Three months after asphalting, work completed: Farmer leader outraged

ವರದಿ ಆರ್ ಚನ್ನಬಸವ ಮಾನ್ವಿ
ಗಂಗಾವತಿ : ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹೆಬ್ಬಾಳದಿಂದ ಅಂಜೂರು ಕ್ಯಾಂಪ್ ಗೆ ಹೋಗುವ ರಸ್ತೆ ಕಾಮಗಾರಿಯು 2023/24 ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಮಂಜೂರಿ ಆಗಿರುತ್ತದೆ ಸದರಿ ಈ ಕಾಮಗಾರಿಯು ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯಿತಿ ರಾಜ್ಯ ಇಂಜಿನಿಯರಿಂಗ್ ಉಪ ವಿಭಾಗ ಗಂಗಾವತಿ ಇಲಾಖೆ ವತಿಯಿಂದ ಕಾರ್ಯನಿರ್ವಹಿಸಿರುತ್ತಾರೆ. ಕಾರಣ ಡಾಂಬರೀಕರಣ ಆಗುವ ಮುಂಚಿತವಾಗಿ ರಸ್ತೆಯು ಸರಿಯಾಗಿ ಅರ್ಥ್ ವರ್ಕ್ ಮಾಡದೆ ಹಳೆಯ ರಸ್ತೆ ಡಾಂಬರೀಕರಣ ಮೇಲೆ ಡಾಂಬರೀಕರಣ ಹಾಕಿದ
ಕೇವಲ ಮೂರೇ ತಿಂಗಳಲ್ಲಿ ಕಿತ್ತಿ ಹೋಗಿ ಮೂರು ಬಟ್ಟೆಯಾಗಿದೆ ಇದರಲ್ಲಿ ತೀರಾ ಕಳಪೆ ಮಟ್ಟದ ಕಾಮಗಾರಿ ನಿರ್ವಹಿಸಿ ಅಧಿಕಾರಿಗಳು ಮತ್ತು ಗುತ್ತೇದಾರ್ ನ ಜೊತೆ ಶಾಮೀಲಾಗಿ ಸಂಪೂರ್ಣ ಕಾಮಗಾರಿ ಮಾಡಿದ್ದೇವೆ ಎಂದು ಕೊಟ್ಟೆ ದಾಖಲಾತಿ ಸೃಷ್ಟಿಸಿ ಸಂಪೂರ್ಣ ಬಿಲ್ ಎತ್ತುವಳಿ ಮಾಡಿರುತ್ತಾರೆ ಎಂದು ದೊಡ್ಡ ಬರಮಣ್ಣ ಜಿಲ್ಲಾಧ್ಯಕ್ಷರು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರೈತ ಸಂಘ ಕೊಪ್ಪಳ ಮತ್ತು ರೈತ ಮುಖಂಡರು .ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅವರು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿ.
ಕರ್ನಾಟಕ ಸರ್ಕಾರವು ಬಡವರ ಗೋಸ್ಕರ ರಸ್ತೆ ಅಭಿವೃದ್ಧಿ ಚರಂಡಿ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ಕೋಟ್ಯಾನು ಗಟ್ಟಲೆ ಹಣವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಬದಲಾವಣೆ ಆಗಬೇಕೆಂಬ ಉದ್ದೇಶ ಇಟ್ಟುಕೊಂಡು ಮಂಜೂರು ಮಾಡಿರುತ್ತಾರೆ. ಆದರೆ ಪಂಚಾಯಿತಿ ರಾಜ್ಯ ಇಂಜಿನಿಯರಿಂಗ್ ಉಪ ವಿಭಾಗ ಗಂಗಾವತಿ ಇಲಾಖೆಯವರು ಗುತ್ತೇದಾರ್ ನ ಜೊತೆ ಸೇರಿಕೊಂಡು ಇಂತಹ ಕಳಪೆ ಮಟ್ಟದಲ್ಲಿ ಕಾಮಗಾರಿ ನಿರ್ವಹಿಸ್ತಾರೆಂಬುದು ಯಾರಿಗೂ ಕೂಡ ತಿಳಿಯಲಿಲ್ಲ. ಎಇಇ ವಿಜಯಕುಮಾರ್ ಅವರು ನಮ್ಮ ತಾಲೂಕು ನವರು ಆಗಿರುವುದರಿಂದ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುತ್ತಾರೆಂಬದು ಎಲ್ಲರಲ್ಲಿಯೂ ಅವರ ಮೇಲೆ ಅಪಾರವಾದ ನಂಬಿಕೆ ಇತ್ತು ಆದರೆ ಇಂತಹ ಕಳಪೆ ಮಟ್ಟದ ಕಾಮಗಾರಿ ಮಾಡಿ ಕೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಸಂಪೂರ್ಣವಾಗಿ ಬಿಲ್ ಎತ್ತುವಳಿ ಮಾಡಿರೋದು ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ದರಿಂದ ಸದರಿ ಕಾಮಗಾರಿ ನಿರ್ವಹಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗುತ್ತೇದಾರ್ ನ ಲೈಸೆನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಪುನಃ ಈ ರಸ್ತೆಯನ್ನು ನಿರ್ಮಿಸಿ ಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ನಮ್ಮ ಕ್ಷೇತ್ರದ ಶಾಸಕರಾದ ಶಿವರಾಜ ತಂಗಡಗಿ ಅವರಿಗೆ ಈ ಪತ್ರಿಕೆ ಪ್ರಕಟನೆ ಮೂಲಕ ಒತ್ತಾಯಿಸುತ್ತೇವೆ. ಮತ್ತು ಕೂಡಲೆ ಆದಷ್ಟು ಬೇಗ ಸದರಿ ಕಾಮಗಾರಿಯನ್ನು ಪ್ರಾರಂಭ ಮಾಡಬೇಕೆಂದು ಹೇಳಿದರು. ಒಂದು ವೇಳೆ ಸದರಿ ಕಾಮಗಾರಿ ಪ್ರಾರಂಭ ಮಾಡದೆ ನಿರ್ಲಕ್ಷ್ಯ ಮಾಡಿದರೆ. ಮುಂದಿನ ದಿನಮಾನಗಳಲ್ಲಿ ಸಂಬಂಧಪಟ್ಟ ಇಲಾಖೆ ಮುಂದೆ ಎಲ್ಲಾ ರೈತ ಸಂಘಟನೆ ಸೇರಿಕೊಂಡು ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕೆ ಪ್ರಕಟನೆ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು