Breaking News

ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ

Youth Congress felicitates Congress President Jyoti Gondaba
ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ


Screenshot 2025 10 29 16 40 46 37 6012fa4d4ddec268fc5c7112cbb265e7136021057816507954 1024x360

ಕೊಪ್ಪಳ; ನೂತನವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಎಐಎಂಸಿಸಿ ಯಿಂದ ನೇಮಕಗೊಂಡ ಜ್ಯೋತಿ ಎಂ. ಗೊಂಡಬಾಳ ಅವರನ್ನು ನಗರದ ಡಿಸಿಸಿ ಕಛೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜ್ಯೋತಿ ಎಂ. ಗೊಂಡಬಾಳ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಎಲ್ಲಾ ಹಂತದಲ್ಲಿ ಬಲವರ್ಧನೆಗೊಳಿಸುವ ಕೆಲಸವನ್ನು ಎಲ್ಲಾ ಹಂತದ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಮಾಡಬೇಕಿದೆ. ಬೂತ ಹಂತದ ತರಬೇತಿ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಸಮರ್ಥ ಬಳಕೆ ಮಾಡುವದೂ ಸೇರಿದಂತೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಇಲಾಹಿ ಸಿಕಂದರ್, ಐವಾಯ್‌ಸಿ ಆಪ್ ಉಸ್ತುವಾರಿಗಳಾದ ಆಯೇಷಾ ಬಳ್ಳಾರಿ ಹಾಗೂ ಹುಸೇನ ಭಾಷ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಕಲ್ಗುಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕೊಪ್ಪಳ ತಾಲೂಕ ಅಧ್ಯಕ್ಷ ಸಂತೋಷ್ ಹೆಚ್. ಬೂದಿಹಾಳ, ಕುಷ್ಟಗಿ ತಾಲೂಕ ಅಧ್ಯಕ್ಷ ಈರಣ್ಣ ಬದಾಮಿ, ಗಂಗಾವತಿ ತಾಲೂಕ ಅಧ್ಯಕ್ಷ ರವಿ ಜೋಗದ ನಾಯಕ, ಕನಕಗಿರಿ ಬ್ಲಾಕ್ ಅಧ್ಯಕ್ಷ ದೇವರಾಜ ಕಟ್ಟಮನಿ, ಕುಷ್ಟಗಿ ಬ್ಲಾಕ್ ಅಧ್ಯಕ್ಷ ಅಯ್ಯಣ್ಣ ಹವಾಲ್ದಾರ್, ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ, ರಬೇಕಾ ಮುನಿರಾಬಾದ, ಶಿಲ್ಪಾ ಗುಡ್ಲಾನೂರು, ಜಿಲ್ಲಾ ಮಂಜುನಾಥ ವಾಯ ಕೆ, ಪರಶುರಾಮ ಮೆಕ್ಕಿ, ಲಕ್ಷ್ಮಣ, ನಾಗರಾಜ ಭಂಗಿ, ಹನುಮೇಶ ಬೆಣ್ಣಿ ಗುಳದಳ್ಳಿ, ಬೀರಪ್ಪ ಹಳೆಮನೆ, ಪರಶುರಾಮ ದೊಡ್ಡಮನಿ, ಯೂತ್ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು, ಪಕ್ಷದ ಕಾರ್ಯಕರ್ತ ಉಪಸ್ಥಿತಿರಿದ್ದರು.

ಜಾಹೀರಾತು

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.