Children's Rights Legal Awareness Program.

ಗಂಗಾವತಿ :ತಾಲೂಕಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ವತಿಯಿಂದ ವೈ ಜೆ ಆರ್ ಪಿ ಯುನಿವರ್ಸಿಟಿ ಕಾಲೇಜ್ ವಿದ್ಯಾನಗರದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕು.ಯಮನಮ್ಮ ಸಮಾಜಿಕ ಕಾರ್ಯಕರ್ತೆ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಅಧಿನಿಯಮ 2012 ಪೋಕ್ಸೋ ಆಕ್ಟ್ ಬಗ್ಗೆ ಮತ್ತು ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು. ರಕ್ಷಣೆಯ ಹಕ್ಕು. ವಿಕಾಸ ಒಂದುವ ಭಾಗವಹಿಸುವ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಬಸಮ್ಮ ಮಕ್ಕಳ ಸಹಾಯವಾಣಿ ಇವರು ರಾಜ್ಯ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳ ಸಹಾಯವಾಣಿಯ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು.
ಗಂಗಾವತಿ ಗ್ರಾಮೀಣ ಠಾಣೆಯ ಶ್ರೀ ವೆಂಕಟೇಶ್ ಚವಾಣ್ ಪಿಎಸ್ಐ ಇವರು ಪ್ರತಿ ಗುರುವಾರ ಪೊಲೀಸ್ ಠಾಣೆಯಲ್ಲಿ ನಡೆಯುವ ತೆರೆದ ಮನೆ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರುವಂತೆ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದರು. ಮತ್ತು ಆನ್ಲೈನ್ ಸೇಫ್ಟಿಯ ಕುರಿತು ಮಾಹಿತಿ ನೀಡಿದ್ದಾರೆ ಈ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ಕೊಟಯ್ಯ ಬಿ ಶ್ರೀಮತಿ ನಾಗಮಣಿ ಮತ್ತು ಬಸವರಾಜ ಪಿ ಸಿ, ಹಾಗೂ ಕಾಲೇಜಿನ ಉಪನ್ಯಾಸಕರು. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು .