On Aug. 06 and 07, Minister Shivraj Tangadagi will tour Koppal district
ಆ. 06 ಮತ್ತು 07 ರಂದು ಸಚಿವರಾದ ಶಿವರಾಜ ತಂಗಡಗಿ ಅವರಿಂದ ಕೊಪ್ಪಳ ಜಿಲ್ಲಾ ಪ್ರವಾಸ
ಕೊಪ್ಪಳ ಆಗಸ್ಟ್ 05, (ಕರ್ನಾಟಕ ವಾರ್ತೆ): ಸಂಪುಟ ದರ್ಜೆ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಜಿಲ್ಲೆಯಲ್ಲಿನ ಬೆಳೆ ಹಾನಿ ಹಾಗೂ ಬರವೀಕ್ಷಣೆಗಾಗಿ ಆಗಸ್ಟ್ 06 ಮತ್ತು 07 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.
ಸಚಿವರು ಆಗಸ್ಟ್ 06 ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿ ಇಂದ ನಿರ್ಗಮಿಸಿ 11.15 ಗಂಟೆಗೆ ಕುಷ್ಟಗಿ ತಾಲ್ಲುಕಿನ ನವಲಹಳ್ಳಿ ಗ್ರಾಮಕ್ಕೆ ಆಗಮಿಸಿ, ಮೆಕ್ಕೆಜೋಳ, ತೊಗರಿ ಹಾಗೂ ಸಜ್ಜೆ ಬೆಳೆ ಹಾನಿ ಮತ್ತು ಬರ ಪರಿಸ್ಥಿತಿ ವೀಕ್ಷಣೆ ಮಾಡುವರು. ಮಧ್ಯಾಹ್ನ 12.45 ಗಂಟೆಗೆ ಕುಕನೂರು ತಾಲೂಕಿನ ರಾಜೂರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಪೀಡಿತ ಪ್ರದೇಶದ ರೈತರು, ಅಧಿಕಾರಿಗಳು ಹಾಗೂ ಸಚಿವರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.30 ಕ್ಕೆ ರಾಜೂರಿನಿಂದ ನಿರ್ಗಮಿಸುವರು. ಮಧ್ಯಾಹ್ನ 1.45 ಕ್ಕೆ ಕುಕನೂರಿಗೆ ಆಗಮಿಸುವರು. ಮಧ್ಯಾಹ್ನ 2.45 ಕ್ಕೆ ಕುಕನೂರಿನಿಂದ ನಿರ್ಗಮಿಸಿ ಮಧ್ಯಾಹ್ನ 03:15 ಕ್ಕೆ ಕೊಪ್ಪಳ ತಾಲೂಕಿನ ಹಲಗೇರಾ ಗ್ರಾಮದಲ್ಲಿ ಮೆಕ್ಕೆಜೋಳ, ತೊಗರಿ ಹಾಗೂ ಸಜ್ಜೆ ಬೆಳೆ ಹಾನಿ ಹಾಗೂ ಬರ ವೀಕ್ಷಣೆ ನಡೆಸುವರು. ಸಂಜೆ 04 ಗಂಟೆಗೆ ಹಲಗೇರಾದಿಂದ ನಿರ್ಗಮಿಸಿ ಸಂಜೆ 04:10 ಕ್ಕೆ ಕೊಪಪಳಕ್ಕೆ ಆಗಮಿಸಿ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಜಿ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಬೆಳೆ ಹಾನಿ, ಬರ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ವಿಷಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಂಜೆ 6 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ ಸಂಜೆ 7.30 ಕ್ಕೆ ಕಾರಟಗಿಗೆ ತೆರಳಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರನ್ನು ಭೇಟಿಯಾಗಿ ಕುಂದುಕೊರತೆಗಳ ವಿಚಾರಣೆ ನಡೆಸಿ, ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು. ಆಗಸ್ಟ್ 07 ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ, ಬೆಳಿಗ್ಗೆ 10:10 ಕ್ಕೆ ಕಾರಟಗಿ ತಾಲೂಕಿನ ಮೈಲಾಪೂರಕ್ಕೆ ಭೇಟಿ ನೀಡಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 46 ರ ಬಳಿ ಸೈಡ್ ಲೈನಿಂಗ್ ಸ್ಲಿಪ್ ಆಗಿರುವ ಸ್ಥಳ ಪರಿಶೀಲನೆ ಹಾಗೂ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸುವರು. ಬೆಳಿಗ್ಗೆ 10.30 ಕ್ಕೆ ಮೈಲಾಪೂರ ದಿಂದ ನಿರ್ಗಮಿಸಿ ಬೆಳಿಗ್ಗೆ 11 ಗಂಟೆಗೆ ಕಾರಟಗಿ ತಾಲ್ಲೂಕಿನ ಕುಕ್ಕರಗೋಳ ಗ್ರಾಮಕ್ಕೆ ಭೇಟಿ ನೀಡಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಮರಣ ಹೊಂದಿದ ಕುಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವರು. ಬೆಳಿಗ್ಗೆ 11:30 ಕ್ಕೆ ಕುಕ್ಕರಗೋಳದಿಂದ ನಿರ್ಗಮಿಸಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Total Views:
0
