೮೦ನೇ ಸ್ವಾತಂತ್ರ್ಯ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಡಾ. ಸುರೇಶ ಇಟ್ನಾಳ

H.Mallikarjun
H.Mallikarjun - Kalyanasiri
3 Min Read

Preparations needed for the 80th Independence Day: Dr. Suresh Itnal

೮೦ನೇ ಸ್ವಾತಂತ್ರ್ಯ ದಿನಾಚರಣೆಗೆ ಅಗತ್ಯ ಸಿದ್ಧತೆ

ಕೈಗೊಳ್ಳಿ: ಡಾ. ಸುರೇಶ ಇಟ್ನಾಳ

ಕೊಪ್ಪಳ ಆಗಸ್ಟ್ ೦೩ (ಕರ್ನಾಟಕ ವಾರ್ತೆ): ಆಗಷ್ಟ್ ೧೫ ರಂದು ನಡೆಯುವ
೮೦ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಕೊಪ್ಪಳ
ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು
ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ.
ಇಟ್ನಾಳ ಅವರು ಸೂಚನೆ ನೀಡಿದರು.
೮೦ನೇಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೊಪ್ಪಳ
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಗಸ್ಟ್ ೩ರಂದು ಜಿಲ್ಲಾ ಮಟ್ಟದ
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಗಸ್ಟ್ ೧೫ರಂದು ಬೆಳಗ್ಗೆ ೮ ಗಂಟೆಗೆ ಜಿಲ್ಲಾಡಳಿತ ಭವನದ
ಆವರಣದಲ್ಲಿ ಹಾಗೂ ಅಂದು ಬೆಳಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ
ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಅಧಿಕಾರಿಗಳು
ತಮ್ಮ ಸಿಬ್ಬಂದಿಯೊAದಿಗೆ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ಬಗ್ಗೆ
ಹಾಜರಾತಿ ನಿರ್ವಹಿಸಲಾಗುವುದು. ಯಾವುದೇ ನಿಯಮ
ಉಲ್ಲಂಘನೆಯಾಗದAತೆ ಹಾಗೂ ಸರ್ಕಾರದ ಶಿಷ್ಠಾಚಾರ ಪಾಲನೆಯೊಂದಿಗೆ
ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜನೆ
ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಇಲಾಖೆಗಳ
ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳು, ವೃತ್ತಗಳ ಸ್ವಚ್ಛತೆ
ಮತ್ತು ಅಲಂಕಾರ ಹಾಗೂ ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ
ವ್ಯವಸ್ಥೆಯನ್ನು ಕ್ರೀಡಾ ಇಲಾಖೆ ಮತ್ತು ಕೊಪ್ಪಳ
ನಗರಸಭೆಯಿಂದ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ
ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊAದಿಗೆ ಕಡ್ಡಾಯವಾಗಿ ಧ್ವಜಾರೋಹಣ
ಕಾರ್ಯಕ್ರಮಕ್ಕೆ ಹಾಜರಾಗಬೇಕು. ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ
ಸ್ವಾತಂತ್ರö್ಯ ಚಳುವಳಿಗಳನ್ನು ಬಿಂಬಿಸುವAತಹ ವಿಷಯ
ಹೊಂದಿರಬೇಕು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿ. ಕ್ರೀಡಾಂಗಣದಲ್ಲಿ
ಆರೋಗ್ಯ ಇಲಾಖೆಯಿಂದ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಅಗತ್ಯ
ಸಿಬ್ಬಂದಿಯೊAದಿಗೆ ಅಂಬ್ಯುಲೆನ್ಸ್, ಅಗ್ನಿಶಾಮಕ ಇಲಾಖೆಯಿಂದ ಅಗ್ನಿಶಾಮಕ
ವಾಹನಗಳನ್ನು ಕ್ರೀಡಾಂಗಣದಲ್ಲಿ ಕಾಯ್ದಿರಿಸಬೇಕು. ಪಥಸಂಚಲನದಲ್ಲಿ
ಪೌರಕಾರ್ಮಿಕರ ಒಂದು ತಂಡವು ಪಾಲ್ಗೊಳ್ಳುವಂತೆ ಕೊಪ್ಪಳ
ನಗರಸಭೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು
ಹೇಳಿದರು.

ಜಾಹೀರಾತು

ಸ್ವಾತAತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಭಾಷಣ
ಸಿದ್ದಪಡಿಸಲು ವಾರ್ತಾ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎ
&ಚಿmಠಿ; ಬಿ ಖಾತಾ ವಿತರಣೆ, ಮನೆ ಬಾಗಿಲಿಗೆ ಜಾತಿ, ಆದಾಯ ಮತ್ತು ವಾಸಸ್ಥಳ
ಪ್ರಮಾಣ ಪತ್ರ ವಿತರಣೆ ಹಾಗೂ ಸರ್ಕಾರದ ಪಂಚ ಗ್ಯಾರಂಟಿ
ಯೋಜನೆಗಳ ಪ್ರಗತಿ ಮಾಹಿತಿಯನ್ನು ತ್ವರಿತವಾಗಿ ವಾರ್ತಾ ಇಲಾಖೆಗೆ
ನೀಡುವಂತೆ ಜಿಲ್ಲಾಧಿಕಾರಿಗಳು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್
ನೇಗಿ ಅವರು ಮಾತನಾಡಿ, ಸ್ವಾತಂತ್ರ‍್ಯೋತ್ಸವ ದಿನಾಚರಣೆ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹಾಗೂ ಪಥಸಂಚಲನ
ಪೂರ್ವಭಾವಿ ತರಬೇತಿಗೆ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕೆ.ಕೆ.ಎಸ್.ಆರ್.ಟಿ.ಸಿ
ವತಿಯಿಂದ ಬಸ್ ಸೌಕರ್ಯ ಒದಗಿಸಬೇಕು. ಮಕ್ಕಳಿಗೆ ಹಾಲು ಅಥವಾ ಲಘು
ಉಪಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬAಧಪಟ್ಟ
ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ ಅವರು
ಮಾತನಾಡಿ, ಸ್ವಾತಂತ್ರ‍್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ
ಪಥಸಂಚಲನವು ಶಿಸ್ತುಬದ್ಧ ಮತ್ತು ಅಚ್ಚುಕಟ್ಟಾಗಿರಬೇಕು.
ಇದಕ್ಕಾಗಿ ನೀಡಲಾಗುವ ಪೂರ್ವಭಾವಿ ತರಬೇತಿಯಲ್ಲಿ ಆಯಾ ತಂಡದ
ಮಕ್ಕಳು ಪಾಲ್ಗೊಳ್ಳಬೇಕು. ಪ್ಲಾಸ್ಟಿಕ್ ಧ್ವಜವನ್ನು ಸಂಪೂರ್ಣವಾಗಿ
ನಿಷೇಧಿಸಲಾಗಿದ್ದು, ಯಾವ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಧ್ವಜ
ಮಾರಾಟವಾಗದಂತೆ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು
ಕ್ರಮಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ
ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಾತನಾಡಿ,
ಸ್ವಾತಂತ್ರ‍್ಯೋತ್ಸವದ ವ್ಯವಸ್ಥಿತ ಆಚರಣೆಗೆ ರಚಿಸಲ್ಪಟ್ಟ ಸಮಿತಿಗಳು
ಪರಸ್ಪರ ಸಮನ್ವಯ ಸಾಧಿಸಿ ತಮ್ಮ ಜಾವಾಬ್ದಾರಿಗಳನ್ನು
ನಿರ್ವಹಿಸಬೇಕು. ಇಲಾಖೆಗಳ ಜಾಗೃತಿ ಫಲಕಗಳ ಬಿಡುಗಡೆ ಅಥವಾ
ಸೌಲಭ್ಯ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಇತರ
ಕಾರ್ಯಕ್ರಮಗಳು ಇದ್ದಲ್ಲಿ ಅಂತಹ ಅಧಿಕಾರಿಗಳು ಮುಂಚಿತವಾಗಿ
ಜಿಲ್ಲಾಡಳಿತಕ್ಕೆ ಮತ್ತು ಸಂಬAಧಪಟ್ಟ ಸಮಿತಿಗೆ ಮಾಹಿತಿ ನೀಡಬೇಕು
ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ
ಟಿ.ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ
ನಿರ್ದೇಶಕರಾದ ಮಂಜುನಾಥ ಗುಂಡುರ, ಪದವಿ ಪೂರ್ವ ಶಿಕ್ಷಣ ಇಲಾಖೆ
ಉಪನಿರ್ದೇಶಕರಾದ ಜಗದೀಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ್, ಆಹಾರ ಇಲಾಖೆ
ಉಪನಿರ್ದೇಶಕರಾದ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಸಹಾಯಕ ನಿರ್ದೇಶಕರಾದ ವಿಠ್ಠಲ ಜಾಬಗೌಡರ್ ಸೇರಿದಂತೆ ಇತರೆ ವಿವಿಧ
ಇಲಾಖೆಗಳ ಅಧಿಕಾರಿಗಳು, ತಹಶಿಲ್ದಾರರು, ನಗರ ಸ್ಥಳೀಯ
ಸಂಸ್ಥೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Total Views: 0
Share This Article