
Bhumi Puja for construction of Rajagopuram of Srikannikaparameshwari temple

ಗಂಗಾವತಿ: ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕಾಗಿ ವರಮಹಾಲಕ್ಷ್ಮಿ ಶುಭ ದಿನವಾದ ಶುಕ್ರವಾರ ದಿನದಂದು ಸಮಾಜದ ಅಧ್ಯಕ್ಷ. ದರೋಜಿ ನಾಗರಾಜ ಶ್ರೇಷ್ಠಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ಸಮಾಜ ಬಾಂಧವರ ಸರ್ವ ಸಹಕಾರದಿಂದ ಈಗಾಗಲೇ ದೇವಸ್ಥಾನದ ಪೂರ್ವ ಭಾಗದಲ್ಲಿ ರಾಜಗೋಪುರ ನಿರ್ಮಾಣದ ಕಾರ್ಯ ಬಹುತೇಕ ಸಂಪೂರ್ಣಗೊಂಡಿದ್ದು ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಬೃಹತ್ ರಾಜಗೋಪುರ ನಿರ್ಮಾಣಕ್ಕೆ ಶ್ರಾವಣ ಮಾಸದ ಅತ್ಯಂತ ಶುಭ ದಿನವಾದ ಇಂದು ಚಾಲನೆ ನೀಡುತ್ತಿರುವುದು ಸಂತಸದಾಯಕವಾಗಿದೆ ಸದರಿ ದೇವಸ್ಥಾನದಲ್ಲಿ ಹಲವು ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಶಕ್ತಿಪೀಠವಾಗಿ ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುವ ಕುಲದೇವತೆ ಯಾಗಿದ್ದಾರೆ ಎಂದು ತಿಳಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷ ಸಮಾಜದ ಮುಖಂಡ ರಾಘವೇಂದ್ರ ಶ್ರೇಷ್ಠಿ ಮಾತನಾಡಿ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಅಧ್ಯಕ್ಷತೆಯಲ್ಲಿ ಸಮಾಜ ಬಾಂಧವರು ಸಂಘಟಿತರಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಧಾರ್ಮಿಕತೆ ಮನೋಭಾವನೆ ಬೆಳೆಸಿಕೊಳ್ಳುವಲ್ಲಿ ಸಫಲತೆ ಹೊಂದಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅವಧೂತ್ ಭಟ್ ಭೂಮಿ ಪೂಜೆಯ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಿದರು.ಈ ಸಂದರ್ಭದಲ್ಲಿ
ಜಿ.ಆರ್.ಎಸ್ ಸತ್ಯನಾರಾಯಣ.ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ. ದರೋಜಿ ವೆಂಕಟೇಶ. ಎನ್ ಗಂಗಾಧರ.
ಆನೆಗುಂದಿ ಗೋಪಾಲ ಶ್ರೇಷ್ಠಿ . ದಮ್ಮೂರ ಸುರೇಶ. ದಮ್ಮೂರ ನಾಗರಾಜ. ಸುರೇಶ. ದರೋಜಿ ಶಂಭುಲಿಂಗ. ವಿಜಯ. ದಮ್ಮೂರ ನಾಗರಾಜ. ಶಿರಹಟ್ಟಿ ಚಂದ್ರಶೇಖರ ಶಿರಹಟ್ಟಿ ಗೋಪಾಲ ಶ್ರೇಷ್ಠಿ.ಇಲ್ಲೂರು ರವಿಕುಮಾರ. ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ. ಸೇರದಂತೆ ಆರ್ಯ ವೈಶ್ಯ ಸಮಾಜದ ಹಿರಿಯರು ಮುಖಂಡರು ಭಾಗವಹಿಸಿದ್ದರು.
