ಗುರುಗಳ ಪಾದ ಪೂಜೆಯೊಂದಿಗೆ ಗುರುವಂದನ ಕಾರ್ಯಕ್ರಮ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Guru Vandana program with worship of the Guru's feet.




ಗುರುಗಳ ಪಾದ ಪೂಜೆಯೊಂದಿಗೆ ಗುರುವಂದನ ಕಾರ್ಯಕ್ರಮ.

ಜಾಹೀರಾತು

ಕಾರಟಗಿ: ತಾಲೂಕು ಬೂದುಗುಂಪ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಬಾಳ ಸಂಭ್ರಮದಿಂದ ಗುರುವಂದನ ಕಾರ್ಯಕ್ರಮವನ್ನು 2006-2007, ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ ಗುರುವಂದನ ಕಾರ್ಯಕ್ರಮವನ್ನು ನೆರವೇರಿಸಿದರು, ಶಿಕ್ಷಣದಿಂದ ವಿದ್ಯಾರ್ಥಿಗಳ ಬಾಳನ್ನೇ ಬೆಳಗಿಸಿದ ಶಿಕ್ಷಕರಿಗೆ ದೀಪ ಬೆಳಗಿಸುವ ಮೂಲಕ ಶ್ರೀ ಭೀಮೇಶ ತಾತನವರು ದೀಪ ಬೆಳಗಿಸಿರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಶ್ರೀ ಸಿದ್ದೇಶ್ವರ ಸ್ವಾಮಿಗಳು ಕೊಟ್ಟೂರೇಶ್ವರ ಮಠ ಬೂದಗುಂಪ ಇವರ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು,ನಂತರ ಶ್ರೀಗಳು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’
ಸದ್ಯ ಹೆಚ್ಚಿನ ಜನರ ದೈನಂದಿನ ಜೀವನವು ಗಡಿಬಿಡಿ ಮತ್ತು ತೊಂದರೆಗಳಿಂದ ಸುತ್ತುವರೆದಿದೆ. ಜೀವನದಲ್ಲಿ ಮನಃಶಾಂತಿ ಮತ್ತು ಆನಂದವನ್ನು ಪಡೆಯಲು ಯಾವ ಸಾಧನೆಯನ್ನು ಮಾಡಬೇಕು ಮತ್ತು ನಿರ್ದಿಷ್ಟವಾಗಿ ಹೇಗೆ ಮಾಡಬೇಕು ಎಂಬುದರ ಯಥಾರ್ಥ ಜ್ಞಾನವನ್ನು ಕೊಡುವವರೇ ಗುರುಗಳು ! ಇಂದು ಸಮಾಜ ಮಾತ್ರ ಗುರುಗಳ ಮಹತ್ವವನ್ನು ಮರೆಯುತ್ತಾ ಹೋಗುತ್ತಿದೆ. ಈ ಗ್ರಂಥದಲ್ಲಿ ವರ್ಣಿಸಿದ ಗುರು ಮಹಿಮೆಯನ್ನು ಓದಿ ಜಿಜ್ಞಾಸುಗಳಿಗೆ ಮತ್ತು ಸಾಧಕರಿಗೆ ಗುರುಗಳ ಬಗ್ಗೆ ಶ್ರದ್ದೆ ನಿರ್ಮಾಣವಾಗುವುದು.
ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವವು ಅಸಾಧಾರಣವಾಗಿದೆ; ಏಕೆಂದರೆ ಗುರುಗಳಿಲ್ಲದೇ ಅವನಿಗೆ ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಗುರುಗಳ ಭಕ್ತವತ್ಸಲ ರೂಪ, ದಯಾಳು ದೃಷ್ಟಿ, ಶಿಷ್ಯನ ಮೇಲೆ ಕೃಪೆ ಮಾಡುವ ಮಾಧ್ಯಮಗಳು ಮುಂತಾದ ಬೇರೆಬೇರೆ ಅಂಗಗಳಿಂದ ಶಿಷ್ಯನಿಗೆ ಗುರುಗಳ ಅಂತರಂಗದ ನಿಜವಾದ ದರ್ಶನವು ಈ ಗ್ರಂಥದಿಂದ ಆಗುವುದು. ಇದರಿಂದ ಗುರುಗಳ ಮೇಲಿನ ಶಿಷ್ಯನ ಭಕ್ತಿಯು ದೃಢವಾಗು ವುದು ಮತ್ತು ಅವನು ಗುರುಗಳ ಅಸ್ತಿತ್ವದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬಹುದು ಎಂದರು. ನಂತರ ಭೀಮೇಶ್ ತಾತನವರು ಮಾತನಾಡಿ ಮನೆಯಲ್ಲಿ ತಂದೆ ತಾಯಿ ಬಂಧು ಬಳಗದೊಂದಿಗೆ ಸಂಸ್ಕಾರ ಕೊಟ್ಟರೆ, ಶಿಕ್ಷಕರು ಜಗತ್ತಿನ ಶಿಕ್ಷಣದ ಸಂಸ್ಕಾರವನ್ನು ಕೊಡುತ್ತಾರೆ, ಶಿಕ್ಷಣದ ಸಂಸ್ಕಾರವೇ ವಿದ್ಯಾರ್ಥಿಯ ಜೀವನದ ಮೆಟ್ಟಲು, ಎಂದರು. ನಂತರದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾತನಾಡಿ ತಮ್ಮ ಕಲಿಕೆಯ ಜೀವನ ಮಟ್ಟವನ್ನು ಕಣ್ಮಣಿ ಸೆಳೆಯಂತೆ ಮಾಡಿತು. ವಿದ್ಯಾರ್ಥಿಗಳಿಂದ ಗುರುಗಳಿಗೆ ವಿಶೇಷತೆ, ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಪಾದ ಪೂಜೆ ಮಾಡುವುದರೊಂದಿಗೆ ವೇದಿಕೆಗೆ ಬಾಳ ಶೋಭೆ ನೀಡಿತು. ಗುರುಗಳಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಶಿಕ್ಷಕ, ಶಿಕ್ಷಕರಿಗೆ ಪಾದಪೂಜೆ ಕಾರ್ಯಕ್ರಮ ನೆರವೇರಿಸಿ ಶಿಕ್ಷಕ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದಂತ , ಬಸವರಾಜ ಕರಾಟೆ  ರಾಜಶೇಖರ್ , ರಾಮಚಂದ್ರಪ್ಪ ಚಿತ್ರಗಾರ , ರಾಮರಾವ್, ಕುಲಕರ್ಣಿ  ವೆಂಕಟೇಶ ದೇಸಾಯಿ , ಸೋಮಪ್ಪ, ಶ್ರೀಮತಿ ಮಂಜುಳ ಶ್ರೀಮತಿ ಪಾರ್ವತಿ ಭಂಡಾರಿ ಶ್ರೀಮತಿ ಜ್ಯೋತಿ ಎಲ್ಲಾ ಶಿಕ್ಷಕರನ್ನ ಗೌರವಿಸಿ ಸನ್ಮಾನಿಸಲಾಯಿತು. 2006-2007 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Total Views: 1
Share This Article