ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ತೆರೆದರು. ಆದರೂ ಖಾಸಗಿ ಮೆಡಿಕಲ್ ಗಳ ಸಂಖ್ಯೆ ಕಡಿಮೆಯಾಗಲೇ ಇಲ್ಲ. ಕಾರಣವೇನು?

The central government opened public medicine centers. Even so, the number of private medicals hasn’t decreased. What’s the reason?
ಜನೌಷಧದ ಅಂಗಡಿಗಳು ಪ್ರಾರಂಭ ಆದಾಗಿನಿಂದ ಅಲ್ಲಿ ಸಿಗುವಂತಹ ಔಷಧಿಗಳನ್ನು ನಾನು ಬೇರೆ ಕಡೆ ಕೊಂಡುಕೊಳ್ಳುವುದೇ ಇಲ್ಲ.
ರಕ್ತದೊತ್ತಡಕ್ಕೆ ಒಂದೇ ಔಷಧಿಯನ್ನು ಹೆಚ್ಚು ಕಾಲ ರಿಪೀಟ್ ಮಾಡಿದರೆ ಅದರ ಪರಿಣಾಮ ಕಡಿಮೆಯಾಗುತ್ತದೆ. ಜನೌಷಧವಾಗಲಿ, ಬೇರೆ ಕಂಪನಿಯ ಮಾತ್ರೆಯೇ ಆಗಲಿ. ಖಾಸಗಿ ಕಂಪನಿಯ ಮಾತ್ರೆ ತೆಗೆದುಕೊಳ್ಳುವವರೂ ಕೂಡಾ ಆಗಾಗ್ಗೆ ಮಾತ್ರೆ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕೆ ಜನೌಷಧವನ್ನು ದೂರುವುದು ಎಷ್ಟು ಸರಿ?
ಖಾಸಗಿ ಕಂಪನಿಯ ಮಾತ್ರೆ ಯನ್ನು ಬದಲಾವಣೆ ಮಾಡಬೇಕಾದಾಗಲೆಲ್ಲಾ ಮೊದಲನೇ ಕಂಪನಿಯನ್ನು ಯಾಕೆ ಹೀಗಳೆಯುವುದಿಲ್ಲ?
ಕೋಟ್ಯಂತರ ಜನರ ಬಿಪಿಗೆ ಒಂದೇ ಔಷಧಿ — ಖಾಸಗಿಯಾಗಲೀ, ಜನೌಷಧವಾಗಲೀ — ಸರಿಮಾಡುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಿದ್ದ ಮೇಲೆ ಗೂಬೆಯನ್ನು ಕೇವಲ ಜನೌಷಧದ ಮೇಲೆ ಕೂರಿಸುವುದು ಸರಿಯಲ್ಲ.
ನನ್ನ ಬಾಮೈದ ದಿನಾ ಎರಡು ಬಾರಿ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಆ ಔಷಧ ಜನೌಷಧದಲ್ಲಿ ಕೊಂಡುಕೊಳ್ಳುವುದರಿಂದ ತಿಂಗಳಿಗೆ ಎಷ್ಟೋ ಸಾವಿರ ಉಳಿತಾಯ ಆಗುತ್ತಿದೆ. ಅವರ ಸಕ್ಕರೆರೋಗದ ನಿಯಂತ್ರಣ ಚೆನ್ನಾಗಿಯೇ ಇದೆ.
ಎಷ್ಟೋ ಜನರು ಜನೌಷಧ ಕೊಂಡುಕೊಂಡರೆ ಘನತೆ ಕುಗ್ಗುತ್ತದೆ ಎಂಬ ಹುಂಬತನದಿಂದ ಪ್ರೈವೇಟ್ ಔಷಧಧ ಅಂಗಡಿಗೆ ಹೋಗುತ್ತಾರೆ.
ಕೋಟಿಗಟ್ಟಲೆ ಡೊನೇಷನ್ ಕೊಟ್ಟು ಡಾಕ್ಟರ್ ಆದವರು ಚೆನ್ನಾಗಿ ರೋಗ ಪತ್ತೆ ಹಚ್ಚಬಲ್ಲರಾ? ಹೆಚ್ಚಿನ ಡಾಕ್ಟರುಗಳು ರೋಗಿಗಳ ಮೇಲೆ ಟ್ರಯಲ್ ಅಂಡ್ ಎರರ್ ಪದ್ಧತಿಯಲ್ಲಿ ಟೆಸ್ಟ್ ಗಳನ್ನು ಮಾಡಿಸಿ ತರಾವರಿ ಔಷಧಿಗಳನ್ನು ಬರೆಯುತ್ತಾರೆ. ಅವೆಲ್ಲ ಎಷ್ಟು ಕೆಲಸ ಮಾಡುತ್ತವೋ ಗೊತ್ತಿಲ್ಲ. ಕೋಟಿ ಡೊನೇಷನ್ ಬಡ್ಡಿ ಸಹಿತ ವಾಪಸ್ ಪಡೆಯಬೇಕು ತಾನೇ! ಟೆಸ್ಟ್ ಮಾಡುವವರು ಮತ್ತು ಔಷಧಿ ತಯಾರಕರಿಂದ ಕಮಿಶನ್ ತೆಗೆದುಕೊಳ್ಳಬೇಡವೇ?
ಮೋದಿಯವರನ್ನು ನಾನು ಬೇರೆ ಯಾವ ವಿಷಯಕ್ಕೂ ಒಪ್ಪದಿದ್ದರೂ, ಜನೌಷಧದ ವಿಷಯದಲ್ಲಿ ಮಾತ್ರ ಅವರನ್ನು ಮೆಚ್ಚಲೇಬೇಕು!
ಈಗ ಪ್ರೈವೇಟ್ ಔಷಧದ ಕಂಪನಿಗಳೂ ಆನ್‌ಲೈನಿನಲ್ಲಿ 25%ವರೆಗೂ ರಿಯಾಯಿತಿ ಕೊಡುತ್ತಾರೆ. ಇದರ ಬಗ್ಗೆ ಎಲ್ಲಾ ಟಿವಿ ಚಾನಲುಗಳಲ್ಲಿ ಕೋಟ್ಯಂತರ ರೂಪಾಯಿಗಳ ಜಾಹೀರಾತು ಕೊಡುತ್ತಾರೆ. ಈ ರಿಯಾಯಿತಿ ಹುಟ್ಟಿಕೊಂಡಿದ್ದೇ ಬಹುಶಃ ಜನೌಷಧದ ಜನಪ್ರಿಯತೆಯಿಂದ!
ಯಾವ ಖಾಸಗಿ ಕಂಪನಿಯ ಔಷಧಿಗಳು ೧೦೦% ಗುಣ ಪಡಿಸುತ್ತವೆ? ಯಾರಾದರೂ ಹೇಳಿ!

