
DigiPay - Take advantage of the ATM facility

ಡಿಜಿಪೇ – ಎಟಿಎಂ ಸೌಲಭ್ಯ ಸದುಪಯೋಗ ಪಡೆದು ಕೊಳ್ಳಿ

ಯಲಬುರ್ಗಾ : ಪಟ್ಟಣದ ಸಿಎಸ್.ಸಿ ಕೇಂದ್ರದಲ್ಲಿ ಡಿಜಿಪೇ- ಎಟಿಎಂ ಬಗ್ಗೆ ಪ್ರಸ್ತಾವಿಕವಾಗಿ ಯೋಜನಾಧಿಕಾರಿ ಗಣೇಶ ನಾಯಕ ಅವರು ಮಾತನಾಡಿ, ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ ಇಲ್ಲಿ ಹಣ ಪಡೆಯಬಹುದು ಮತ್ತು ಒಂದುಬಾರಿಗೆ ಕನಿಷ್ಠ 10 ಸಾವಿರ ದವರೆಗೆ ಹಣ ಪಡೆಯುವ ಸೌಲಭ್ಯವಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜನಪರವಾದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ಮೂಲಕ ಉತ್ತಮ ಕಾರ್ಯನಿರ್ವಹಿಸುತ್ತಾ ಅದರ ಜೋತೆಗೆ ಡಿಜೆಪೇ- ಎಟಿಎಂ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ, ಶುಲ್ಕ ರಹಿತ ಸೇವೆ, ಈ ಕೇಂದ್ರದಲ್ಲಿ ಹಣ ಪಡೆಯಲು ಗ್ರಾಹಕರಿಂದ ಯಾವುದೇ ರೀತಿಯ ಕಮಿಷನ್ ಅಥವಾ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುವುದಿಲ್ಲ ಆದ್ದರಿಂದ ಇದು ಗ್ರಾಹಕರಿಗೆ ಉತ್ತಮ ಯೋಜನೆ ಇದಾಗಿದೆ ಇದರ ಸದುಯೋಗವನ್ನು ಪಡೆಸು ಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಡಿಜಿಪೇ- ಎಟಿಎಂ ಮೂಲಕ ಗ್ರಾಹಕರಿಗೆ ಹಣ ವಿತರಿಸಿಸಿ ಮಾತನಾಡಿದರು. ಈ ವೇಳೆ ಮೇಲ್ವಿಚಾರಕಿ ಕಾವ್ಯಶ್ರೀ, ನೋಡಲ್ ಅದಿಕಾರಿ ವಿಶಾಲ, ಕೃಷಿ ಅಧಿಕಾರಿ ಪ್ರಸನ್ನಕುಮಾರ , ಪ್ರಬಂಧಕ ಗೀರೀಶ ಹಾಗು ಸಿಎಸ್.ಸಿ ಕೇಂದ್ರದ ನಾಗಪ್ಪ ವಿ.ಎಲ್.ಇ , ಪ್ರೇಮಾ ವಿ.ಎಲ್.ಇ ಗ್ರಾಹಕರಾದ ಶಕುಂತಲಾ ನಲಗಿ, ವಿದ್ಯಾ ಬಂಡಿಹಾಳ ಹಾಗು ಸೇವಾ ಪ್ರತಿನಿಧಿಗಳಾದ ಮಲ್ಲಮ್ಮ, ಶೈಯಾನ್ ಸೇರಿದಂತೆ ಇತರರು ಇದ್ದರು.
