
Basavaraj Angadi calls for a successful pre-convention meeting and walk in Hirejanthal on the occasion of the birth anniversary of Hanagal Kumaraswamy

ಗಂಗಾವತಿ,09:ನಗರದಲ್ಲಿ ನಾಳೆಯಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತೋತ್ಸವ ಪ್ರಾರಂಭವಾಗಲಿದೆ. ಜಯಂತೋತ್ಸವ ನಿಮತ್ಯ ಪ್ರತಿನಿತ್ಯ ಒಂದೊಂದು ವಾರ್ಡನಲ್ಲಿ ನೂರಾರು ಸ್ವಾಮಿಗಳು ದುಶ್ಚಟ ಬಿಡಿಸುವ ಜಾಗೃತಿಯ ಪಾದಯಾತ್ರೆ ಹಮ್ಮಿಕೊಂಡಿರುವುದು ನಮಗೆಲ್ಲ ತಿಳಿದಿದೆ. ಈ ಪಾದಯಾತ್ರೆ ಹಿರೇಜಂತಕಲ್ ನಲ್ಲ ಗುರುವಾರ ನಡೆಯಲಿದ್ದು, ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಮಾಜ ಬಾಂಧವರು ಭಾಗವಯಿಹಿಸಿ ಯಶಸ್ವಿಗೊಳಿಸಬೇಕು ಎಂದು ಹಿರೇಜಂತಕಲ್ ವೀರಶೈವ ಸಮಾಜದ ಮುಖಂಡ ಬಸವರಾಜ ಅಂಗಡಿ ಕರೆ ನೀಡಿದರು.
ಮಂಗಳವಾರ ಹಿರೇಜಂತಕಲ್ ಶ್ರೀ ಪಂಪಾ ವಿರೂಪಾಕ್ಷೇಶ್ವ ದೇವಸ್ಥಾನದಲ್ಲಿ ಶ್ರೀ 158 ನೇ ಪೂಜ್ಯಶ್ರೀ ಲಿಂ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಜಯಂತಿ ಪ್ರಯುಕ್ತ ಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಯಂತೋತ್ಸವ ನಮ್ಮ ಗಂಗಾವತಿಯಲ್ಲಿ ಹಮ್ಮಿಕೊಂಡಿರುವುದು ನಮ್ಮ ಭಾಗ್ಯ. ಜಯಂತಿ ನಿಮಿತ್ಯ ಸ್ವಾಮಿಗಳು ಪಾದಯಾತ್ರೆ ನಮ್ಮ ಹಿರೇಜಂತಕಲ್ ನಲ್ಲಿ ಹಮ್ಮಿಕೊಂಡಿರುವುದು ನಮಗೆ ಸಂತಸವಾಗಿದೆ. ಈ ಪಾದಯಾತ್ರೆ ಐತಿಹಾಸಿಕವಾಗಿ ಯಶಸ್ವಿಗೋಳಿಸೋಣ ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಎಸ್.ಬಿ.ಹಿರೇಮಠ, ವಿನಯ ಪಾಟೀಲ್, ಬಸವರಾಜ ಕೋರಿಶೆಟ್ಟರ್, ಹುಚ್ಚಯ್ಯಸ್ವಾಮಿ ಹಾಲಿನಡೈರಿ, ಆದಯ್ಯಸ್ವಾಮಿ ಹಿರೇಮಠ, ವೀರಯ್ಯಸ್ವಾಮಿ, ಗವಿಸಿದ್ದಪ್ಪ ಆರಾಳ, ನಾಗರಾಜ, ಮಂಜುನಾಥ ಕುಂಬಾರ, ಹನುಮಂತಪ್ಪ ತಳಗೇರಿ, ಮಂಜುನಾಥ ಕೆಂಬಾವಿಮಠ, ಶಿವಯ್ಯಸ್ವಾಮಿ ಹಿರೇಮಠ, ಸಂತೋಷ, ಸೋಮಶೇಖರ್ ಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು

