18th day Vachana Jyoti program in Vanajbhavi village

ಇಂದು ವನಜಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿ
ಕಾರ್ಯಕ್ರಮವು ರಾಷ್ಟ್ರೀಯ ಬಸವ ದಳ ಯುವ ಘಟಕ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ಗಿರಿಮಲ್ಲಪ್ಪ ಪರಂಗಿ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಪ್ರಥಮಲ್ಲಿ ಗುರು ಪೂಜೆ ಲಿಂಗ ಪೂಜೆ ನಂತರ ವಚನ ಪಠಣದೊಂದಿಗೆ, ಬಸವಾದಿ ಶಿವ ಶರಣರಲ್ಲೊಬ್ಬರಾದ ಶರಣೆ ಕುಂಬಾರ ಗಂಡಯ್ಯನ ಧರ್ಮ ಪತ್ನಿ ಕೇತಲಾದೇವಿಯ ಜೀವನ ಚರಿತ್ರೆ ಇಂದಿನ ದಿನದ ಚಿಂತನ ವಿಷಯವಾಗಿ ತೆಗೆದುಕೊಂಡು, ಪ್ರಾಸ್ತಾವಿಕ ಮಾತನಾಡದ ಶರಣ ದೇವಪ್ಪ ಕೋಳೂರು ಗೌರವಾಧ್ಯಕ್ಷರು ವನಜಭಾವಿ ಇವರು ಮಾತನಾಡಿ, ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ 18 ನೇ ದಿನದ ಮನೆಯಿಂದ ಮನೆಗೆ ಮನದಿಂದ ಮನಕ್ಕೆ ಎನ್ನುವ ಶೀರ್ಷಿಕೆ ಇಟ್ಟುಕೊಂಡು ಬಸವಾದಿ ಶಿವ ಶರಣರ ಚರಿತ್ರೆಯನ್ನ ಪ್ರತಿ ದಿನಕ್ಕೆ ಒಬ್ಬರನ್ನ ಆಯ್ದು ಕೊಂಡು ಅವರ ವಿಚಾರವನ್ನ ಮನೆಯಲ್ಲಿ ಸಂಗಮಗೊಂಡ ಜನಸಮುದಾಯದ ಮನಕ್ಕೆ ಮುಟ್ಟಿಸುವ ಕಾರ್ಯ ಈ ವಚನ ಜ್ಯೋತಿ ಕಾರ್ಯಕ್ರಮದ ಉದ್ದೇಶ ಆಗಿದೆ. ಶ್ರಾವಣ ಎಂದರೆ ಕೇಳುವುದು ಎಂದರ್ಥ. ಅರಿವು ಆಚಾರ ಅನುಭಾವ ಹೊಂದಿರುವ ಶರಣರ ವಿಚಾರಗಳನ್ನು ಮನವರಿಕೆ ಮಾಡುವುದರಿಂದ, ನಮ್ಮಲ್ಲಿರುವ ದುರ್ಗುಣ ದುರ್ವಿಚಾರ ದುರ್ನಡತೆ ಗಳನ್ನ ದೂರ ಮಾಡಿಕೊಳ್ಳಲು ಸಾದ್ಯ ಇದೆ. ಎಂದರು.