Eliminate rural e-asset confusion*: National Public Service Chairman N.D.S. Stephen

ಗ್ರಾಮೀಣ ಭಾಗದ ಇ-ಸ್ವತ್ತು ಗೊಂದಲ ನಿವಾರಿಸಿ*: ನ್ಯಾಷನಲ್ ಪಬ್ಲಿಕ್ ಸರ್ವಿಸ್ ಅಧ್ಯಕ್ಷ ಎನ್.ಡಿ.ಎಸ್ ಸ್ಟೀಫನ್
ಬೆಂಗಳೂರು:ರಾಜ್ಯ ಸರ್ಕಾರ ನಿವೇಶನ ಹಾಗೂ ಜಮೀನು ಮಾಲಿಕರ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಭೂ ಮಾಫಿಯಾ ಹಾಗೂ ವಂಚನೆಕೊರರು ಮಾಡುವ ವ್ಯವಹಾರ ತಡಗಟ್ಟುವ ಉದ್ದೇಶದಿಂದ ಆರಂಭಿಸಿರುವ ಡಿಜಿಟಲೀಕರಣ ಹಾಗೂ ಇ ಸ್ವತ್ತು ಅಭಿಯಾನ ಗೊಂದಲದ ಗೂಡಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ಸರ್ವಿಸ್ ರಾಜ್ಯಾಧ್ಯಕ್ಷ ಎನ್.ಡಿ.ಎಸ್ ಸ್ಟೀಫನ್ ಆರೋಪಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಗ್ರೇಟರ್ ಬೆಂಗಳೂರು) ವ್ಯಾಪ್ತಿಯಲ್ಲಿ ಇ-ಖಾತಾ (E-Khata)
ಅಭಿಯಾನ ಸರಾಗವಾಗಿ ನಡೆಯುತ್ತಿದ್ದು. ಬಿಬಿಎಂಪಿ ವ್ಯಾಪ್ತಿ ಹೊರತು ಪಡಿಸಿದ ಬಡಾವಣೆಗಳಲ್ಲಿ ಇ ಸ್ವತ್ತು ಮಾಡಿಸುವುದು ಹರಸಾಹಸದ ಕೆಲಸವಾಗಿದೆ. ಅಮಾಯಕ ನಿವೇಶನ ಮಾಲಿಕರು ಇ ಸ್ವತ್ತು ಮಾಡಿಸಲು ಹೊದರೆ ಗ್ರಾಮ ಪಂಚಾಯತ್ ಸಹಿತ ಸ್ಥಳೀಯ ಆಡಳಿತ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಕಚೇರಿಗೆ ಅಳೆದು ಸುಸ್ತಾದ ನಿವೇಶನ ಮಾಲಿಕರು ಮಧ್ಯವರ್ತಿಗಳ ಸಹಾಯ
ಕೇಳಿದರೆ ಅವರು ಇ-ಸ್ವತ್ತು ಮಾಡಿಸಿಕೊಡಲು ನಿವೇಶದ ಗಾತ್ರಕ್ಕೆ ತಕ್ಕಂತೆ ಲಕ್ಷಾಂತರ ರೂಪಾಯಿ ಹಣ ಕೇಳುತ್ತಾರೆ. ಅಧಿಕಾರಿಗಳಿಗೆ ಹಣಕೊಟ್ಟು ಮಾಡಿಸಬೇಕು ಅದಕ್ಕಾಗಿ ವೆಚ್ಚವಾಗುತ್ತದೆ ಎಂದು ನಿವೇಶನ ಮಾಲಿಕರ ಅಸಹಾಯಕತೆಯ ದುರುಪಯೋಗ ಪಡಿಸಿಕೊಂಡು, ಹಣ ಪೀಕುತ್ತಾರೆ. ಇ-ಸ್ವತ್ತು ಹೈಟೆಕ್ ಬೃಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಎನ್.ಡಿ.ಎಸ್ ಸ್ಟೀಫನ್ ಹೇಳಿದ್ದಾರೆ.
ಕಷ್ಟಪಟ್ಟು ಉಳಿಸಿದ ಹಣ ಹಾಗೂ ಸಾಲ ಮಾಡಿ ಖರೀದಿಸಿದ ನಿವೇಶನವಕ್ಕೆ ಇ-ಸ್ವತ್ತು ಮಾಡಿಸುವುದೆಂದರೆ ಇನ್ನೊಂದು ಜನ್ಮವೆತ್ತಿ ಬಂದಂತೆ ಆಗಿದೆ ಎಂದು ಅವರು ಹೇಳಿದರು.
ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ನಿವೇಶನಕ್ಕೆ ಇ-ಸ್ವತ್ತು ಮಾಡಿಸಿಕೊಳ್ಳದಿದ್ದರೆ ಕಾನೂನು ಬದ್ದವಾಗಿ ಅದಕ್ಕೆ ಮಾನ್ಯತೆ ಇಲ್ಲವಾಗುತ್ತದೆ ಎಂದರೆ ಅಂತಹ ಸ್ವತ್ತುಗಳನ್ನು ಸರ್ಕಾರ ನೋಂದಣಿ ಮಾಡಿಸಲು ಏಕೆ ಅವಕಾಶ ನೀಡಬೇಕು ಸ್ಟೀಫನ್ ಪ್ರಶ್ನಿಸಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ಕಾರದ ಇ-ಸ್ವತ್ತು ಮಾಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಬೇಕು ಆ ಮೂಲಕ ನಿವೇಶನ ಮಾಲಿಕರಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.
ಲಂಚದ ಹಣದ ಆಸೆಗಾಗಿ ಕಚೇರಿಗೆ ಅಲೆದಾಡಿಸುವ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.
ಮೇಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇ-ಸ್ವತ್ತು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಎನ್.ಡಿ.ಎಸ್ ಸ್ಟೀಫನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
*ಗ್ರಾಮೀಣ ಭಾಗದ ಕೃಷಿಯೇತರ ಖಾಲಿ ಜಾಗಕ್ಕೆ ಮತ್ತು ಮನೆ ನಿರ್ಮಾಣ ಮಾಡಿಕೊಂಡಿರುವ ಜಾಗಕ್ಕೆ ಅಧಿಕೃತ ಮಾಲೀಕತ್ವ ಪ್ರಮಾಣ ಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ಹೊಂದುವುದಕ್ಕೆ ಇ-ಸ್ವತ್ತು ಮಾಡಿಸುವುದು ಎಂದು ಕರೆಯುತ್ತಾರೆ. ಈ ಇ-ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಪೋಟೋ, ಒಟ್ಟು ವಿಸ್ತೀರ್ಣ, ಮಾಲೀಕರ ವಿವರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ*.
*ಇ-ಸ್ವತ್ತು*
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ವಹಿವಾಟುಗಳನ್ನು ತಡೆಯುತ್ತದೆ ಮತ್ತು ಆಸ್ತಿಯ ದೃಢೀಕರಣವನ್ನು ಖಚಿತಪಡಿಸುತ್ತದೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ, ಭೂ ವಿವಾದಗಳನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳುತ್ತದೆ ಆದರೆ ಸರ್ಕಾರ ಹೇಳಿದ ಎಲ್ಲಾ ದಾಖಲೆಗಳನ್ನು ಒದಗಿಸಿದರು ಸಹ ಗ್ರಾಮ ಪಂಚಾಯತ್ ಅಧಿಕಾರಿಗಳು ಇ-ಸ್ವತ್ತು ಮಾಡಿಸಿಕೊಡಲು ಅನಗತ್ಯ ವಿಳಂಬ ಮಾಡುತ್ತಾರೆ ಎಂದು ಎನ್ ಡಿ ಎಸ್ ಸ್ಟೀಫನ್ ಹೇಳುತ್ತಾರೆ.
ಕಾರ್ಯದರ್ಶಿ ಮನೋಹರ ಹಾಜರಿದ್ದರು.