ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯ : ಶರಣಬಸಪ್ಪ ದಾನಕೈ

H.Mallikarjun
H.Mallikarjun - Kalyanasiri
1 Min Read
Health is more important than a fortune of crores: Sharanabasappa Danakai

ಧರ್ಮಸ್ಥಳ ಯೋಜನೆಯಿಂದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯ : ಶರಣಬಸಪ್ಪ ದಾನಕೈ

ಜಾಹೀರಾತು

ಯಲಬುರ್ಗಾ: ಬೀಡಿ,ಸಿಗರೇಟ ಡ್ರಗ್ಸ ಇತರ ಮಾದಕ ವಸ್ತುಗಳ ದುಶ್ಚಟಗಳಿಗೆ ಯುವ ಸಮುದಾಯ ,ಸೇವನೆಗೆ ಅಂಟಿಕೊಂಡು ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ, ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ, ಭವಿಷ್ಯವನ್ನು ರೂಪಿಸಿಕೊಳ್ಳಿ ,ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯವಾದದು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ. ಕೆ.ದಾನಕೈ ಅವರು ಯಲಬುರ್ಗಾದ ಮೌಲಾನ ಆಜಾದ ಶಾಲೆಯಲ್ಲ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಅಂಗವಾಗಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಅಮುಲು ಬರುವಂತಹ ಮಾದಕ ಸೇವನೆ ಮಾಡುವದರಿಂದ ದೈಹಿಕವಾಗಿ, ಮಾನಸಿಕವಾಗಿ ಅನೇಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುವದು ಬೇಡ ಉತ್ತಮರ ಸಂಘ ಮಾಡಿ ಸರಿ ದಾರಿಯಲ್ಲಿ ಸಾಗಬೇಕು ಡಾ.ಶೇಖರ ಭಜೇಂತ್ರಿ ಅವರು ಹೇಳಿದರು. ಯುವಕರ ಭವಿಷ್ಯ ಮತ್ತು ಜೀವನ ಹಾಳಾಗುತ್ತಿದೆ ಮತ್ತು ಕುಟುಂಬಗಳು ಬೀದಿಗೆ ಬಂದಿರುವ ಘಟನೆಗಳನ್ನು ಕಾಣಬಹುದು, ಉತ್ತಮ ವಿದ್ಯಾಭ್ಯಾಸದ ಜೊತೆಗೆ ಮೂಲಕ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮೌಲಾನ ಆಜಾದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಶೀಲ್ಪಾ ಕೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿಷರು. ಮೇಲ್ವಿಚಾರಕಿ ಕಾವ್ಯ ಸಿರಿಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿದಿ ಶಿಲ್ಪಾ ಮತ್ತು ಶಾಲೆಯ ಶಿಕ್ಷಕರಾದ ಬಾಳಪ್ಪ ಹಡಪದ ,ಶಿವಪ್ಪ ದಿವಟರ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Total Views: 0
Share This Article