
ಜಿವಿ ಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಡಿಟೋರಿಯಮ್ ಮತ್ತು ಗ್ರಂಥಾಲಯ ಕಟ್ಟಡಗಳಿಗೆ ಗುದ್ದಲಿಪೂಜೆ ನೆರವೆರಿಸಿದ ಶಾಸಕ ಎಮ್ ಆರ್ ಮಂಜುನಾಥ್
MLA M R Manjunath performed Gudali Puja for the auditorium and library buildings at GV Gowda First Grade College.

ವರದಿ : ಬಂಗಾರಪ್ಪ .ಸಿ.
ಹನೂರು :ಕಾಲೇಜು ಹಂತದಲ್ಲಿಯೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಮನೋಭಾವದಿಂದ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1.68 ಕೋಟಿ ರೂ ವೆಚ್ಚದಲ್ಲಿ ಆಡಿಟೋರಿಯಂ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಶಾಸಕರಾದ ಎಂ ಆರ್ ಮಂಜುನಾಥ್ ತಿಳಿಸಿದರು.
ಹನೂರು
ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಡಿಟೋರಿಯಂ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ತಾಲೂಕು ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ ಸುಸಜ್ಜಿತ ಕಟ್ಟಡ, ನುರಿತ ಶಿಕ್ಷಕರು, ಇದ್ದು ಗ್ರಾಮೀಣ ಭಾಗದ ಮಕ್ಕಳು ಇಲ್ಲಿಯೇ ವಿದ್ಯಾ ಭ್ಯಾಸ ಪಡೆದುಕೊಂಡು ಉತ್ತಮವಾದ ಅಂಕ ಗಳಿಸುವ ಮೂಲಕ ಒಳ್ಳೆಯ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ವ್ಯಕ್ತಿ ಗಳಾಗಬೇಕು ಎಂದರು.
ಮುಂದಿನದಿನಗಳಲ್ಲಿ ಕಾಲೇಜಿಗೆ
ಹೆಚ್ಚಿನ ದಾಖಲಾತಿಯಾಗಲಿ : ತಾಲೂಕು ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿಗೆ ಈಗಾಗಲೇ ಎಲ್ಲ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ್ದು, ಮಕ್ಕಳು ಹೆಚ್ಚಿನ ದಾಖಲಾತಿ ಪಡೆದುಕೊಳ್ಳಲು ಮುಂದಾಗಬೇಕಿದೆ. ಹಾಗಾಗಿ ಇಲ್ಲಿರುವ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡುವ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚು ಹೆಚ್ಚು ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳಿ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ : ಗುದ್ದಲಿ ಪೂಜೆಯ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆಗೆ ಮಾತು ಕತೆ ನಡೆಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಕ್ಕೆ ಸೀಮಿತವಾದರೆ ಸಾಲದು. ಪ್ರಸ್ತುತ ದಿನಮಾನಗಳಲ್ಲಿ ಪ್ರತಿನಿತ್ಯ ಸುದ್ದಿ ಪತ್ರಿಕೆಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ಜೊತೆಗೆ ಹೆಚ್ಚು ಹೆಚ್ಚು ಓದುವ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿ ಕೊಳ್ಳಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ನಿಮ್ಮ ಕನಸು ದೊಡ್ಡ ಪ್ರಮಾಣದಲ್ಲಿರಲಿ. ಆ ಕನಸು ನನಸು ಮಾಡಲು ಛಲ ಬಿಡದೆ ಓದುವ ಮೂಲಕ ನನಸು ಮಾಡಿಕೊಳ್ಳಲು ಮುಂದಾಗಬೇಕು. ಮತ್ತು ಪ್ರತಿಯೊಂದು ವಿಷಯದಲ್ಲೂ ಪ್ರಶ್ನಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಎಂದರು
ಇದಲ್ಲದೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಿಂದ ವೈಸಂಪಾಳ್ಯ ಗ್ರಾಮದವರಿಗೆ 85 ಲಕ್ಷ ರೂಗಳಲ್ಲಿ ಡಾಂಬರು ರಸ್ತೆ ನಿರ್ಮಾಣ ಹಾಗೂ ಹುಲಸುಗುಡ್ಡೆ ಮುಖ್ಯರಸ್ತೆಯಿಂದ ಕಣ್ಣೂರು ಗ್ರಾಮದ ವರಗೆ 1 ಕೋಟಿ ರೂ ಹಾಗೂ ಮಲೆ ಮಹದೇಶ್ವರ ಬೆಟ್ಟದಿಂದ ಸಿಂಗನಲ್ಲೂರು ಗ್ರಾಮಕ್ಕೆ ತಲುಪುವ ರಸ್ತೆಗೆ 1ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಇದೇ ಸಮಯದಲ್ಲಿ ಮಾಜಿ ಗ್ರಾಂ ಅಧ್ಯಕ್ಷರಾದ ಮಲ್ಲಯ್ಯ,ಮಹದೇವಸ್ವಾಮಿ, ಮುಖಂಡರು ಗಳಾದ ಮಲ್ಲೇಶಪ್ಪ,,ಮೂರ್ತಿ, ಮಹದೇವಪ್ಪ,ಕಾಲೇಜಿನ ಗ್ರಂಥ ಪಾಲಕ ಸುರೇಂದ್ರ, ಮುಖಂಡರಾದ ರಾಜುಗೌಡ,ನಟರಾಜು,ಮಹೇಶ್, ರಾಜಪ್ಪ, ಗೋವಿಂದ, ಚಿನ್ನರಾಜ್, ಮೈಕಲ್, ಗೋಪಾಲ್, ಕೊರೆಮಹದೇವಪ್ಪ,
ಮಂಜೇಶ್ ಗೌಡ,ನಂಜುಂಡಸ್ವಾಮಿ ಬೆಟ್ಟೇಗೌಡ,ಜಯರಾಮು,ವೆಂಕಟಾಚಲ,
ರಾಜಣ್ಣ,ಬಿ ಮಹಾದೇವ,ನಟರಾಜು,ಕುಳ್ಳೆಗೌಡ,ಲಿಂಗರಾಜು,
ಆನಂದ, ರಾಚಪ್ಪ, ಮಾದೇವ, ಸೇರಿದಂತೆ ಇನ್ನಿತರರು ಹಾಜರಿದ್ದರು.




