Appeal to the taluk administration to ban POP Ganesha idols in the city and give appropriate order for making clay Ganesha idols.
ಗಂಗಾವತಿ: ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ) ಗಂಗಾವತಿ ತಾಲೂಕ ಘಟಕದಿಂದ ದಿನಾಂಕ: ೦೧.೦೯.೨೦೨೩ ರಂದು ಪಿ.ಓ.ಪಿ .{pop) ಗಣೇಶನ ಮೂರ್ತಿಯ ತಯಾರಿಕೆಯನ್ನು ನಿಷೇದಿಸಿ, ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಲು ಆದೇಶಿಸಬೇಕೆಂದು ತಹಶೀಲ್ದಾರರಿಗೆ ಇಂದು ಮನವಿ ಸಲ್ಲಿಸಲಾಯಿತು ಎಂದು ನಗರ ಘಟಕದ ಅಧ್ಯಕ್ಷರಾದ ಯಮನೂರ ಭಟ್ ಪ್ರಕಟಣೆಯಲ್ಲಿ ತಿಳಿಸಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಭಾರತದಲ್ಲಿ ಅನಾದಿ ಕಾಲದ ಸ್ವಾತಂತ್ರ ಪೂರ್ವದಿಂದಲೂ ದೇಶದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿಯಾಗಿ ಗಂಗಾವತಿ ನಗರದಲ್ಲಿ ಹಲವಾರು ವರ್ಷಗಳಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ನ್ಯಾಯಾಲಯ ಮಣ್ಣಿನ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಲು ಮಾಡಲು ಮಾತ್ರ ಅವಕಾಶ ನೀಡಿರುತ್ತದೆ. ಪಿ.ಓ.ಪಿ. (PಔP) ಗಣೇಶ ಮೂರ್ತಿಗೆ ನ್ಯಾಯಾಲಯವು ನಿಷೇಧಿಸಿರುತ್ತದೆ. ಆದರೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕೆಲವು ವ್ಯಾಪಾರ ಮತ್ತು ವ್ಯವಹಾರಸ್ಥರು, ತಮ್ಮ ಲಾಭಕ್ಕಾಗಿ ಬಹಳಷ್ಟು ಪಿ.ಓ.ಪಿ. pop ಗಣೇಶ ಮೂರ್ತಿಯನ್ನು ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಪಿ.ಓ.ಪಿ. (PಔP) ಗಣೇಶನ ಮೂರ್ತಿಯಲ್ಲಿ ಹಲವಾರು ರೀತಿಯ ಕೆಮಿಕಲ್ ಮಿಶ್ರಿತವಾಗಿರುತ್ತವೆ. ಸದರಿ ಗಣೇಶ ಮೂರ್ತಿಯನ್ನು ಹಬ್ಬ ಮುಗಿದ ನಂತರ ಇವುಗಳನ್ನು ನದಿ, ಕಾಲುವೆ ಅಥವಾ ಭಾವಿಗಳಲ್ಲಿ ಹಾಕುತ್ತಾರೆ. ಇದು ನೀರಿನಲ್ಲಿ ಬೇಗ ಕರಗದೇ ಹಾಗೂ ಇದರಲ್ಲಿರುವ ಕೆಲಸ ಕೆಮಿಕಲ್‌ನಿಂದ ನೀರಿನಲ್ಲಿನ ಜಲಚರ ಪ್ರಾಣಿಕಗಳು ಸಾವಿಗೀಡಾಗುತ್ತವೆ. ಅಲ್ಲದೇ ಇದೇ ನೀರನ್ನು ಮನುಷ್ಯರು ಕುಡಿದರೆ ಅವರ ಪ್ರಾಣಕ್ಕೂ ಅಪಾಯ ಉಂಟಾಗುವುದರ ಜೊತೆಗೆ ಪರಿಸರ ಮಾಲಿನ್ಯ ಹೆಚ್ಚಾಗಲಿದೆ. ನಗರದ ದುರ್ಗಮನಹಳ್ಳದ ಹತ್ತಿರ, ವಾ.ನಂ. ೨೧ ಮುರಹರಿ ನಗರ ಗಂಗಾದೇವಿ ದೇವಸ್ಥಾನದ ಹತ್ತಿರ ಮತ್ತು ಗುಂಡಮಕ್ಯಾAಪಿನಲ್ಲಿ ಎ.ಪಿ.ಎಂ.ಸಿ, ಹತ್ತಿರ ಹಾಗೂ ಇನ್ನಿತರ ಕಡೆಗಳಲ್ಲಿ ಪಿ.ಓ.ಪಿ. (PಔP) ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದು, ಇದನ್ನು ತಕ್ಷಣ ತಡೆಹಿಡಿದು ಮಣ್ಣಿನ ಗಣೇಶನ ಮೂರ್ತಿಯನ್ನು ಮಾಡಲು ತಿಳಿಸಬೇಕು ಮತ್ತು ನಗರದಲ್ಲಿ ಪಿ.ಓ.ಪಿ. (PಔP) ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದನ್ನು ರದ್ದುಗೊಳಿಸಲು ಸೂಕ್ತ ಕ್ರಮವಹಿಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯುವಘಟಕದ ಅಧ್ಯಕ್ಷರಾದ ಹುಲುಗಪ್ಪ ಕೊಜ್ಜಿ, ತಾಲೂಕು ಉಪಾಧ್ಯಕ್ಷರಾದ ಲಕ್ಷ್ಮಣ್ ಸಿಂಗ್, ತಾಲೂಕು ಸಂಚಾಲಕರಾದ ಪವನ್‌ಕುಮಾರ್ ಗಡ್ಡಿ, ಗೌಸ್, ಹರ್ಷ ಚಲುವಾದಿ, ಭಾಷಾಸಾಬ, ಸುನಿಲ್‌ಕುಮಾರ್ ಹಾಗೂ ಕರವೇ ಘಟಕದ ಪದಾಧಿಕಾರಿಗಳಾದ ಕೆ. ಶಶಿಕುಮಾರ್, ಸುರೇಶಕುಮಾರ, ನಾಗರಾಜ ಚಲುವಾದಿ, ನಾಗರಾಜ ಭಜಂತ್ರಿ, ಅಬ್ಬಾಸ್, ರಮೇಶಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.