Union Minister V. Somanna visited Salur Math and received the blessings of Sri Dr. Shantamallikarjuna Swamiji.

ವರದಿ : ಬಂಗಾರಪ್ಪ .ಸಿ .
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿನ ದೇವಾಲಯಕ್ಕೆ ಕೇಂದ್ರ ಸರ್ಕಾರದ ರಾಜ್ಯ ಖಾತೆಯ ರೈಲ್ವೆ ಮತ್ತು ಜಲ ಶಕ್ತಿ ಯೋಜನೆಯ ಸಚಿವರಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣರವರು ಭೇಟಿ ನೀಡಿದರು .
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಮಠದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ಶ್ರೀ ಮಠವು ತಲಾಂತರದಿಂದ ಸುತ್ತಮುತ್ತಲಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುತ್ತ ಮತ್ತು ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುತ್ತ ಬಡವರ ಏಳ್ಗೇಗಾಗಿ ನಿತ್ಯ ಕಾಯಕವನ್ನು ಮಾಡಿಕೊಂಡು ಬಂದಿದೆ ಹಿರಿಯರ ಮಾರ್ಗ ದರ್ಶನದಲ್ಲಿ ಶ್ರೀ ಡಾ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸಾಗುತ್ತಿದ್ದಾರೆ ಅಂತಹವರಿಂದ ಶ್ರೀ ಮಠವು ಉನ್ನತ ಮಟ್ಟಕ್ಕೆ ಬೆಳೆದು ಕೀರ್ತಿಯನ್ನು ತರಲೆಂದು ತಿಳಿಸಿದರು . ನಂತರ ಶ್ರೀ ಡಾ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳಿಂದ ಅರ್ಶಿವಾದ ಪಡೆದರು . ಸಚಿವರು
ಮಹದೇಶ್ವರ ಸ್ವಾಮಿಯವರ ದರ್ಶನ ಪಡೆದು ಅನಂತರ ಈ ಸಾಲೂರು ಬೃಹನ್ಮಠಕ್ಕೆ ಭೇಟಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಗುರುಸ್ವಾಮೀಜಿಗಳವರ ಗದ್ದುಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು .
ಇದೇ ಸಂದರ್ಭದಲ್ಲಿ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್ ಮಂಜುನಾಥ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೆಶ್ ಕುಮಾರ್ , ಪ್ರಾಧಿಕಾರದ ಕಾರ್ಯದರ್ಶಿಗಳಾದ ರಘು ಎಇ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು