ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” : ಏ. 5 ರಂದು ಡಾ. ವಿದ್ಯಾಭೂಷಣ್ ಸಂಗೀತ ಕಾರ್ಯಕ್ರಮ

Music for Service – Humanity through Music”: Dr. Vidyabhushan Music Program on April 5




ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” : ಏ. 5 ರಂದು ಡಾ. ವಿದ್ಯಾಭೂಷಣ್ ಸಂಗೀತ ಕಾರ್ಯಕ್ರಮ

ಬೆಂಗಳೂರು,ಮಾ.27: ಕ್ಯಾನ್ಸರ್, ಡಯಾಲಿಸಸ್ ರೋಗಿಗಳ ನೆರವಿಗಾಗಿ ಏ. 5ರಂದು ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಅವರಿಂದ
ವಿಶೇಷ ಶಾಸ್ತ್ರೀಯ ಸಂಗೀತ ಕಚೇರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

“ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಭಾನುವಾರ ಸಂಜೆ 5:30 ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಂಕಲ್ಪದಿಂದ ಸಮಾಜಮುಖಿ ಸೇವಾ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕ್ಯಾನ್ಸರ್ ಮತ್ತು ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳಿಗೆ ನೆರವು ಒದಗಿಸುವ ಉದ್ದೇಶ ಹೊಂದಿದೆ. ಸಂಗೀತ ಮತ್ತು ಸೇವೆಯನ್ನು ಒಂದಾಗಿಸುವ ಈ ವಿನೂತನ ಪ್ರಯತ್ನವು ಸಮಾಜದ ಸಹಾನುಭೂತಿ ಮತ್ತು ಸಹಕಾರವನ್ನು ಹೆಚ್ಚಿಸಲು ನೆರವಾಗಲಿದೆ. ಸಮಾಜದ ಒಳಿತಿಗಾಗಿ ನಡೆಯುತ್ತಿರುವ ಈ ಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಅಗತ್ಯವಿರುವವರಿಗೆ ನೆರವಾಗಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ: +91 99019 01339/ 9739991752 ಸಂಪರ್ಕಿಸಲು ಮನವಿ ಮಾಡಿದೆ.

Leave a Reply

Your email address will not be published. Required fields are marked *