
ರಾಷ್ಟ್ರಮಟ್ಟದ ಸಿಎಂಎ ಪರೀಕ್ಷೆ: ನಂದಿನಿ .ವಿಗೆ 36 ನೇ ರ‍್ಯಾಂಕ್
National Level CMA Exam: Nandini V gets 36th rank

ಬೆಂಗಳೂರು; ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಂಎಐ)ದ ರಾಷ್ಟ್ರ ಮಟ್ಟದ ಸಿಎಂಎ ಪರೀಕ್ಷೆಯಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಜಿ.ಸಿ. ರಾವ್ ಅಕಾಡೆಮಿಯ ನಂದಿನಿ ವಿ. ಗೆ 36 ನೇ ರ‍್ಯಾಂಕ್ ಗಳಿಸಿದ್ದಾರೆ.
ಸಿಎಂಎ ಅಂತಿಮ ಫಲಿತಾಂಶ ಹೊರ ಹೊಮ್ಮಿದ್ದು, ಜಿ.ಸಿ. ರಾವ್ ಅಕಾಡೆಮಿಯ ನಂದಿನಿ ವಿ ಜೊತೆ ಮಂಜುನಾಥ್ ಎಚ್ ಕೆ, ಜಿ.ಎಂ. ರಾಜೇಶ್, ರಮ್ಯಾ , ಡಿ ಎ, ವಿನಯ್ ಕುಮಾರ್ ಜಿ.ವಿ., ರಾಜಿತ್ ಎನ್, ಶ್ರೀ ಲಕ್ಷ್ಮಿ ಎಚ್ ಹೆಗಡೆ, ಪೂರ್ಣಿಮಾ ಎಚ್ ಹಾಗೂ ಕಿರಣಾ ಎಸ್ ಭಟ್ ಅವರು ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ ಪದವಿಗೆ ಅರ್ಹತೆ ಪಡೆದಿದ್ದಾರೆ.
ಈ ಪ್ರಯತ್ನದಲ್ಲಿ ಅಕಾಡೆಮಿಯ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಗುಂಪುಗಳಲ್ಲಿ ಸಿಎಂಎ ಇಂಟರ್ ಹಾಗೂ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರೊಂದಿಗೆ ಸಿಎಂಎ ಇಂಟರ್ ಮತ್ತು ಫೈನಲ್ನಲ್ಲಿ ಅಕಾಡೆಮಿಯ ಒಟ್ಟು ಆಲ್ ಇಂಡಿಯಾ ಶ್ರೇ ಯಾಂಕಗಳ ಸಂಖ್ಯೆ 37ಕ್ಕೆ ಏರಿದೆ.
ಕಳೆದ 14 ವರ್ಷಗಳಿಂದ ಜಿ.ಸಿ. ರಾವ್ ಅಕಾಡೆಮಿ ರಾಜ್ಯದಲ್ಲಿ ಗುಣಮಟ್ಟದ ಸಿಎಂಎ ತರಬೇತಿ ನೀಡುತ್ತಾ ಬಂದಿದೆ. ನಗರದ ವಾಣಿಜ್ಯ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಪ್ರೇರೇಪಿಸುವ ಕಾರ್ಯದಲ್ಲಿ ನಿರತವಾಗಿದೆ ಜಿ.ಸಿ. ರಾವ್ ಅಕಾಡೆಮಿ. ನಿರ್ದೇಶಕರು ಸಿಎ ಸಿಎಂಎ ಜಿ.ಸಿ. ರಾವ್, ಸಂಪರ್ಕಿಸಬಹುದು 9741916916 / 8884695460 ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.




