ಬಾಲಚಂದ್ರನ್ ಎಸ್. ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೊಪ್ಪಳ ತಾ.ಪಂ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

H.Mallikarjun
H.Mallikarjun - Kalyanasiri
4 Min Read
Progress review meeting of Koppal Taluk Panchayat guarantee schemes held under the chairmanship of Balachandran S.
ಬಾಲಚಂದ್ರನ್ ಎಸ್. ರವರ ಅಧ್ಯಕ್ಷತೆಯಲ್ಲಿ ಜರುಗಿದ
ಕೊಪ್ಪಳ ತಾ.ಪಂ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕೊಪ್ಪಳ ಜುಲೈ 28 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನಿಸಲು ಕೊಪ್ಪಳ ತಾಲೂಕ ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ಬಾಲಚಂದ್ರನ್ ಎಸ್ ರವರ ಅಧ್ಯಕ್ಷತೆಯಲ್ಲಿ ಸೋಮವಾರ (ಜು. 27ರಂದು) ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಜರುಗಿತು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೇ-2026ರವರೆಗೆ ಅನುದಾನ ಜಮೆಯಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಸಭೆಯಲ್ಲಿ ಗಮನಕ್ಕೆ ತಂದರು.
ಐಟಿ&ಜಿಎಸ್‌ಟಿ ಹೊಂದಿದ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ನೀಡಲು ಅವಕಾಶವಿರುವದಿಲ್ಲ. ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ ಈ ಹಿಂದೆ 02 ವರ್ಷದಿಂದ ಸೌಲಭ್ಯ ಪಡೆದಿರುವವರು ಪ್ರಸ್ತುತ ಐಟಿ&ಜಿಎಸ್‌ಟಿ ನೊಂದಣಿಯಾಗಿರುತ್ತದೆ ಇದಕ್ಕೆ ಏನು ಪರಿಹಾರ ಎಂಬುದರ ಕುರಿತು ಇಲಾಖಾಧಿಕಾರಿಗಳಿಗೆ ಪ್ರಶ್ನಿಸಿದರು.
ಅಧಿಕಾರಿಗಳು ಈ ಬಗ್ಗೆ ಸರ್ಕಾರದಿಂದ ಫಲಾನುಭವಿಗಳ ಅರ್ಜಿಯ ವಿವರಗಳನ್ನು ಪರಿಶೋಧನೆ ಕೈಗೊಂಡು ವರದಿ ಸಲ್ಲಿಸುತ್ತಾರೆ. ಆದ್ದರಿಂದ ಅನುದಾನ ಸ್ಥಗಿತಗೊಳ್ಳುವದು. ಈ ಹಿಂದೆ ಇದ್ದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸರ್ವೆ ಕಾರ್ಯ ಪ್ರಾರಂಭವಾಗಿರುವದಿಲ್ಲ ಈ ಬಗ್ಗೆ ಸುತ್ತೋಲೆ ಬಂದಿರುವದಿಲ್ಲವೆಂದು ಸಭೆಯಲ್ಲಿ ಮಾಹಿತಿ ನೀಡಿದರು. ಮರಣ ಹೊಂದಿದ ಫಲಾನುಭವಿಗಳು ಕೊಪ್ಪಳ ತಾಲೂಕಿನಲ್ಲಿ 1913 ಇದ್ದು ಮರಣ ಹೊಂದಿದ ಫಲಾನುಭವಿಗಳ ವಿವರವನ್ನು ಅಪಡೇಟ್ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯತಿವಾರು ಫಲಾನುಭವಿಗಳ ಮಾಹಿತಿಯನ್ನು ನೀಡುವಂತೆ ಸಭೆಯ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ ಯೋಜನೆಯ ಪರಿಶೀಲನಾ ಸರ್ವೆ ಕಾರ್ಯ ಪ್ರಾರಂಭವಾಗಿದ್ದು ಕೊಪ್ಪಳ ತಾಲೂಕಿನಲ್ಲಿ 56243 ಫಲಾನುಭವಿಗಳಿದ್ದು ಇಲ್ಲಿಯವರೆಗೆ ಶೇ.40%ರಷ್ಟು ಫಲಾನುಭವಿಗಳ ವಿವರ ಪರಿಶೀಲನಾ ಸರ್ವೆ ಕಾರ್ಯವನ್ನು ಮುಕ್ತಾಯೊಗೊಳಿಸಲಾಗಿರುತ್ತದೆ. ಮುಂದಿನ ತಿಂಗಳಿನಲ್ಲಿ ಮುಕ್ತಾಯೊಗೊಳಿಸಲಾಗುವ ಕುರಿತು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಸದಸ್ಯರಾದ ಅನ್ನದಾನಸ್ವಾಮಿ ಮಾತನಾಡಿ ಬೆಟಗೇರಿ ಗ್ರಾಮದಲ್ಲಿ ಲೊಡ್ ಶೆಡಿಂಗ್ ಆಗುತ್ತಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
ನೇಲೋಗಿಪುರ ಗ್ರಾಮದಲ್ಲಿ ಹೊಸದಾಗಿ ಉಪ ವಿದ್ಯುತ್ ವಿತರಣಾ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಜೆಸ್ಕಾಂ ಅಧಿಕಾರಿಗಳು ಎಂದರು.
ಗ್ರಾಮವಾರುವಾರು ಗೃಹಜ್ಯೋತಿ ಫಲಾನುಭವಿಗಳ ಮಾಹಿತಿಯನ್ನು ನೀಡುವಂತೆ ಸಭೆಯ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಮಟ್ಟದಲ್ಲಿ ಗ್ರಾಮವಾರು ಮಾಹಿತಿ ಲಭ್ಯವಿದ್ದು, ನಗರದ ಪ್ರದೇಶಗಳಲ್ಲಿ ಮೀಟರ್ ರೀಡರ್ ಪ್ರಕಾರ ಮಾಹಿತಿ ಲಬ್ಯವಿರುತ್ತದೆ ಮಾಹಿತಿ ಸಲ್ಲಿಸಲಾಗುವದು ಎಂದರು.
ಗೃಹಜ್ಯೋತಿ ಅರ್ಜಿ ಪರಿಶೀಲನೆಗೆ ಮೀಟರ್ ರೀಡರಗಳು ಮನೆ ಮನೆಗೆ ಹೋಗಿ ಸರ್ವೆ ಮಾಡುವಂತೆ ಹಾಗು ಸ್ಥಳೀಯ ಇರುವ ಸದಸ್ಯರಿಗೆ ಮಾಹಿತಿ ನೀಡಿ ಕಾರ್ಯನಿರ್ವಹಿಸುವಂತೆ ಸದಸ್ಯರಾದ ಮಾನ್ವಿ ಪಾಶಾ ಸಭೆಯ ಗಮನ ಸೆಳೆದರು.
ಕೇಂದ್ರ ಸರ್ಕಾರದ ಕಾರ್ಡುಗಳಿಗೆ 01 ರಿಂದ 03 ಸದಸ್ಯರಿಗೆ 21 ಕೆಜಿ ಜೋಳ, 14 ಕೆಜಿ ಅಕ್ಕಿ ಹೆಚ್ಚುವರಿ ಸದಸ್ಯರಿಗೆ 5 ಕೆಜಿ ಅಕ್ಕಿ ಪಡಿತರ ವಿತರಣೆ ಮಾಡಲಾಗುವದು. ರಾಜ್ಯ ಸರ್ಕಾರದ ಕಾರ್ಡುಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ. ತಿದುಪಡಿ ಮತ್ತು ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಕಾರ್ಡ ವಿತರಣೆ ಮಾಡಲಾಗುವದು ಎಂದು ಅಧಿಕಾರಿಗಳು ವಿವರಿಸಿದರು.
ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ ಸರ್ಕಾರದಿಂದ ಪಡಿತರ ವಿತರಣೆಗೆ ಸಮಯ ನಿಗದಿಪಡಿಸಿದ್ದು ಈ ಬಗ್ಗೆ ಕ್ರಮವಹಿಸಿದ ಬಗ್ಗೆ ಅಧಿಕಾರಿಗಳಿಗೆ ಕೇಳಿದರು. ಈಗಾಗಲೇ ಸರ್ಕಾರದ ನಿರ್ದೇಶನದಂತೆ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಪಡಿತರ ವಿತರಣೆಗೆ ಸಮಯ ನಿಗದಿಪಡಿಸಿದ್ದು ಅದರಂತೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಅಧಿಕಾರಿಗಳು ವಿವರಿಸಿದರು.
ಸದಸ್ಯರಾದ ಮಾನ್ವಿ ಪಾಶಾ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸಂದರ್ಶನ ಪುಸ್ತಕ ಕಡ್ಡಾಯವಾಗಿ ನಿರ್ವಹಿಸುವದು ಹಾಗು ಅಧಿಕಾರಿಗಳು ಪರಿಶೀಲನೆ ಕೈಗೊಂಡಿರುವ ಬಗ್ಗೆ ಪೊಟೊ ಗ್ರುಪ್ ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದರು.
ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ ಕೊಪ್ಪಳದಿಂದ ಹುಲಿಗಿ ಗ್ರಾಮಕ್ಕೆ ಪ್ರಯಾಣಿಸುವ ಬಸ್‌ಗಳು ಹುಲಿಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ನಿಲುಗಡೆ ಮಾಡುತ್ತಿದ್ದು ಇದರಿಂದ ಪ್ರಯಾಣಿಕರಿಗೆ ದೇವಸ್ಥಾನಕ್ಕೆ ತಲುಪಲು ದೂರವಾಗುತ್ತಿರುವದರಿಂದ ಈ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.
ಜಾತ್ರೆ ಮತ್ತು ಹುಣ್ಣಿಮೆ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ನಿರ್ದೇಶನಂತೆ ಸರ್ಕಾರಿ ಆಸ್ಪತ್ರೆ ನಿಲುಗಡೆ ಮಾಡುತ್ತಿದ್ದು ಉಳಿದ ದಿನಗಳಲ್ಲಿ ಗ್ರಾಮದ ಚನ್ನಮ್ಮ ಸರ್ಕಲ್ ಹತ್ತಿರ ನಿಲುಗಡೆ ಮಾಡಲಾಗುವ ಕುರಿತು ಅಧಿಕಾರಿಗಳು ವಿವರಿಸಿದರು.
ಕೊಪ್ಪಳದಿಂದ ಸಂಚರಿಸುವ ರಾಣೆಬೆನ್ನೂರು ಬಸ್ ಬೆಟಗೇರಿ ಮಾರ್ಗವಾಗಿ ಸಂಚರಿಸುವAತೆ ಕ್ರಮವಹಿಸಲು ಸದಸ್ಯರಾದ ಅನ್ನದಾನಸ್ವಾಮಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ವಿವರಿಸಿದರು. ಸದಸ್ಯರಾದ ಮೆಹಬೂಬ ಪಾಶಾ ಮಾತನಾಡಿ ವಾಹನಗಳಲ್ಲಿ ಮತ್ತು ಶೌಚಾಲುಯಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸಂಬAಧಿಸಿದವರಿಗೆ ನಿರ್ದೇಶನ ನೀಡುವಂತೆ ತಿಳಿಸಿದರು.
ಸದಸ್ಯರಾದ ದೇವರಾಜ ನಡುವಲಮನಿ ಮಾತನಾಡಿ ಯುವ ನಿಧಿ ಯೋಜನೆಯ ಮಾಹಿತಿಯುಳ್ಳ ಬ್ಯಾನರ್ ಮೂಲಕ ಪ್ರಚಾರ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪದವಿ ಕಾಲೇಜಿನಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಸದಸ್ಯರಾದ ಜ್ಯೋತಿ ಗೊಂಡಬಾಳ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಲಮನಿ, ರಾಮಣ್ಣ ಚೌಡ್ಕಿ, ಸವಿತಾ ಗೊರಂಟ್ಲಿ, ಪರಶುರಾಮ ಕೊರವರ, ಮೆಹಬೂಬ ಪಾಶಾ, ಅನ್ನದಾನಯ್ಯಸ್ವಾಮಿ, ಜ್ಯೋತಿ ಗೊಂಡಬಾಳ, ಲಕ್ಷ್ಮಣ ಡೊಳ್ಳಿನ ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.
Total Views: 1
Share This Article