ರೋಟರಿ ಕ್ಲಬ್ ಕಿಷ್ಕಿಂದ ಗಂಗಾವತಿಯ ನೂತನ ಪದಾಧಿಕಾರಿಗಳ ಆಯ್ಕೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ರೋಟರಿ ಸಂಸ್ಥೆಯ ಕೊಡುಗೆ ಅನನ್ಯ. ಡಾ ಜಿ ಚಂದ್ರ

H.Mallikarjun
H.Mallikarjun - Kalyanasiri
3 Min Read

ರೋಟರಿ ಕ್ಲಬ್ ಕಿಷ್ಕಿಂದ ಗಂಗಾವತಿಯ ನೂತನ ಪದಾಧಿಕಾರಿಗಳ ಆಯ್ಕೆ.
ಸಮಾಜದ ವಿವಿಧ ಕ್ಷೇತ್ರಗಳಿಗೆ ರೋಟರಿ ಸಂಸ್ಥೆಯ ಕೊಡುಗೆ ಅನನ್ಯ. ಡಾ ಜಿ ಚಂದ್ರಪ್ಪ

ಜಾಹೀರಾತು

 

Selection of new office bearers of Rotary Club Kishkind in Gangavati. The Rotary organization’s contribution to various sectors of society is unique. Dr. G. Chandra

ಗಂಗಾವತಿ. ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಹಾಗೂ ಕೊಡುಗೆ ಅನನ್ಯವಾಗಿದೆ ಎಂದು ರೋಟರಿ ಸಂಸ್ಥೆ ದೇಶ ಸೇರದಂತೆ ಹೊರದೇಶಗಳಲ್ಲಿ ನಿಸ್ಸಾರ್ಥವಾಗಿ ಸೇವಾ ಮನೋಭಾವನೆಯಲ್ಲಿ ತೊಡಗಿದ್ದು ಸಮಾಜದ ವಿಧ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆಯ ಕಾರ್ಯ ಅನನ್ಯವಾಗಿದೆ ಎಂದು ಹಿರಿಯ ಹೃದಯ ರೋಗ ತಜ್ಞ ಡಾಕ್ಟರ್ ಜಿ ಚಂದ್ರಪ್ಪ ಹೇಳಿದರು.

 


ಅವರು ನಗರದ ಎಸ್ ಎಸ್ ಎಲ್ ಆರ್ ಫಂಕ್ಷನ್ ಹಾಲಿನಲ್ಲಿ ಜರುಗಿದ ರೋಗರಿ ಕ್ಲಬ್ ಕಿಷ್ಕಿಂದ ಗಂಗಾವತಿಯ 2026 ಹಾಗೂ 27ನೇ ಸಾಲಿನ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶ ಸೇರಿದಂತೆ ಹೊರದೇಶಗಳಲ್ಲಿ ಎರಡು ದೇಶಗಳನ್ನು ಹೊರತುಪಡಿಸಿ ಪೋಲಿಯೋ ಮುಕ್ತವನ್ನಾಗಿಸುವಲ್ಲಿ ಪಲ್ಸ್ ಪೋಲಿಯೋ ಲಸಿಕೆಯ ವೆಚ್ಚವನ್ನು ರೋಟರಿ ಸಂಸ್ಥೆ ವಹಿಸಿಕೊಂಡಿರುವುದು ಆ ಸಂಸ್ಥೆಯ ನಿಸ್ವಾರ್ಥ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಸಮಾಜಕ್ಕೆ ಅಗತ್ಯ ಇರುವ ಶಿಕ್ಷಣ ಆರೋಗ್ಯ ಧಾರ್ಮಿಕ ಸಾಮಾಜಿಕ ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಮಾನವನ ಸೇವೆ ನಿಜವಾದ ಸೇವೆ ಎಂದು ಬಲವಾಗಿ ನಂಬಿರುವ ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಪ್ರಶಾಂತ್ ಪರಧಿ ಹಾಗೂ ಕಾರ್ಯದರ್ಶಿ ಸತೀಶ್ ಬಯಾರಿ ಅವರಿಗೆ ಪದಗ್ರಹ ಹಾಗೂ ಪ್ರಮಾಣವಚನ ಬೋಧಿಸಿದ ಡಿಸ್ಟ್ರಿಕ್ಟ್ ಗೌರ್ನರ್ ಆರ. ಐ ಡಿ . ಆರ್ ಟಿ ಎನ್ ಪಿ ಎಚ್ ಎಫ್ ತ್ರಿವಿಕ್ರಮ ಜೋಶಿ ಮಾತನಾಡಿ. ಭತ್ತದ ಕಳೆದ ಒಂದು ಹೊಸ ಆಗಿರುವ ಗಂಗಾವತಿಯಲ್ಲಿ ಈಗಾಗಲೇ ಸೆಂಟ್ರಲ್ ರೋಟರಿ ಹಾಗೂ ರೋಟರಿ ಕ್ಲಬ್ ರೈಸ್ ಬೌಲ್ ಸಂಸ್ಥೆಯನ್ನು ಹೊಂದಿದ್ದು ಕಳೆದ ಮೂರು ತಿಂಗಳು ಈಗಷ್ಟೇ ರೋಟರಿ ಕ್ಲಬ್ ಕಿಷ್ಕಿಂದ ಎಂಬ ಯುವಕರ ತಂಡವನ್ನು ರಚಿಸಲಾಗಿದ್ದು ಜೂನ್ ತಿಂಗಳ ಕೊನೆಯವರೆಗೂ ಅಧಿಕಾರವನ್ನು ಹೊಂದಿದ ಈ ಹಿಂದಿನ ಅಧ್ಯಕ್ಷ ಸದಸ್ಯರುಗಳು ಜುಲೈ ತಿಂಗಳಲ್ಲಿ ನೂತನ ಪದಗ್ರಹಣ ಪದ್ಧತಿಯಂತೆ ಪ್ರಸ್ತುತ ಪದಗ್ರಹವನ್ನು ನಡೆಸಲಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ 14 ರಿಂದ 18 ವರ್ಷದ ಮಹಿಳೆಯರಿಗೆ ಕ್ಯಾನ್ಸರ್ ರೋಗ ಬಾರ್ದಂತೆ ಲಸಿಕ ಕಾರ್ಯಕ್ರಮ. ಪರಿಸರ ಸ್ವಚ್ಛತೆ.. ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸೇವಾ ಸಂಸ್ಥೆಯಾಗಿ ರೋಟರಿ ಕಾರ್ಯ ನಿರ್ವಹಿಸುತ್ತದೆ ಎಂದು ಕ್ಲಬ್ ಕುರಿತು ಆರಂಭ ದೇಶ ವಿದೇಶಗಳಲ್ಲಿನ ಸಮಗ್ರ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪ್ರಶಾಂತ ಪರಂಗಿ ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್ ಬಯಾರಿ ಅವರಿಗೆ ಹಾಗೂ ತಂಡದವರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ತಮ್ಮ ಗಮನಕ್ಕೆ ತಂದಿದ್ದೆ ಆದರೆ ತಾವು ಎಲ್ಲಾ ರೀತಿಯ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಘೋಷಿಸಿದರು. ವಾಣಿಜ್ಯೋದ್ಯಮಿ ಅಶೋಕ್ ಸ್ವಾಮಿ ಹೆರೂರ್ ಸಂತೋಷ್ ಕೆಲೋಜಿ. ಕಾರಣಾಂತರಗಳಿಂದ ತಡವಾಗಿ ಆಗಮಿಸಿದ ಆರ್ ಟಿ ಎನ್ ಪಿ ಎಚ್ ಎಫ್ ಕಮಲ ಗುಮಾಸ್ತೆ ಸೇರಿದಂತೆ ಮತ್ತೆ ತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ರೋಟರಿ ಸಂಸ್ಥೆಯ ಡಿಸ್ಟಿಕ್ ಗೌರ್ನರ್ ಹಾಗೂ ವಿಜಯನಗರ ಜೋನ್ ಉಪ ಗೌರ್ನರ್ ಕಮಲ ಗುಮಾಸ್ತೆ ಮತ್ತಿತರರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಮಹೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಬಸವರಾಜ ಕುಂಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಗೌರಪ್ಪ ಕಾರ್ಯಕ್ರಮವನ್ನು ಹಚ್ಚುಕಟ್ಟಾಗಿ ನಿರ್ವಹಿಸಿದರು.

Total Views: 1
Share This Article