Breaking News

ಕೊಪ್ಪಳ ಪಾಲಿನ ಯೂರಿಯಾ ರಾಯಚೂರಿನಲ್ಲಿ ಸಂಗ್ರಹ, ಕ್ರಮ ಆಗ್ರಹ

Koppal’s share of urea is being stored in Raichur, action is demanded

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
06 gvt 11


*ಜಂಟಿ ಕೃಷಿ ನಿರ್ದೇಶಕ ಮತ್ತು ಬೀಜನಿಗಮದ ಅಧಿಕಾರಿಗ ವಿರುದ್ಧ ಕ್ರಮಕ್ಕೆ ಒತ್ತಾಯ
*ಕರ್ನಾಟಕ ಪ್ರಾಂತ ರೈತ ಸಂಘದಿAದ ಕೃಷಿ ಸಚಿವರಿಗೆ ಮನವಿ

ಗಂಗಾವತಿ: ಬೀಜ ನಿಗಮದಿಂದ ಕೊಪ್ಪಳ ಜಿಲ್ಲೆಯ ವ್ಯವಸಾಯ ಸಹಕಾರಿ ಸಂಘಗಳಿಗೆ ಬಂದಿದ್ದ ೮೦೦ ಟನ್ ಯೂರಿಯಾ ಪೈಕಿ ೬೬೭ ಟನ್ ಕೊಪ್ಪಳದ ಸೊಸಾಯಿಗಳಿಗೆ ನೀಟಿ ಉಳಿದ ಯೂರಿಯಾ ಗೊಬ್ಬರವನ್ನು ರಾಯಚೂರಿನ ಬೀಜನಿಗಮದ ಗೋಡೌನಲ್ಲಿಟ್ಟು ಕೃತಕ ಯೂರಿಯಾ ಅಭಾವ ಸೃಷ್ಠಿಸಲು ಸಂಚು ನಡೆಸಿದ ಜಂಟಿ ಕೃಷಿ ನಿರ್ದೇಶಕ ಹಾಗೂ ಕೊಪ್ಪಳದ ಬೀಜ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯದ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಬೇಗ ಬಂದಿದ್ದರಿAದ ಮತ್ತು ತುಂಗಭದ್ರ ನೀರನ್ನು ಬೇಗನೆ ಕಾಲುವೆಗಳಿಗೆ ಹರಿಸಿದ್ದರಿಂದ ಜಿಲ್ಲೆಯಲ್ಲಿ ಉತ್ತಮ ಬಿತ್ತನೆ ಹಾಗೂ ಭತ್ತದ ನಾಟಿ ಕಾರ್ಯವನ್ನು ರೈತರು ಮಾಡಿದ್ದಾರೆ. ಪ್ರಸ್ತುತ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಯೂರಿಯ ರಸಗೊಬ್ಬ ೩೪.೦೦ ಸಾವಿರ ಮೆಟ್ರಿಕ್ ಟನ್ ಮಂಜೂರು ಮಾಡಿದ್ದು ಇರುತ್ತದೆ. ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದೇ ರೈತರಿಗೆ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಗೆ ಕಾರಣರಾಗಿರುತ್ತಾರೆ. ಕೊಪ್ಪಳ ಜಿಲ್ಲಾ ಬೀಜ ನಿಗಮಕ್ಕೆ ಶೇ ೧೨.೦೫% ರಷ್ಟು ರಾಯಚೂರು ರೈಲ್ವೇ ನಿಲ್ದಾಣಕ್ಕೆ ಬಂದು ೨೫೫೧ ಟನ್. ಎನ್.ಎಫ್.ಎಲ್. ಯೂರಿಯಾ ಗೊಬ್ಬರ ಸ್ಟಾಕ್ ೧೨.೫ ಅಂದರೆ ೮೦೦ ಟನ್ ಯೂರಿಯಾ ಗೊಬ್ಬರ ಕೊಪ್ಪಳ ಜಿಲ್ಲೆಯ ಬೀಜ ನಿಗಮದ ಮೂಲಕ ಕೊಪ್ಪಳ ಜಿಲ್ಲೆಯ ಸಹಕಾರಿ ಸಂಘಗಳ ಎಫ್.ಟಿ.ಓ. ಗಳಿಗೆ ಹಂಚಿಕೆ ಆಗಬೇಕಿತ್ತು. ಕೊಪ್ಪಳ ಜಿಲ್ಲೆಯ ಜಂಟಿನಿರ್ದೇಶಕರು ನೀಡಿರುವ ಮಾಹಿತಿ ಪ್ರಕಾರ ೬೬೭.೩೫೦ ಟನ್ ಯೂರಿಯಾವನ್ನು ಸಹಕಾರಿ ಸಂಘಗಳಿಗೆ ಹಂಚಿಕೆ ಮಾಡಿ ಉಳಿದ ೧೩೩ ಟನ್ ಎನ್.ಎಫ್.ಎಲ್. ಯೂರಿಯಾ ಗೊಬ್ಬರವನ್ನು ರಾಯಚೂರಿನ ಬೀಜ ನಿಗಮದ ಗೋಡೌನÀಲ್ಲಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಇದೆ. ಕೊಪ್ಪಳ ಜಿಲ್ಲೆಗೆ ಯೂರಿಯಾ ಗೊಬ್ಬರದ ಬೇಡಿಕೆ ಇದ್ದರು ಉದ್ದೇಶ ಪೂರ್ವಕವಾಗಿ ಕೊಪ್ಪಳ ಜಿಲ್ಲಾ ಬೀಜ ನಿಗಮದ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರಾಯಚೂರು ಬೀಜ ನಿಗಮದ ಗೋದಾಮಿನಲ್ಲಿ ಅಕ್ರಮವಾಗಿ ಎನ್.ಎಫ್.ಎಲ್ ಯೂರಿಯಾ ಗೊಬ್ಬರವನ್ನು (೧೩೩ ಟನ್)ಸಂಗ್ರಹ ಮಾಡಿದ್ದು ಕೂಡಲೆ ಈ ಗೊಬ್ಬರವನ್ನು ಕೊಪ್ಪಳ ಜಿಲ್ಲೆಗೆ ತರಿಸಿ ಸಹಕಾರ ಸಂಘಗಳ ಮೂಲಕ ರೈತರಿಗೆ ಹಂಚಿಕೆ ಮಾಡಬೇಕು, ಮತ್ತು ರೈತರಿಗೆ ಗೊಬ್ಬರ ಅಭಾವ ಸೃಷ್ಟಿಗೆ ಕಾರಣರಾಗಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಬೀಜ ನಿಗಮದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಶಿವಣ್ಣ ಬೆನಕಲ್,ಶ್ರೀನಿವಾಸ ಹೊಸಳ್ಳಿ,ಅಮರೇಶ ಕಡಗದ್, ಬಸವರಾಜ ಆನೆಗೊಂದಿ, ಕೆ.ಹುಸೇನಪ್ಪ, ಮರಿನಾಗ, ಮಂಜುನಾಥ ಡಗ್ಗಿ ಸೇರಿ ಅನೇಕರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *