ಬಯಲು ನಾಡಿನಲ್ಲಿ ಚಿರತೆ ಪ್ರತ್ಯಕ್ಷ..!?,, ರಾಮದುರ್ಗ ಅರಣ್ಯ ಇಲಾಖೆಯವರಿಂದ ಜನಜಾಗೃತಿ ಸಂದೇಶ ಹಾಗೂ ಪತ್ತೆ ಹಚ್ಚಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ.!
Leopard spotted in the plains..!?,,
ರಾಮದುರ್ಗ: ನಮ್ಮ ಬಯಲು ನಾಡಿಗೂ.. ಚಿರತೆ ಪ್ರವೇಶ..!! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಪಕ್ಕಾ ಬಯಲು ಸೀಮೆಯ ನಾಡು. ಆದರೆ ಜಿಲ್ಲೆಯಲ್ಲಿ ಖಾನಾಪುರ ಹೊರತುಪಡಿಸಿದರೆ ಹೆಚ್ಚು ಗುಡ್ಡಗಾಡು ಪ್ರದೇಶವಿದ್ದ ತಾಲೂಕು ಅಂದರೆ ರಾಮದುರ್ಗ ತಾಲೂಕು ಎನ್ನುವುದು ನಿಜ., ಆದರೂ ಈ ನಮ್ಮ ರಾಮದುರ್ಗ ತಾಲೂಕಿನ ಹುಲಿಗೊಪ್ಪ, ಮಾಗಾಣಿ.., ಗೊಣ್ಣಗರ, ಕೊಳಚಿ, ಡಿ. ಹೊಸೂರ (ತೋಟದ ಮನೆಗಳ ಸಮೂಹ) ಮತ್ತು ಈ ಗುಡ್ಡದ ಮತ್ತೊಂದು ಬದಿಗೆ ಇರುವ
ಊರುಗಳಾದ ಲಕ್ಕನಾಯ್ಕನಕೊಪ್ಪ, ಜಾಲಿಕಟ್ಟಿ, ಕಲ್ಲೂರ್, ಮುಳ್ಳೂರ ಹಾಗೂ ಸುರೇಬಾನ್ ಮತ್ತು ಘಟಕನೂರ ಗ್ರಾಮಗಳೂ ಈ ಬೆಟ್ಟಸಾಲಿಗೆ ಹೊಂದಿಕೊಂಡೆ ಇವೆ. ಈ ಎಲ್ಲಾ ಊರುಗಳ ಜನರು ಪಕ್ಕಾ ಬೆದರುವಂತೆ ಮಾಡಿದ್ದು ಇಲ್ಲಿಗೆ ಪ್ರವೇಶ ಮಾಡಿದೆ ಎಂದು ಸುದ್ದಿ ಆದ ಚಿರತೆಯ ವಿಷಯ.! ಕಾಡು ಪ್ರಾಣಿಗಳ ಕ್ರೂರ ಉಪಟಳದಿಂದ.. ನಮ್ಮ ಈ ನಾಡು ಸುರಕ್ಷಿತ ಅಂದುಕೊಂಡಿದ್ದ ನಮ್ಮ ಪ್ರದೇಶದ ಜನರು ಈಗ ಪಕ್ಕಾ ಹೆದರಿಕೊಂಡೇ ಬದುಕುವ೦ತಾಯಿತು.!,**ರಾಮದುರ್ಗ ತಾಲೂಕಿನ ಡಿ. ಹೊಸೂರ ಬೆಟ್ಟ ಪ್ರದೇಶದ ಕಡೆಗೆ ಆ ಚಿರತೆ ಹೇಗೆ ಬಂತು..!? ಎಂಬುದೇ.. ಸೋಜಿಗದ ಸಂಗತಿ..!!, ಜನರು ರಾಮದುರ್ಗದ ಅರಣ್ಯ ಇಲಾಖೆಯವರ ಚಿರತೆಯನ್ನು ಹಚ್ಚಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಲೇ ಇಲ್ಲಿನ ಜನರನ್ನು ಜಾಗೃತಗೊಳಿಸಿದ್ದಾರೆ. ಆದರೂ ಇದು ಗೊತ್ತಿಲ್ಲದ ಕೆಲ ಸಾರ್ವಜನಿಕರು ಅರಣ್ಯ ಇಲಾಖೆಯವರು ಬಂದೇ ಇಲ್ಲ ಎಂದು ತಿಳಿದುಕೊಂಡಿದ್ದಾರೆ. ರಾಮದುರ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳವರು.. ತಮ್ಮ ಕೈಲಾದ ಮಟ್ಟಿಗೆ ಸೂಕ್ತ ಕಾರ್ಯ ಮಾಡುತ್ತಿದ್ದಾರೆ. ಆದರೆ ಈಗ ಇಂಥಾ ಸಂದರ್ಭದಲ್ಲಿ ಈ ರಾಮದುರ್ಗ ಅರಣ್ಯ ಇಲಾಖೆಯ ಕಾರ್ಯಾಲಯದವರ ಶಕ್ತಿಯಾನುಸಾರ ಕಾರ್ಯ ಮಾಡುತ್ತ ಹೋದರೆ.. ಇದು ಜನರ ರಕ್ಷಣೆಯ ವಿಷಯದಲ್ಲಿ ಸಾಕಾಗಲಿಕ್ಕಿಲ್ಲ.!, ಕಾರಣ ರೈತರ, ಸಾರ್ವಜನಿಕರ ರಕ್ಷಣೆ, ಹಿತದೃಷ್ಟಿಯಿಂದ ಇನ್ನೂ ವಿಶೇಷ ಪದ್ದತಿಯ ಕಾರ್ಯಾಚರಣೆಯಿಂದ ಚಿರತೆ ಎಲ್ಲಿ ಅಡಗಿದೆ ಎಂಬುದನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ ಸೆರೆ ಹಿಡಿಯುವಂತಾಗಲಿ.. ಎಂಬುದು ಬಹುಪಾಲು ಜನರ ಧ್ವನಿ ಆಗಿದೆ. ಆದರೆ ರಾಮದುರ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳವರು ಈ ಕಾರ್ಯ ಮಾಡದೇ ಅಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಸುಳ್ಳು. ಅವರ ಕಾರ್ಯ ನಡೆದಿದೆ. ಅವಶ್ಯಕತೆ ಇದ್ದ ಕಡೆಗೆ ಕ್ಯಾಮರಾ ಅಳವಡಿಸಿದ್ದಾರೆ.. ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಏನೇ ಆಗಲಿ ನಮ್ಮ ಈ ಬಯಲು ನಾಡಿನ ಬಡ ರೈತರ ಬದುಕಿಗೆ ಯಾವುದೇ ರೀತಿಯ ತೊಂದರೆ.. ನೋವು ಆಗದಿರಲಿ.. ಮತ್ತು ಯಾವುದೇ ಅಧಿಕಾರಿಗಳ ಬಗ್ಗೆ ಯಾರಿಗೂ ಅಸಮಾಧಾನ ಬೇಡ ಎಂಬುದೇ ಒಂದು ವಿವೇಕದ ನುಡಿ.*
*~ಸೋಮಶೇಖರ್ ವೀ. ಸೊಗಲದ.*
*(ಮೌಲ್ಯಸಂಪದ ಬಳಗದ ಪರವಾಗಿ..)*
🌸🌸🌸🌸🌸🌸🌸
Kalyanasiri Kannada News Live 24×7 | News Karnataka