
Amareshwara Chariot Festival celebrated with great enthusiasm by the people of Lingadahalli
ಲಿಂಗದಹಳ್ಳಿ ಸಡಗರ ಸಂಭ್ರಮದಿಂದ ಜರಗಿದ ಅಮರೇಶ್ವರ ರಥೋತ್ಸವ

ಕುಷ್ಟಗಿ:ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ಸಂಜೆ 6:50 ಕ್ಕೆ ಸಡಗರ, ಸಂಭ್ರಮದಿಂದ ಜರಗಿತ್ತು.
ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಬೆಳ್ಳಗೆ ದೇವರ ಮೂರ್ತಿಗೆ ಹಾಲಿನ ಅಭಿಷೇಕ, ಎಲೆ ಚೆಟ್ಟು ಕಟ್ಟುವುದು ನಡೆಯಿತ್ತು ಹಾಗೂ ವಿವಿಧ ಗ್ರಾಮಗಳಿಂದ ಬಂದಿರುವ ಹಲವಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿದರು ಹಾಗೂ ಬೆಳ್ಳಗೆ 9:00 ಕ್ಕೆ ನೂರಾರು ಮಹಿಳೆಯರಿಂದ ಕುಂಭ, ಕಳಸ ಮೆರವಣಿಗೆ ನಡೆಯಿತು ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ನಡೆದವು.
ಅಂಕಲಿ ಮಠದ ನಿರುಪಾದೆಪ್ಪ ಅಪ್ಪನವರಿಂದ ಮದವೆಯಾದ ನವ ದಂಪತಿಗಳಿಗೆ ಮತ್ತು ಜಾತ್ರೆಗೆ ಬಂದ ಭಕ್ತರಿಗೆ ಆಶೀರ್ವದಿಸಿ ಪ್ರವಚನ ನೀಡಿದರು ಹಾಗೂ ಸಂಜೆ ಹೊಮ್ಮಿ ನಾಳ ಗ್ರಾಮದಿಂದ ರಥೋತ್ಸವ ಎಳೆಯಲು ಎತ್ತಿನ ಬಂಡಿಯಲ್ಲಿ ಮೇರವಣಿಗೆ ಮೂಲಕ ರಥೋತ್ಸವದ ತೇರಿನ ಅಗ್ಗ ಬಂದ ನಂತರ ಸಂಜೆ 6:50 ಕ್ಕೆ ಶ್ರೀ ಅಮರೇಶ್ವರ ದೇವರ ಮಹಾ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಜನಸಾಗರ ಮಧ್ಯ ವಿಜೃಂಭಣೆಯಿಂದ ಜರಗಿತ್ತು ರಥೋತ್ಸವಕ್ಕೆ ಹೊಮ್ಮಿನಾಳು,ಹೊನ್ನಗಡ್ಡಿ, ವಿರುಪಾಪುರ, ಗುಡ್ಡದ ಹನಮಸಾಗರ, ಗಾಣದಾಳ, ಗೌರಿಪುರ,ಇಲ್ಲಕಲ್ಲ,ಕೊಪ್ಪಳ,ತಾವರಗೇರ,ಹುಲಿಹೈದರ, ಲಾಯದುಣಿಸಿ ಗ್ರಾಮಗಳಿಂದ ಅನೇಕ ಭಕ್ತರು ಜಾತ್ರೆಯಲ್ಲಿ ಬಂದು ಶ್ರೀ ಅಮರೇಶ್ವರ ದೇವರ ಕೃಪೆಗೆ ಪಾತ್ರರಾದರು




