Magalamani insists on entering Aadhaar number in Shakti Yojana.
ಗಂಗಾವತಿ :-29-ರಾಜ್ಯ ಸರಕಾರ ಮಹಿಳೆಯರು ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ತಂದಿದೆ. ಆಧಾರ್ ನಂಬರ್ ನಮೂದು ಮಾಡದೇ ಇರುವದರಿಂದ ಸಾರಿಗೆ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಆಗುವ ಸಾಧ್ಯತೆ ಇದೆ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ದಾಖಲೆಗಳನ್ನು ನಮೂದು ಮಾಡುತ್ತಾರೆ, ಪಡಿತರ, ವೃದ್ಯಾಪ್ ವೇತನ, ಅಂಗವಿಕಲ ವೇತನ, ವಿಧವಾ ವೇತನ, ವಿದ್ಯಾರ್ಥಿವೇತನ, ಪಡೆಯಲು ಹಾಗೂ ಬಸ್ ನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರ ಮತ್ತು ಅಂಗವಿಕಲರ ವಿನಾಯಿತಿ ಪಡೆಯುವಾಗ, ಆಧಾರ್ ನಂಬರ್ ನಮೂದಿಸಿತ್ತಾರೆ. ಆದರೆ ನೂರಾರು ಕಿಲೋಮೀಟರ್ ದೂರ ಪ್ರಯಾಣ ಮಾಡುವ ಕೋಟಿಗಟ್ಟಲೆ ಸರಕಾರ ಹಣ ಖರ್ಚು ಮಾಡುವ ಶಕ್ತಿ ಯೋಜನೆಯಲ್ಲಿ ಆಧಾರ್ ನಂಬರ್ ಯಾಕೇ ನಮೂದು ಮಾಡುತ್ತಿಲ್ಲ ಎಂದು ಮ್ಯಾಗಳಮನಿ ಸಾರಿಗೆ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಸರಕಾರಕ್ಕೆ ಅಪಾರ ನಷ್ಟ ಆಗುತ್ತಿದೆ ಅಲ್ಲದೇ ಬ್ರಷ್ಟಾಚಾರ ನಡೆಯುವ ಸಾಧ್ಯತೆ ಇರುವದರಿಂದ ಕೂಡಲೇ ಆಧಾರ್ ನಂಬರ್ ನಮೂದಿಸಲು ಕ್ರಮಕೈಗೊಳ್ಳಬೇಕೆಂದು ಸಾರಿಗೆ ಸಚಿವರನ್ನು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವದೆಂದು ಮ್ಯಾಗಳಮನಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ಪಂಪಾಪತಿ ಕುರಿ,ರಾಮಣ್ಣ ರುದ್ರಾಕ್ಷಿ,ಬಸವರಾಜ್ ನಾಯಕ, ಮಂಜುನಾಥ ಚನ್ನದಾಸರ, ನರಸಪ್ಪ, ಜಂಬಣ್ಣ ಶಿಂದೊಳ್ಳಿ, ಹುಲ್ಲೇಶ್, ಚಾoದಪಾಷಾ, ಮುತ್ತು, ಮತ್ತಿತರರು ಇದ್ದರು.