ಬೆಳ್ಳೂರು ಗ್ರಾಮದ ಸರ್ಕಾರಿ ಹಳ್ಳದಲ್ಲಿ ಅಕ್ರಮ ಮಣ್ಣು ಸಾಗಾಟ: ಕ್ರಮಕ್ಕೆ ಒತ್ತಾಯ

Mallikarjun
1 Min Read

Illegal soil transportation in government ditch in Bellur village: Action demanded




ಬೆಳ್ಳೂರು ಗ್ರಾಮದ ಸರ್ಕಾರಿ ಹಳ್ಳದಲ್ಲಿ ಅಕ್ರಮ ಮಣ್ಣು ಸಾಗಾಟ: ಕ್ರಮಕ್ಕೆ ಒತ್ತಾಯ

ಗಂಗಾವತಿ: ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಬೆಳ್ಳೂರು ಗ್ರಾಮದ ಸರ್ವೆ ನಂ. 188ರ ಪಕ್ಕದಲ್ಲಿರುವ ಸರ್ಕಾರಿ ಹಳ್ಳದಲ್ಲಿ ಕಪ್ಪು ಮಣ್ಣು ಮತ್ತು ಮರಂ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಭಾರತೀಯ ಪ್ರಜಾ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ ಆರೋಪಿಸಿದ್ದಾರೆ.

ಗಂಗಾವತಿ ನಗರದ ಮಂಥನ ಸಭಾಂಗಣದ ಮುಂಭಾಗದಲ್ಲಿ ಮಾತನಾಡಿದ ಅವರು, ಒಣ ಬಳ್ಳಾರಿ, ಗಿಣಿಗೇರ, ವಿಟ್ಲಾಪುರ್, ಗಡ್ಡಿ, ವೆಂಕಟಗಿರಿ ಮಾರ್ಗವಾಗಿ ದಾಸನಾಳ ಗ್ರಾಮದ ಇಟ್ಟಂಗಿ ಭಟ್ಟಿಗಳಿಗೆ ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ಗಂಗಾವತಿ ನಗರ ಠಾಣೆಯ ಡಿ.ವೈ.ಎಸ್.ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಕಪ್ಪು ಮಣ್ಣು ಮತ್ತು ಮರಂ ಸಾಗಾಟ ಮಾಡುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ಪ್ರಜಾ ಸೇನೆಯ ವಿಭಾಗೀಯ ಕಾರ್ಯದರ್ಶಿ ನರಸಿಂಹ, ಮರಿಯಪ್ಪ ಎಂ.ಡಿ. ಹೊಸಳ್ಳಿ, ಜಿಲ್ಲಾಧ್ಯಕ್ಷ ನಬೀರಸುಲ್, ಜಿಲ್ಲಾ ಉಪಾಧ್ಯಕ್ಷ ನರಸಿಂಹ ಹಿರೇಜಂತಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಅಯ್ಯಪ್ಪ, ಗಂಗಾವತಿ ತಾಲೂಕು ಅಧ್ಯಕ್ಷ ಪರಶುರಾಮ ಅಕ್ಕಿ ರೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Total Views: 0
Share This Article