
Chamarajanagar District In-charge Minister Venkatesh received a letter from his own party.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .

ವರದಿ: ಬಂಗಾರಪ್ಪ .ಸಿ.
ಹನೂರು :ಕ್ಷೇತ್ರಕ್ಕೆ ಆಗಮಿಸುವಾಗ ಸ್ಥಳಿಯ ನಾಯಕರುಗಳಿಗೆ ಮಾಹಿತಿ ತಿಳಿಸಿ ನಂತರ ಪ್ರವಾಸ ಕೈಗೊಂಡರೆ ಪಕ್ಷದ ಬಲವರ್ಧನೆ ಸಹಕಾರಿಯಾಗುತ್ತದೆ ಆದರೆ ಉಸ್ತುವಾರಿ ಸಚಿವರಾದ ಶ್ರೀ ಯುತ ವೆಂಕಟೇಶ್ ರವರು ನಮ್ಮ ನಾಯಕರಾದ ಆರ್ ನರೇಂದ್ರರವರ ಗಮನಕ್ಕೂ ಬಾರದೆ ಹಾಗೂ ಸ್ಥಳಿಯರಿಗೂ ಮಾಹಿತಿ ನೀಡದೆ ತಮ್ಮ ಮನಸ್ಸೊಇಚ್ಚೆ ಆಗಮಿಸುವುದರಿಂದ ಮುಂದಿನ ದಿನಗಳಲ್ಲಿ ನಡೆಯುವ ಸ್ಥಳಿಯ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ತಿಳಿಸಿದರು. ಚಾಮರಾಜನಗರ ಜಿಲ್ಲಾ ಅಧಿಕಾರಿಗಳು ಹಾಗೂ ಹನೂರು ಸ್ಥಳೀಯ ಶಾಸಕರಾದ ಎಮ್ ಆರ್ ಮಂಜುನಾಥ್ ರವರ ಜೋತೆಗೂಡಿ ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುವ ಸಮಯದಲ್ಲಿ ಸ್ವಪಕ್ಷೀಯರಿಂದಲೆ ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎದುರಾಗಿದೆ.
ಹನೂರು ತಾಲ್ಲೂಕು ಕೇಂದ್ರದಿಂದ ಪ್ರಯಾಣ ಮಾಡಿ ಕೌದಳ್ಳಿ ಗ್ರಾಮ ಪಂಚಾಯತಿ ಕಛೇರಿಯಲ್ಲಿಗೆ ಆಗಮಿಸುವಾಗ ಮಾರ್ಗಮದ್ಯೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸ್ಥಳೀಯ ಸಾರ್ವಜನಿಕರು ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಮಾತನಾಡಿದ ಸ್ಥಳೀಯ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವಾಜೀದ್ ಖಾನ್ ರವರು ಈಗಾಗಲೇ ನಮ್ಮ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ,ಸಾರ್ವಜನಿಕರಿಗೆ ಸಿಗಬೇಕಾದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳಿಯ ಆಡಳಿತಾಧಿಕಾರಿಗಳು ವಿಪಲವಾಗಿದ್ದಾರೆ , ಪಕ್ಷಾತಿತವಾಗಿ ಗ್ರಾಮಸ್ಥರು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಿಲ್ಲ , ನಮ್ಮ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ಆಗಮಿಸಿದಾಗ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ಸೌಜನ್ಯಕಾದರು ಮಾತನಾಡಿಸುವಷ್ಟು ಮಾನವಿಯತೆಯಿಲ್ಲದಿರುವುದು ಉಸ್ತುವಾರಿ ಸಚಿವರ ದುರ್ನಡತೆಗೆ ಬೇಸರತರಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರಾದ ವಿ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀರಂಗಶೆಟ್ಟರು ಮಾತನಾಡಿ ಪ್ರತಿ ಹಳ್ಳಿಯಲ್ಲಿಯು ನೀರಿನ ಅಭಾವದಿಂದ ಗ್ರಾಮಸ್ಥರು ಹಳ್ಳಿಗಳನ್ನು ತೊರೆದು ಗುಳೆ ಹೋರಟ್ಟಿದ್ದಾರೆ ನಮ್ಮ ಗ್ರಾಮದಲ್ಲಿ ಒಂದು ಬೋರ್ ಕೋರೆಯಿಸಿ ಒಂಬತ್ತು ತಿಂಗಳಾದರು ನೀರಿಲ್ಲ ಹೇಳುವವರು ಕೇಳುವವರಿಲ್ಲದಂತಾಗಿದೆ ಕ್ಷೇತ್ರ ನಮ್ಮದೆ ಪಕ್ಷದ ಸಚಿವರಾಗಿ ಮೂರು ಕಾಸಿಗೂ ಬೇಡವಾಗಿದ್ದಾರೆ ಕೇವಲ ಬಂದು ಹೋದ ಪುಟ್ಟನಂತೆ ಇವರು ಅಮವಾಸ್ಯೆ ಗೀರಾಕಿಯಾಗಿದ್ದಾರೆ ,ಕಾರ್ಯಕರ್ತರ ಕೆಲಸವಿರಲಿ ಕ್ಷೇತ್ರದ ಸಮಸ್ಯೆಗಳಿಗೆ ಜನಪ್ರತಿನಿದಿಗಳಾದವರು ಮಾಡಬೇಕು ,ಅದನ್ನು ಬಿಟ್ಟು ಬರಿ ಪ್ರಚಾರಕ್ಕೆ ಸಿಮಿತವಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಟಿಎಪಿಎಮ್ ಸಿ ಅಧ್ಯಕ್ಷರಾದ ಗೋವಿಂದರಾಜು ,ಮುಖಂಡರುಗಳಾದ ನವೀದ್ ಷರೀಫ್ , ಮಾರಕ್ಕ ,ನುಸ್ರುಲ್ ಬೇಗಂ, ಸುಕುರ್ ಬೇಗ ಸರ್ವರ್ ಪಾಷಸೇರಿದಂತೆ ಇಙ್ಇತರರು ಹಾಜರಿದ್ದರು.
