Banu Mushtaq's inauguration of Dussehra festival is welcome: Bharadwaj

ಗಂಗಾವತಿ: ತಮ್ಮ ಪ್ರಗತಿಪರ ಬರಹದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಬೂಕರ್ ಪ್ರಶಸ್ತಿ ಪುರಸ್ಕೃತೆ ಭಾನು ಮುಷ್ತಾಕ್ ಅವರಿಂದ ದಸರಾ ಉತ್ಸವ ಉದ್ಘಾಟಿಸಲು ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಆದರೆ ಹಿಂದುತ್ವವಾದಿ ಮುನಿರತ್ನ ಸೇರಿದಂತೆ ಕೆಲವು ರಾಜಕೀಯ ಧುರೀಣರು ಭಾನು ಮುಷ್ತಾಕ್ ಅವರ ಬಗ್ಗೆ ಧರ್ಮಾಧಾರಿತ ಅವಹೇಳನಕಾರಿಯಾಗಿ ಮಾತನಾಡುತ್ತಾ, ಅವರು ಪ್ರಗತಿಪರರು, ಜಾತ್ಯಾತೀತವಾದಿಗಳು ಆಗಿದ್ದಲ್ಲಿ ಹಣೆಗೆ ಕುಂಕುಮ ಇಟ್ಟು, ಹೂವು ಮುಡಿದುಕೊಂಡು ದಸರಾ ಉತ್ಸವ ಉದ್ಘಾಟಿಸಲಿ ಎಂದು ಅವರ ಘನತೆಗೆ ಚ್ಯುತಿವುಂಟು ಮಾಡುವ ರೀತಿಯಲ್ಲಿ ಮಾತನಾಡುತ್ತಿರುವುದು ಬೇಸರ ತಂದಿದೆ.
ಸರ್ಕಾರ ಯಾವುದೇ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಭಾನು ಮುಷ್ತಾಕ್ ಅವರಿಂದಲೇ ದಸರಾ ಉತ್ಸವ ಉದ್ಘಾಟಿಸಲಿ ಎಂದು ಕ್ರಾಂತಿಚಕ್ರ ಬಳಗ ಸರ್ಕಾರಕ್ಕೆ ಆಗ್ರಹಿಸುತ್ತದೆ.