ತಡವಾದ ಮುಂಗಾರಿನಲ್ಲಿ ಭತ್ತದ ಬೆಳೆಯಲ್ಲಿ ಅನುಸರಿಸಬೇಕಾದ ಪರ್ಯಾಯ ಬೇಸಾಯ ಪದ್ಧತಿಗಳು

H.Mallikarjun
H.Mallikarjun - Kalyanasiri
2 Min Read

 

Alternative farming methods to follow for rice cultivation in late monsoon

 

ತಡವಾದ ಮುಂಗಾರಿನಲ್ಲಿ ಭತ್ತದ ಬೆಳೆಯಲ್ಲಿ
ಅನುಸರಿಸಬೇಕಾದ ಪರ್ಯಾಯ ಬೇಸಾಯ ಪದ್ಧತಿಗಳು

ಕೊಪ್ಪಳ ಜುಲೈ 30 (ಕರ್ನಾಟಕ ವಾರ್ತೆ): ತಡವಾದ ಮುಂಗಾರಿನಲ್ಲಿ ಭತ್ತದ ಬೆಳೆಯಲ್ಲಿ ಅನುಸರಿಸಬೇಕಾದ ಪರ್ಯಾಯ ಬೇಸಾಯ ಪದ್ಧತಿಗಳ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿಪ್ರಸಾದ ಪಿ.ಆರ್. ಅವರಿಂದ ರೈತರಿಗೆ ಸಲಹೆ ನೀಡಿದ್ದಾರೆ.
ನೇರ ಬಿತ್ತನೆ, ಡ್ರಮ್ ಸೀಡರ್, ಅರೆ ನೀರಾವರಿ, ಶ್ರೀ ಪದ್ಧತಿ ಮತ್ತು ಒಣ ಭತ್ತ (ಏರೋಬಿಕ್ ಭತ್ತ)ದ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು. ಪ್ಲಾಸ್ಟಿಕ್ ಟ್ರೇಗಳಲ್ಲಿ ಒಟ್ಟು ಪಾತಿಯನ್ನು ಬೆಳೆಸಿ ಯಾಂತ್ರೀಕೃತ ನಾಟಿ ಮಾಡುವುದರಿಂದಒಟ್ಟು ಪಾತಿಗೆ ಬೇಕಾಗುವ ನೀರು ಹಾಗೂ 20 ರಿಂದ 25 ದಿನಗಳಸಮಯವನ್ನು ಉಳಿಸಬಹುದು. ಎಕರೆಗೆ 80 ಪ್ಲಾಸ್ಟಿಕ್ ಟ್ರೇಗಳುಬೇಕಾಗುತ್ತದೆ. ಪ್ಲಾಸ್ಟಿಕ್‌ಟ್ರೇನಲ್ಲಿಬೆಳೆಸಿದಸಸಿಗಳನ್ನು ಕೈನಾಟಿಯಿಂದಲೂಮಾಡಬಹುದು. ನಾಟಿಸಸಿಗಳವಯಸ್ಸು 30 ದಿವಸಕ್ಕೂಹೆಚ್ಚಾಗಿದ್ದರೆಪ್ರತಿಗುಂಡಿಗೆ 4 ರಿಂದ 5 ಪೈರುಗಳನ್ನುಪ್ರತಿಚದರಮೀಟರ್‌ಗೆ 60 ರಿಂದ 65 ಗುಂಡಿಗಳನ್ನು ನಾಟಿ ಮಾಡಬೇಕು. ಸತುವುವಿನ ಸಲ್ಫೇಟ್‌ಎಕರೆಗೆ 8 ಕಿ.ಜಿ., ಕ್ಷಾರೀಯ ಮಣ್ಣಾಗಿದ್ದಲ್ಲಿಎಕರೆಗೆ 16 ಕಿ.ಜಿ. ನಾಟಿ ಸಮಯದಲ್ಲಿಅಥವಾ ನಾಟಿಯಾದ 20 ದಿನದೊಳಗೆ ಬಳಸುವುದು. ನೀರು ಹಾಯಿಸುವ ಮತ್ತುಒಣಗಿಸುವ (ಅಲ್ಟçನೇಟ್ ವೇಟಿಂಗ್ & ಡ್ರೆöÊಯಿಂಗ್) ನೀರಾವರಿ ವಿಧಾನವನ್ನು ಅಳವಡಿಸಿಕೊಳ್ಳುವುದು. ತಡವಾದ ನಾಟಿಯಲ್ಲಿ ಸಾರಜನಕದ ತಳ ಗೊಬ್ಬರದ ಪ್ರಮಾಣವನ್ನು ಶೇಕಡಾ 50% ಕ್ಕಿಂತ ಹೆಚ್ಚಿಗೆ ನೀಡಿ ಮೇಲು ಗೊಬ್ಬರವನ್ನು ಕಡಿಮೆಗೊಳಿಸುವುದು.
ಶಿಫಾರಸ್ಸು ಮಾಡಿದ ಶೇ. 50 ಭಾಗ ಪೊಟ್ಯಾಷ್‌ಗೊಬ್ಬರವನ್ನು ತಳಗೊಬ್ಬರವನ್ನಾಗಿ ಬೆಳೆಗೆ ನೀಡುವುದು. ಕಾಲುವೆಯಲ್ಲಿ ನೀರು ನಿಲ್ಲುವ ಸಂದರ್ಭದಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಶೇಕಡ 2 ಭಾಗ 19:19:19 ರಸಗೊಬ್ಬರವನ್ನು (300 ಗ್ರಾಂ / 15 ಲೀ.) ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪಡಣೆ ಮಾಡುವುದರಿಂದಕಾಲುವೆಯಲ್ಲಿ 15 ದಿನ ನೀರು ನಿಲ್ಲಿಸುವುದರಿಂದಾಗುವತೊಂದರೆಯನ್ನು ಕಡಿಮೆಗೊಳಿಸಬಹುದು. ತಡವಾದ ನಾಟಿಯು ಬೆಂಕಿ ರೋಗಕ್ಕೆತುತ್ತಾಗುವುದರಿಂದ ಶಿಫಾರಸ್ಸು ಮಾಡಿದ ಬೀಜೋಪಚಾರ ಜೊತೆಗೆ ಜೈವಿಕ ಗೊಬ್ಬರದ–ಸೂಕ್ಷ್ಮ ಜೀವಿಗಳ ಒಕ್ಕೂಟ ಎಕರೆಗೆ 2 ಕಿ.ಜಿ. ಬಳಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ ಪಿ.ಆರ್., ವಿಸ್ತರಣಾ ಮುಂದಾಳು, ಮೊ.ನಂ.: 9900145705) ಸಂಪರ್ಕಿಸಬಹುದು.
Total Views: 0
Share This Article