
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ ಆರ್ ಎಸ್ ಪಕ್ಷದ ರೈತ ಘಟಕದಿಂದ ತಹಶೀಲ್ದಾರರಿಗೆ ಆಗ್ರಹ.
The KRS party's farmer unit has appealed to the tehsildars to fulfill the various demands of the farmers.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕ ಸಮಿತಿ ನೇತೃತ್ವದಲ್ಲಿ ಇಂದು ದಿನಾಂಕ 11.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳ್ಳಕೆರೆ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಹಾಗೂ ಮಾನ್ಯ ಶಾಸಕರು ಚಳ್ಳಕೆರೆ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ಕಳೆದ ಒಂದು ವಾರಗಳಿಂದ #ರೈತಚೈತನ್ಯಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ತಾಲೂಕಿನ ನೂರಾರು ಹಳ್ಳಿಗಳ ಸಾವಿರಾರು ರೈತರು, ಕೃಷಿ ಕಾರ್ಮಿಕರು,ಮಹಿಳೆಯರು,ಯುವಕ-ಯುವತಿಯರು,ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಜೊತೆ ಸಂವಾದ ನಡೆಸಿ,ಇವರೆಲ್ಲರ ಕಷ್ಟ ನಷ್ಟಗಳನ್ನು,ಕುಂದು ಕೊರತೆಗಳನ್ನು ಆಲಿಸಿ ಅವರು ನೀಡಿದ ಹಲವಾರು ಸಮಸ್ಯೆಗಳ ಪಟ್ಟಿಯನ್ನು ಪರಿಹರಿಸಿ ತಾಲೂಕಿನ ಜನರಿಗೆ ಪಾರದರ್ಶಕ ಮತ್ತು ಉತ್ತಮ ಆಡಳಿತ ವ್ಯವಸ್ಥೆಯನ್ನು ಕಟ್ಟಿಕೊಟ್ಟು ತಾಲೂಕಿನ ಜನರ ಅಭಿವೃದ್ಧಿಗೆ ಶ್ರಮಿಸುವಂತೆ ಮಾನ್ಯ ತಹಶೀಲ್ದಾರರು ಚಳ್ಳಕೆರೆ ರವರಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ನಿರುಪಾದಿ ಕೆ ಗೋಮರ್ಸಿ ಅವರು ಮಾತನಾಡಿ ಚಳ್ಳಕೆರೆ ತಾಲೂಕಿನಲ್ಲಿ ರೈತರ,ಮಹಿಳೆಯರ, ಕೃಷಿ ಕಾರ್ಮಿಕರ,ಸಮಸ್ಯೆಗಳು ಬೆಟ್ಟದಷ್ಟು ಇದ್ದು ಇವುಗಳನ್ನು ಪರಿಹರಿಸುವ ಕೆಲಸ ಮಾಡಬೇಕಾಗಿದ್ದ ಕ್ಷೇತ್ರದ JCB ಪಕ್ಷಗಳ ಮುಖಂಡರು ಕೇವಲ ಚುನಾವಣಾ ಸಂಧರ್ಭದಲ್ಲಿ ಜನತೆಗೆ ನೂರಾರು ಸುಳ್ಳು ಪೊಳ್ಳು ಭರವಸೆಗಳನ್ನು ನೀಡಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ,ನಮ್ಮ ಪಕ್ಷವು ಯಾವುದೇ ಅಧಿಕಾರದಲ್ಲಿ ಇಲ್ಲದೆಯೂ ಸಹ ಜನ ಸಾಮಾನ್ಯರ ಧ್ವನಿಯಾಗಿ ಕಳೆದ ಆರು ವರ್ಷಗಳಿಂದ ನಿತ್ಯ,ನಿರಂತರವಾಗಿ ಇಡೀ ರಾಜ್ಯಾದ್ಯಂತ ಅನ್ಯಾಯ,ಅಕ್ರಮ,ಭ್ರಷ್ಟಾಚಾರಗಳ ಅಧಿಕಾರಿಗಳು ಜನ ಸಾಮಾನ್ಯರ ಮೇಲೆ ಮಾಡುವ ದಬ್ಬಾಳಿಕೆ,ದೌರ್ಜನ್ಯಗಳ ವಿರುದ್ಧ ಸದಾ ಹೋರಾಟವನ್ನು,ಅಭಿಯಾನಗಳನ್ನು,ಕಾರ್ಯಕ್ರಮಗಳನ್ನು ನಡೆಸುತ್ತಿದೆ ಇದು ಜನರ ಕಲ್ಯಾಣಕ್ಕಾಗಿ ಇರುವ ಪಕ್ಷವಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.ತಾಲೂಕಿನಲ್ಲಿ ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ನಿರಂತರ 7 ಗಂಟೆಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ಆಗಬೇಕು.ಎಲ್ಲಾ ಬೆಳೆಗಳಿಗೆ ಫಸಲ್ ಭೀಮ ವಿಮೆ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಆಗಬೇಕು ಮತ್ತು ರೈತನ ಬೆಳೆ ನಷ್ಟವಾದಾಗ ಸುಲಭ ಮತ್ತು ಸರಳವಾಗಿ ಬೇಳೆ ಪರಿಹಾರ ರೈತನಿಗೆ ದೊರೆಯಬೇಕು. ಬೆಳೆ ಸಮೀಕ್ಷೆ ಪ್ರಾಮಾಣಿಕವಾಗಿ ಆಗಬೇಕು. ಭದ್ರ ಮೇಲ್ದಂಡೆ ಕಾಮಗಾರಿಯನ್ನು ಶೀಘ್ರವಾಗಿ ಸಮರೋಪಾದಿಯಲ್ಲಿ ಮುಗಿಸಿ ರೈತರ ಕೃಷಿ ಜಮೀನಿಗೆ ನೀರು ನೀಡಬೇಕು.ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗುವ ಬಿತ್ತನೆ ಬೀಜ ಗೊಬ್ಬರ ಮತ್ತು ಕೃಷಿ ಉಪಕರಣಗಳು ಸುಲಭವಾಗಿ ದೊರೆಯಬೇಕು.ದಿನಾಂಕ 09.12.2025 ರಂದು ಪಕ್ಷದ ವತಿಯಿಂದ ಬೆಳಗಾವಿ ಅಧಿವೇಶನದ ಸಂಧರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಿದ 32 ಅಂಶಗಳನ್ನು ಶೀಘ್ರವಾಗಿ ಜಾರಿಗೆ ತರಬೇಕು.ಎಂದು ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಶ್ರೀ ಜೋಗನಹಳ್ಳಿ ಗುರುಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳಾದ ಶ್ರೀ ಕೆ ಎಸ್ ವೀರಭದ್ರಪ್ಪ, ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಶ್ರೀ ನಾಗರೆಡ್ಡಿ, ನಿರುಪಾದಿ ಕೆ ಗೋಮರ್ಸಿ,ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಶ್ರೀ ಮಹೇಶ್,ರಾಜ್ಯ SC ST ಘಟಕದ ಕಾರ್ಯದರ್ಶಿ ಶ್ರೀ ಮಾರುತಿ,ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರೇಖಾ, ಜಿಲ್ಲಾ ಮುಖಂಡ ಬಾಲರಾಜು ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಟ್ಟೆ ಬಸಪ್ಪ, ರೈತ ಘಟಕದ ಮುಖಂಡರಾದ ಬಳ್ಳಾರಿಯ ಜನಾರ್ಧನ ರೆಡ್ಡಿ, ತಿಪ್ಪೇಸ್ವಾಮಿ,ಮಂಡ್ಯ ಜಿಲ್ಲಾ ರೈತ ಘಟಕದ ಅಧ್ಯಕ್ಷರಾದ ಶ್ರೀ ಹರೀಶ್,ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಪಾಪಯ್ಯ,ತಾಲೂಕ ಕಾರ್ಯದರ್ಶಿಗಳಾದ ಶ್ರೀನಿವಾಸ,ಆಂಜನಪ್ಪ, ಮಂಜುನಾಥ BD, ಚಿತ್ತಯ್ಯ,ಜಭಿ ಉಲ್ಲ,ಚಳ್ಳಕೆರೆ ತಾಲೂಕು ಅಧ್ಯಕ್ಷರಾದ ಶ್ರೀ ಸಿದ್ದೇಶ್ ಮಹಿಳಾ ಮುಖಂಡರಾದ ಶ್ರೀಮತಿ ಲಲಿತಮ್ಮ,ಜ್ಯೋತಿ,ಸೇರಿದಂತೆ ನೂರಾರು ರೈತ ಮುಖಂಡರು,ಅನ್ನದಾತ ಬಂಧುಗಳು,ಮಹಿಳೆಯರು ಭಾಗವಹಿಸಿದ್ದರು.




