ಗೃಹರಕ್ಷಕದಳದ ವೀರಣ್ಣ ಬಡಿಗೇರ ಅವರ ನಿವೃತ್ತಿ,ಅವರ ಜೀವನದ ಹೊಸ ಅಧ್ಯಾಯದ ಆರಂಭ: ಸರಸ್ವತಿ ನಾಗರಾಜ

H.Mallikarjun
H.Mallikarjun - Kalyanasiri
2 Min Read

The retirement of Home Guard Veeranna Badiger: The beginning of a new chapter in his life – Saraswathi Nagaraja

ಗೃಹರಕ್ಷಕದಳದ ವೀರಣ್ಣ ಬಡಿಗೇರ ಅವರ ನಿವೃತ್ತಿ,ಅವರ ಜೀವನದ ಹೊಸ ಅಧ್ಯಾಯದ ಆರಂಭ: ಸರಸ್ವತಿ ನಾಗರಾಜ

ಜಾಹೀರಾತು

ಕೊಪ್ಪಳ ಜಿಲ್ಲೆಯ ಗೃಹರಕ್ಷಕದಳದ ವೀರಣ್ಣ ಬಡಿಗೇರ ಅವರ ನಿವೃತ್ತಿ,ಅವರ ಜೀವನದ ಹೊಸ ಅಧ್ಯಾಯದ ಆರಂಭ: ಸರಸ್ವತಿ ನಾಗರಾಜ

ಕೊಪ್ಪಳ: ಗೃಹರಕ್ಷಕ ದಳ ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಕೊಪ್ಪಳದಲ್ಲಿ ಸುಮಾರು 50 ವರ್ಷಗಳ ವರೆಗೆ ಕೆಲಸ ಮಾಡಿದ ಕುಕನೂರಿನ ಸಿ.ಸಿ ಕಮಾಂಡರ್‌ ವೀರಣ್ಣ ಬಡಿಗೇರ ಅವರು ಮಂಗಳವಾರ ನಿವೃತ್ತಿ ಹೊಂದಿದರು. ಅವರ ನಿವೃತ್ತಿ ಅಂಗವಾಗಿ ಕೊಪ್ಪಳದ ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ ಅವರ ಬೀಳ್ಕೊಡುಗೆ ಸಮಾರಂಭ ಜರುಗಿತು.
ನಿವೃತ್ತ ವೀರಣ್ಣ ಬಡಿಗೇರ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಚ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೀರಣ್ಣ ಬಡಿಗೇರ ಮಾತನಾಡಿ, ವೀರಣ್ಣ ಬಡಿಗೇರ ತಮ್ಮ ದೀರ್ಘ ಸೇವೆಯನ್ನು ಸ್ಮರಿಸಿಕೊಂಡು, ಈ ಕಛೇರಿಯಲ್ಲಿ ಮಾಡಿದ ಕೆಲಸದ ದಿನಗಳು ಅತ್ಯಂತ ಮೌಲ್ಯವಾದ ದಿನಗಳು, ಇಲ್ಲಿ ನಾನು ಉತ್ತಮ ಮೌಲ್ಯಗಳನ್ನು ಕಲಿತೆ, ಉತ್ತಮ ಸ್ನೇಹಿತರನ್ನು ಸಂಪಾದಿಸಿದೆ, ನನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು, ನಿಮ್ಮ ಪ್ರೀತಿ, ಸಹಾಯದಿಂದಲೇ ನನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಯಿತು. ಕೆಲಸ ಮಾಡುವಾಗ ನನ್ನಿಂದ ಏನಾದರೂ ತಪ್ಪುಗಳಾಗಿದ್ದರೆ ನನ್ನನ್ನು ಕ್ಷಮಿಸಿ, ಅಂತಿಮವಾಗಿ ನಿಮ್ಮೆಲ್ಲರ ಭವಿಷ್ಯವು ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿಯೂ ನಮ್ಮ ಸ್ನೇಹ ಹೀಗೆಯೇ ಇರಲಿ ಎಂದು ಹೇಳಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪತ್ರಿಕಾ ವರದಿಗಾರರಾದ ಸರಸ್ವತಿ ನಾಗರಾಜ ಅವರು ಮಾತನಾಡಿ, ವೀರಣ್ಣ ಬಡಿಗೇರ ಅವರು ಸರ್ಕಾರಿ ಸೇವೆಯಲ್ಲಿ ಪ್ರಾಮಾಣೀಕತೆ ಮತ್ತು ಕರ್ತವ್ಯ ನಿಷ್ಠೆ ಹೊಂದಿದ್ದರು. ಕೊಪ್ಪಳದ ಗೃಹರಕ್ಷಕದಳದ ದೊಡ್ಡ ಆಸ್ತಿ ಎಂದು ಹೇಳಲಾದ ಗೃಹರಕ್ಷಕ/ಗೃಹರಕ್ಷಕಿಯರಿಗೆ ವಾಯದ ಕವಾಯತ್ತು, ತಿಂಗಳ ಕರ್ತವ್ಯ, ವಿವಿಧ ಬಂದೋಬಸ್ತ್‌, ತುತ್ತು ಸೇವೆಯಲ್ಲಿ ಅನೇಕ ಯೋಜನೆಗಳನ್ನು ಸರ್ಕಾರದ ಬಾಂಧವ್ಯ ಬಳಸಿಕೊಂಡು ಗೃಹರಕ್ಷಕ ಇಲಾಖೆಯ ಒಂದು ದೊಡ್ಡ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿ, ವೀರಣ್ಣ ಬಡಿಗೇರ ಅವರನ ಸೇವೆಗೆ ನಿವೃತ್ತಿ ಅಂತ್ಯವಲ್ಲ, ಅದು ಜೀವನದ ಹೊಸ ಅಧ್ಯಾಯ ಆರಂಭವಾಗಿದ್ದು, ಇನ್ನೂ ಅನೇಕ ಸಮಾಜ ಸೇವೆಗಳನ್ನು ನಡೆಸಲು ಹಾಗೂ ಅವರ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುವ ಅವಕಾಶವಾಗಿದೆ. ವೀರಣ್ಣ ಬಡಿಗೇರ ಅವರ ಜೀವನ ಎಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಯವರಾದ ಶಿವಶರಣಪ್ಪ, ಮಂಜುನಾಥ, ಎಸ್. ಮೀರಾಸಾಬ್‌, ಪಿ. ಕುಮಾರ, ಸಿ. ಮಂಜುನಾಥ, ಗುರುಬಸವ, ವಿಜಯಮಹಾಂತೇಶ, ಯಲ್ಲಮ್ಮ, ಕುಸುಮ, ಇಂದ್ರಾ ಬಡಿಗೇರ, ರವೀಂದ್ರ ಬಾಕಳೆ, ಸುಮಾ ಶೆಟ್ಟರ್‌, ವಿಜಯಲಕ್ಷ್ಮಿ ರೇವಡಿ, ಬಸವರಾಜ ತುಮ್ಮರುಗುದ್ದಿ, ದ್ಯಾಮಣ್ಣ, ಮುರ್ತುಜಾಸಾಬ ಯಲಬುರ್ಗಾ, ತಿಮ್ಮಣ್ಣ ನಾಯಕ ಕಾರಟಗಿ, ಮುನಿರಾಬಾದ ಘಟಕದ ರಾಮಲಿಂಗಪ್ಪ, ಹನುಮಂತ, ಕುಕನೂರು ಘಟಕದ ಬಾಳಪ್ಪ, ಕುಕನೂರು ಪ್ರವಾಸಿ ಮಿತ್ರರಾದ ಅಕ್ಬರ್‌, ಆನಂದ ಉತ್ತಂಗಿ, ಗಿರಿಜಾ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾಹಿತಿಗಾಗಿ:
ಸರಸ್ವತಿ ಕೆ.
ಮೊ: 7337762019

Total Views: 0
Share This Article