
If teachers have the job of guarding dogs, does the Education Minister have the ministry of guarding dogs? Magalamani's question.
ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕವಾದರೆ,ಶಿಕ್ಷಣ ಸಚಿವರು ಶ್ವಾನ ಕಾಯುವ ಸಚಿವ ಖಾತೆ ಹೊಂದಿದ್ದಾರೆಯೇ ? ಮ್ಯಾಗಳಮನಿ ಪ್ರಶ್ನೆ.


ಗಂಗಾವತಿ,10: ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ ಶಾಲಾ ಆವರಣದಲ್ಲಿ ಬೀದಿ ನಾಯಿ ನಿಯಂತ್ರಿಸಲು ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಸೂಚನೆ ನೀಡಿರುವದನ್ನು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ.
ಸಚಿವರು ಕೂಡ ಶ್ವಾನ ಖಾತೆ ಹೊಂದಿದ್ದಾರೆಯೇ? ಎಂದು ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಶಾಲಾ ಆವರಣದಲ್ಲಿ ಏನೇ ಸಮಸ್ಯೆ ಯಾದರೂ ಶಿಕ್ಷಕರ ಜವಾಬ್ದಾರಿ ಯಾವಾಗಲೂ ಇದೆ. ಅದನ್ನು ಶಿಕ್ಷಕರು ಸರಿಯಾಗಿ ನಿಭಾಯಿಸುತ್ತಿದ್ದಾರೆ.ಈ ಆದೇಶ ಹೊರಡಿಸುವ ಅಗತ್ಯ ಇರಲಿಲ್ಲ.
ಬೀದಿ ನಾಯಿಗಳ ನಿಯಂತ್ರಿಸುವ ಕಾರ್ಯವನ್ನು ಸರ್ಕಾರ ರಚಿಸಿರುವ ಗ್ಯಾರಂಟಿ ಸಮಿತಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕೆಂದು ಒತ್ತಾಯಿಸಿದರು. ಶಿಕ್ಷಕರ ಕೊರತೆಯಿಂದ, ಮೂಲ ಸೌಕರ್ಯಗಳ ಕೊರತೆ, ಅನ್ಯ ಕೆಲಸಗಳ ಕಾರಣ ಗಳಿಂದ ಮಕ್ಕಳ ಕಲಿಕೆಯ ಮೇಲೆ ವ್ಯತೀರಿಕ್ತ ಪರಿಣಾಮದಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕ್ಷಿಣಿಸುತ್ತಾ ಸರ್ಕಾರಿ ಶಾಲೆಗಳು ಮುಚ್ಚಿವೆ ಇನ್ನೂ ಮುಚ್ಚುತ್ತಲಿವೆ ಇಂತಹ ಸಂದರ್ಭದಲ್ಲಿ ಅನವಶ್ಯಕ ಆದೇಶಗಳು ಶಿಕ್ಷಕರಿಗೆ ಮಾತ್ರವಲ್ಲ ಬಡ ವರ್ಗದ ಪಾಲಕರಿಗೂ ಆತಂಕ ಉಂಟುಮಾಡಿದೆ ಕೂಡಲೇ ಇದನ್ನು ವಾಪಸ್ ಪಡೆಯಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾತಿಯಾಗಲು ಸರ್ಕಾರ ರೂಪರೇಷಗಳನ್ನು ಮಾಡಬೇಕು ಹಾಗೂ ಹೊರಡಿಸಿದ ಆದೇಶ ಹಿಂಪಡೆಯದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವದೆ0ದು ಮ್ಯಾಗಳಮನಿ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ದುರಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ,ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್, ಹನುಮೇಶ್,ಹನುಮಂತಪ್ಪ ಮತ್ತಿತರರು ಇದ್ದರು.
