Former MLA Paranna Munavalli kicks off Parikrama Yatra led by Shri Vidyadas Baba

ಗಂಗಾವತಿ :ತಾಲೂಕಿನ ಆನೆಗೊಂದಿ ಸಮೀಪವಿರುವ ಅಂಜನಾದ್ರಿ ಬೆಟ್ಟದ ಲ್ಲಿ ಕಿಷ್ಕಿಂಧೆ ಅಂಜನಾದ್ರಿ ಪರ್ವತ ಪರಿಕ್ರಮಣ ಶ್ರಾವಣ ಮಾಸದ ನಾಲ್ಕು ಶನಿವಾರ ಶ್ರಧಾ ಭಕ್ತಿಯಿಂದ ಅಂಜನಾದ್ರಿ ಪರ್ವತದ ಪೀಠಾಧಿಪತಿ ಶ್ರೀ ವಿದ್ಯಾದಾಸ್ ಬಾಬಾ ಅವರ ನೇತೃತ್ವದಲ್ಲಿ ಪರಿಕ್ರಮ ಯಾತ್ರೆ ಜರುಗಿತು ನಾಲ್ಕನೇ ಶನಿವಾರದಂದು ಕಿಸ್ಕಿಂದ ಅಂಜನಾದ್ರಿ ಪರಿಕ್ರಮ ಯಾತ್ರೆಗೆ ಮಾಜಿ ಶಾಸಕ ಪರಣ್ಣ ಮನವಳ್ಳಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾತ್ರೆಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಪರಿಕ್ರಮ ಯಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಾತ್ರೆಯನ್ನು ಶ್ರದ್ಧ ಭಕ್ತಿಯಿಂದ ನೆರೆವೇರಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮನವಳ್ಳಿ ಅವರು ಮಾತನಾಡುತ್ತಾ ಪರಿಕ್ರಮ ಯಾತ್ರೆ ಅಂಜನಾದ್ರಿ ಪರ್ವತದಲ್ಲಿ ಜರುತ್ತಿರುವುದು ನಮ್ಮ ಸೌಭಾಗ್ಯ ವಿದ್ಯಾದಾಸ್ ಬಾಬು ಅವರ ನೇತೃತ್ವದಲ್ಲಿ ಪರಿಕ್ರಮ ಶ್ರಾವಣ ಮಾಸದಲ್ಲಿ ಅಚ್ಚುಕಟ್ಟಾಗಿ ನೆರವೇರಿಸುತ್ತಿರುವುದು ಶ್ಲಾಘನೆಯ ಮತ್ತು ಈ ಭಾಗದಲ್ಲಿ ಪರಿಕ್ರಮ ಅಂಜನಾದ್ರಿ ಪರ್ವತ ಬಿಟ್ಟರೆ ಬೇರೆಲ್ಲೂ ಕೂಡ ಪರಿಕ್ರಮ ಜರುಗುತ್ತಿಲ್ಲ ಶ್ರದ್ಧಾಭಕ್ತಿಯಿಂದ ಆಂಜನೇಯ ಆಶೀರ್ವಾದ ಈ ನಾಡಿನ ಜನರಿಗೆ ಸ್ವಾಮಿ ನೀಡಲಿ ಮತ್ತು ರೈತರು ಅವರು ಬೆಳೆಯುವಂತಹ ಬೆಳೆಗೆ ಉತ್ತಮ ಬೆಲೆ ಮತ್ತು ಬೆಳೆಗಳು ಚೆನ್ನಾಗಿ ಬರಲಿ ಎಂದು ಹೇಳಿದರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನರ ನಾಡಿಮಿಡಿತವಾದ ತುಂಗಭದ್ರ ಅಣೆಕಟ್ಟು ಗೇಟುಗಳು ದುರಸ್ತಿಯಲ್ಲಿದ್ದಾವೆ ಆಂಜನೇಯ ಸ್ವಾಮಿ ಕೃಪಾ ಆಶೀರ್ವಾದ ನೀಡಿ ರೈತರ ಬೆಳೆ ಬರುವವರು ಕೂಡ ಯಾವುದೇ ಆತಂಕ ಅಡ್ಡಿಗಳು ಆಗದಂತೆ ಆ ಭಗವಂತ ಕಾಪಾಡಬೇಕಾಗಿದೆ ಈ ಸಂದರ್ಭದಲ್ಲಿ ಹೊಸಪೇಟೆಯ ನರಸಿಂಹಮೂರ್ತಿ ಅವರು ಕೂಡ ಪರಿಕ್ರಮದ ಕುರಿತು ಮಾಹಿತಿ ನೀಡಿದರು ಮತ್ತು ಪರಿಕ್ರಮ ಇನ್ನೂ ಶ್ರದ್ಧಾಭಕ್ತಿಯಿಂದ ನಾಡಿನ ಎಲ್ಲಾ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು ಈ ಸಂದರ್ಭದಲ್ಲಿ ಅಂಜನಾದ್ರಿ ಭಕ್ತಿ ಮಂಡಳಿಯ ಸದಸ್ಯರಾದ ಹಂಪೆಶ್ ಅರಿಗೋಲು ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ನಾರಾಯಣ ಗೌಡ ವೆಂಕಟರೆಡ್ಡಿ ಶರಣಪ್ಪ ಕೆಸರಟ್ಟಿ ಬಾಲು ಹನುಮನಹಳ್ಳಿ ಲಕ್ಷ್ಮಣ್ ಜಂಗ್ಲಿ ಕಾವ್ಯ ರಾಜೇಶ್ವರಿ ಭುವನೇಶ್ವರಿ ಶ್ರೀದೇವಿ ಸೇರಿದಂತೆ ಅಂಜನಾದ್ರಿ ಭಕ್ತ ಮಂಡಳಿಯ ಸದಸ್ಯರು ಮತ್ತು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು