
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Missing person: Request for assistance in finding him/her

ಕೊಪ್ಪಳ ಫೆಬ್ರವರಿ 24, (ಕರ್ನಾಟಕ ವಾರ್ತೆ): ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪಾ ಗ್ರಾಮದ ನಿವಾಸಿ ಪರಸಪ್ಪ ಸತ್ಯಪ್ಪ ಗೌಂಡಿ ಎಂಬ 30 ವರ್ಷದ ವ್ಯಕ್ತಿಯು 2025 ರ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದು, ವಾಪಸ್ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕುಷ್ಟಗಿಯ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.222/2025 ಕಲಂ: ಮನುಷ್ಯ ಕಾಣೆ ಬಿಎನ್‌ಎಸ್–2023 ರ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ:
ವ್ಯಕ್ತಿಯು 4 ಅಡಿ ಎತ್ತರವಿದ್ದು, ದುಂಡು ಮುಖ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿಯ ಬಣ್ಣದ ಆಫ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ ಮತ್ತು ತೆಲುಗು (ವಡ್ಡರ ಭಾಷೆ) ಭಾಷೆಯನ್ನು ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕುಷ್ಟಗಿ ಪೊಲೀಸ್ ಠಾಣೆಗೆ ಮತ್ತು ಕೊಪ್ಪಳ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬಹುದು. ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರು: 08539-230111, ಗಂಗಾವತಿ ಡಿ.ಎಸ್.ಪಿ:9480803721, ಕುಷ್ಟಗಿ ಸಿ.ಪಿ.ಐ: 9480803732 ಹಾಗೂ ಕುಷ್ಟಗಿ ಪಿ.ಎಸ್.ಐ: 9480803757 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.
