Protest by BJP Raita Morcha against anti-farmer state government
ಗಂಗಾವತಿ,8, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ನೇತ್ರತ್ವದಲ್ಲಿ ಶುಕ್ರವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು,, ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಹಿಂದೆ ಬಿಜೆಪಿ ನೇತೃತ್ವದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ಹಿಡಿದಿರುವುದು ಖಂಡನೀಯವಾಗಿದೆ ಎಂದು ಸರ್ಕಾರದ ವಿರುದ್ಧ ಗುಡಿಗಿದರು, ಭಾರತೀಯ ಜನತಾ ಪಕ್ಷದ ಬಳ್ಳಾರಿ ಉಸ್ತುವಾರಿ ವಿರುಪಾಕ್ಷಪ್ಪ ಸಿಂಗರ್ ಮಾತನಾಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು, ರೈತ ವಿರೋಧಿಯಾಗಿದೆ, ತಕ್ಷಣವೇ ಬರಗಾಲದ ಸಮಸ್ಯೆಯನ್ನು ರಾಜ್ಯ ಸರ್ಕಾರ ಯುದ್ಧೋಪ ಹಾದಿಯಲ್ಲಿ ಕ್ರಮಗಳನ್ನು ಅನುಸರಿಸಬೇಕು ಇಲ್ಲಿಯವರೆಗೆ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರಿಗೆ ಅಗತ್ಯ ಇರುವ, ರಸಗೊಬ್ಬರ ವಿದ್ಯುತ್ ಸೌಲಭ್ಯ, ಸೇರಿದಂತೆ ರೈತರಿಗೆ ಧೈರ್ಯ ತುಂಬುವುದರ ಜೊತೆಗೆ ಆರ್ಥಿಕ ಸದೃಢತೆಗೆ ಮುಂದಾಗಬೇಕು, ಎಂದು ತಿಳಿಸಿದರು, ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಚೆನ್ನಪ್ಪ ಮಳೆಗಿ, ವೀರಭದ್ರಪ್ಪ ಹನುಮಂತಪ್ಪ ನಾಯಕ್, ಮಾಜಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕಾಶೀನಾಥ್, ವೆಂಕಟೇಶ್ ಅಮರ ಜ್ಯೋತಿ ಇತರರು ಪಾಲ್ಗೊಂಡಿದ್ದರು ಬಳಿಕ ತಹಸೀಲ್ದಾರರ ಮೂಲಕರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು