Breaking News

ಜ್ಯೋತಿ ಗೊಂಡಬಾಳಗೆ ಚೌಡ ಸಿರಿ ಪ್ರಶಸ್ತಿ ಪ್ರದಾನ

Jyoti Gondabala presented with the Chouda Siri Award

ಜಾಹೀರಾತು
jyothi award chowda siri 1

ಕೊಪ್ಪಳ: ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಇಲ್ಲಿನ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕಿ, ಸಮಾಜ ಸೇವಕಿ ಜ್ಯೋತಿ ಎಂ. ಗೊಂಡಬಾಳ ಅವರಿಗೆ ಚೌಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಲ್ಲಿನ ಶ್ರೀ ಚೌಡೇಶ್ವರಿ ಸೌಹಾರ್ಧ ಪತ್ತಿನ ಸಹಕಾರ ಸಂಘದ ವಾರ್ಷಿಕೋತ್ಸವ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಸಿದವರಿಗೆ ಚೌಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಂಗ್ರೆಸ್ ನಾಯಕಿಯೂ ಅಗಿರುವ ಜ್ಯೋತಿ ಗೊಂಡಬಾಳ ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು, ಮೌಢ್ಯವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ೨೦೦೫-೦೬ರಲ್ಲಿಯೇ ರಾಜ್ಯ ಯುವ ಪ್ರಶಸ್ತಿ ಪಡೆದ ಅವರು, ೨೦೨೪ ರಲ್ಲಿ ಮಾತೃಭೂಮಿ ರಾಷ್ಟಿçÃಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ತಮ್ಮ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ಗೊಮಡಬಾಳ, ಸಹಕಾರಿ ಸಂಘಗಳು ಸಾಮಾನ್ಯ ಜನರ ಜೀವನಾಡಿಯಾಗಿನ ಕೆಲಸ ಮಡುತ್ತಿದ್ದು, ಸಹಕಾರ ತತ್ವದಡಿ ರಾಷ್ಟಿçÃಕೃತ ಬ್ಯಾಂಕುಗಳ ಅಸಹಕಾಋದಿಂದ ನೊಂದವರಿಗೆ ಆಸರೆತಯಾಗಿದ್ದು, ಇಲ್ಲಿನ ಬಂಡವಾಳವನ್ನು ಇಲ್ಲೇ ದುಡಿಸಿ ಇಲ್ಲಿಯೇ ಅಭವೃದ್ಧಿ ಮಾಡುವ ಬ್ಯಾಂಕಿAಗ್ ಕ್ಷೇತ್ರವಾಗಿದೆ. ಅಲೆದಾಟವಿಲ್ಲದೇ ಸರಳವಾಗಿ ಜನರಿಗೆ ಸೇವೆ ನೀಡುತ್ತಿದ್ದು, ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ ಮತ್ತು ವಿಶ್ವಾಸರ್ಹತೆ ಉಳಿಸಿಕೊಂಡಿದ್ದಾರೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ರಾಬಕೋವಿ ನಿರ್ದೇಶಕ ಕೃಷ್ಣಾರಡ್ಡಿ ಗಲಿಬಿ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ತೋಟಪ್ಪ ಕಾಮನೂರ, ಚೌಡೇಶ್ವರಿ ಗ್ರೂಪ್ ಅಧ್ಯಕ್ಷ ಅಪ್ಪಣ್ಣ ಜೋಶಿ, ಸಹಕಾರಿ ಸಂಸ್ಥೆ ಅಧ್ಯಕ್ಷ ಸೋಮಲಿಂಗಪ್ಪ ಹುಡೇದ, ಮಾಜಿ ಜಿ. ಪಂ. ಸದಸ್ಯ ಗೂಳಪ್ಪ ಹಲಗೇರಿ, ಗವಿಶ್ರೀ ಚಿಟ್ಸ್ ಮುಖ್ಯಸ್ಥ ಶರಣಪ್ಪ ಸಜ್ಜನ್, ಸುರೇಶ ಬಳಗಾನೂರ, ಕೊಟ್ರೇಶ್ ಕೋರಗಲ್, ಮಾರುತಿ ಬಿಸರಳ್ಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದ್ರಿ, ವಕೀಲ ಡಿ.ಎಂ. ಪೂಜಾರ, ಮಲ್ಲನಗೌಡ ಕೋನನಗೌಡ್ರ, ಮಂಜುನಾಥ ತೋಟಗೇರ, ಕನಕಮೂರ್ತಿ ಚಲುವಾದಿ ಇತರರು ಇದ್ದರು.

About Mallikarjun

Check Also

ಭತ್ತದಲ್ಲಿ ದುಂಡಾಣು ಎಲೆಮಚ್ಚೆ ರೋಗ ನಿರ್ವಹಣೆಗೆ ಸಲಹೆ

Tips for managing roundworm leaf spot disease in rice ಕೊಪ್ಪಳ ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ): ಭತ್ತದಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.