮದಿನದ
ಸ್ಮರಣಾರ್ಥ ಹಾಗೂ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೀದರ್ ನಗರದ ನೌಬಾದ್‌ನ
ಔದಂಬರಲಿAಗ ಮಲ್ಲಿನಾಥ ಆಶ್ರಮ ನೌಬಾದ ನರ್ಸರಿಯಲ್ಲಿ ನಶಾ ಮುಕ್ತ ಭಾರತ ಜನಜಾಗೃತಿ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಪೂಜ್ಯರು ಸಾನ್ನಿಧ್ಯವಹಿಸಿ ಆಶೀರ್ವದಿಸಿದರು.
ವ್ಯಸನಮುಕ್ತ ಯುವಜನತೆಯಿಂದ ಸದೃಢ ರಾಷ್ಟ್ರ ನಶಾ ಮುಕ್ತ ಭಾರತ ಕುರಿತು ಮಾತನಾಡಿದ
ಗಣ್ಯರು, ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಹಾಗೂ
ಸಮಾಜದ ಭವಿಷ್ಯಕ್ಕೂ ದೊಡ್ಡ ಸವಾಲಾಗಿದೆ. ಯುವಜನತೆ ಯಾವುದೇ ರೀತಿಯ ಮಾದಕ ವ್ಯಸನಕ್ಕೆ
ಒಳಗಾಗದೆ ಆರೋಗ್ಯಕರ, ಶಿಸ್ತಿನ ಹಾಗೂ ಜವಾಬ್ದಾರಿಯುತ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬೀದರ್ ಶಾಖೆಯ ವ್ಯವಸ್ಥಾಪಕ
ಶ್ರೀ ಹನುಮಂತರಾವ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ್,
ನೀರಗುಡಿ ಅವರ ದಿವ್ಯ ಸಾನಿಧ್ಯ ವಹಿಸಿದರು.
ಬೀದರ್ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಮತಿ ಸುಧಾರಣಿ ಹಾಗೂ ಪಿಎಸ್‌ಐ ಶ್ರೀ ಬಸವರಾಜ್ ಅವರು
ಅತಿಥಿಗಳಾಗಿ, ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀ ಬಸವರಾಜ್ ಕುಷ್ಟಗಿ ಅವರು ಮುಖ್ಯ ಅತಿಥಿಯಾಗಿ
ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ೧೯೧೧ರಲ್ಲಿ ಸ್ವದೇಶಿ ಚಿಂತನೆಯೊAದಿಗೆ
ಸ್ಥಾಪನೆಯಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ
ಮಹತ್ವದ ಪಾತ್ರ ವಹಿಸಿದೆ. ಸಂಸ್ಥಾಪಕ ಸರ್ ಸೊರಾಬ್ಜಿ ಪೋಚ್ಖನಾವಾಲಾ ಅವರ ದೂರದೃಷ್ಟಿ,
ಪ್ರಾಮಾಣಿಕತೆ, ಸ್ವದೇಶಿ ಚಿಂತನೆ ಹಾಗೂ ಜನಸೇವೆಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ
ಪ್ರೇರಣೆಯಾಗಿವೆ ಎಂದು ಹೇಳಿದರು.
ಬ್ಯಾಂಕಿನ ಬೆಳವಣಿಗೆ ಎಂದರೆ ಕೇವಲ ವ್ಯವಹಾರದ ಬೆಳವಣಿಗೆಯಲ್ಲ. ಗ್ರಾಹಕರ ವಿಶ್ವಾಸ, ಸಾಮಾಜಿಕ
ಜವಾಬ್ದಾರಿ ಹಾಗೂ ರಾಷ್ಟ್ರದ ಅಭಿವೃದ್ಧಿಯೂ ಅದರೊಂದಿಗೆ ಸಾಗಬೇಕು ಎಂದು ಗಣ್ಯರು
ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ತಾಯಿ-ತಂದೆಯೂ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ
ಹರಿಸಿ, ಅವರೊಂದಿಗೆ ಸ್ನೇಹಪೂರ್ವಕವಾಗಿ ಸಂವಹನ ನಡೆಸಬೇಕು. ಯುವಕರು ತಪ್ಪು ದಾರಿಗೆ
ಸಾಗದಂತೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ. ಯುವ ಪೀಳಿಗೆಯನ್ನು
ವ್ಯಸನಮುಕ್ತವಾಗಿಸುವುದು ಕುಟುಂಬ, ಸಮಾಜ ಹಾಗೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಯಾಗಿದೆ ಎಂದು
ತಿಳಿಸಿದರು.
ಕಾರ್ಯಕ್ರಮದಲ್ಲಿ ಅನಿಲ ಅಲ್ಮ ಅವರು ಸ್ವಾಗತಿಸಿದರು. ಶಿವಕುಮಾರ ಚಂದಾಪುರ ಸಂಗಮೇಶ್
ಮದ್ನೋರೆ ಸಂತೋಷ್ ಚಂದಾಪುರ ಸೇರಿದಂತೆ ಹಲವಾರು ಗಣ್ಯರು, ಭಕ್ತಾದಿಗಳು
ಸಾರ್ವಜನಿಕರು ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಉಪಸ್ಥಿತರಿದ್ದರು. ಸುನಿಲ್ ಮಾನುರೆ
ಅವರು ವಂದಿಸಿದರು. ಕಾರ್ಯಕ್ರಮವು ಗಣಪತಿ ಸಕ್ರೆಪ್ಪನೋರ್ ಅವರು ನಿರೂಪಿಸಿದರು.
ಅನೇಕರು ಭಾಗವಹಿಸಿದರು.

ಜಾಹೀರಾತು
Total Views: 0
Share This Article