Breaking News

ಬಸಾಪೂರ ೪೪.೩೫ ಎಕರೆ ಸಾರ್ವಜನಿಕ ಕೆರೆ ತೆರವಿಗೆ ಒತ್ತಾಯ

Demand to clear 44.35 acres of public lake in Basapur

ಜಾಹೀರಾತು


ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ ಜಿಲ್ಲಾಧಿಕಾರಿಗಳಿಗೆ ಕೊಪ್ಪಳ ಹೋಬಳಿಯ ಬಸಾಪೂರ ಗ್ರಾಮದ ಸ.ನಂ. ೧೪೩ರ ೪೪.೩೫ ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಅತಿಕ್ರಮಿಸಿ, ಕಂಪೌAಡ್ ನಿರ್ಮಿಸಿ, ರಸ್ತೆ ಬಂದ್ ಮಾಡಿರುವ ಬಲ್ದೋಟಾ ಕಂಪನಿ ಮೇಲೆ ಕ್ರಮ ಜರುಗಿಸಿ, ಕಂಪೌAಡ್ ತೆರವುಗೊಳಿಸಿ, ಸಾರ್ವಜನಿಕರ ಬಳಕೆಗೆ ಕೆರೆ ಮುಕ್ತವಾಗಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಲ್ದೋಟಾ ಕಂಪನಿ ಆರಂಭದಿAದಲೂ ಆಕ್ರಮಣಕಾರಿ ನೀತಿಯನ್ನು ಅನುಸರಿಸಿ ರೈತರ ಮೇಲೆ ದೌರ್ಜನ್ಯದಿಂದ ಭೂಮಿ ವಶಪಡಿಸಿಕೊಂಡಿದೆ, ಹಿಂದಿನ ಕೆಲವು ಅದಿಕಾರಿಗಳು ಸಹ ಅದಕ್ಕೆ ಸಾಥ್ ನೀಡಿದ್ದು, ಜನರ ಪ್ರಾಣ ಮತ್ತು ಬದುಕು ಮುಖ್ಯವಾಗಿರುವ ಕಾರಣ ಬೆಲೆ ಬಾಳುವ ಹಾಗೂ ಜನ ಜಾನುವಾರುಗಳಿಗೆ ಅವಶ್ಯವಿರುವ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಉಚ್ಛನ್ಯಾಯಾಲಯದ ತೀರ್ಪು ಇದ್ದಾಗ್ಯೂ ಸಹ ತೆರವುಗೊಳಿಸದಿರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದ್ದು, ಇದೇ ಜುಲೈ ೨೩ರೊಳಗೆ ಅದನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಸಾಪುರ ಸ.ನಂ. ೧೪೩ರ ೪೪.೩೫ ಎಕರೆ ಕೆರೆ (ತಲಾಬ) ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡಬೇಕೆಂದು, ಸಂಪರ್ಕ ರಸ್ತೆ ಬಂದ್ ಮಾಡಿ ನಿರ್ಮಿಸಿದ ಕಂಪೌAಡ್ ತೆರವುಗೊಳಿಸಬೇಕೆಂದು, ಕೆರೆ ಏರಿಗೆ ನೇರವಾಗಿ ಮುಖ್ಯದ್ವಾರದ ಗೇಟ್ (ಆರ್ಚ್) ಅಳವಡಿಸಿ, ಕಂಪನಿಯ ಭಾರಿ ವಾಹನ ಟಿಪ್ಪರಗಳ ಓಡಾಟದಿಂದ ಮಾಡುತ್ತಿದ್ದು, ಸುಗಮವಾಗಿ ಜನ-ಜಾನುವಾರುಗಳು ಹೋಗಿ ಬರಲು ಆಗುತ್ತಿಲ್ಲ, ಆದ್ದರಿಂದ ಈ ಗೇಟ್ ತೆರವು ಮಾಡಬೇಕೆಂದು, ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಸುಮಾರು ೧೦-೧೫ ಎಕರೆ ಕೆರೆಯನ್ನು ಮುಚ್ಚಿ ರಸ್ತೆ ಮಾಡಿದ್ದನ್ನು ತೆರವುಗೊಳಿಸಬೇಕೆಂದು, ಕೆರೆ ಸರ್ವೆ ಮಾಡಿ, ಹದ್ದುಬಸ್ತ್ ಮಾಡಿ ತಾವೇ ನಿರ್ವಹಣೆ ಮಾಡಬೇಕೆಂದು, ಕಂಪನಿ ಜೊತೆ ಮಿಲಾಪಿಯಾಗಿ ಸಾರ್ವಜನಿಕರ ಹಕ್ಕನ್ನು ದಿಕ್ಕರಿಸುವ ವರದಿ ನೀಡಿರುವ ನಿಮ್ಮ ಅಧೀನ ಅಧಿಕಾರಿಗಳ ಮೇಲೆ ಉನ್ನತಾಧಿಕಾರಿಗಳ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಬಸಾಪುರ, ಕಿಡದಾಳ, ಬೆಳವಿನಾಳ, ಕೊಪ್ಪಳ, ಹಾಲವರ್ತಿ, ಹೂವಿನಾಳ ಗ್ರಾಮಗಳ ಜಾನುವಾರು ನೀರು ಕುಡಿಯಲು ಸಹಕಾರಿಯಾಗುವಂತೆ ಪ್ರಸ್ತುತ ರಸ್ತೆ ಬಂದ್ ಮಾಡಿ ಹಾಕಿದ ಕಂಪೌAಡ್ ತೆರವುಗೊಳಿಸಬೇಕೆಂದು, ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಿಸಿದ್ದನ್ನು ಗುರುತಿಸಲು ಸರ್ವೆ ಮಾಡಿ, ಹದ್ದುಬಸ್ತ್ ಮಾಡಿ, ತಾವೇ ನಿಗರಾಣಿ ಮಾಡಬೇಕೆಂದು, ಕೆರೆ ಮೇಲೆ ಓಡಾಡುವ ಟಿಪ್ಪರ್, ಬಹುಚಕ್ರಗಳ ಟ್ರಕ್ ಸಾರಿಗೆ ತಡೆಮಾಡಿ ಜನ ಜಾನುವಾರು ಸುಗಮವಾಗಿ ಹೋಗಿಬರಲು ಅನುವು ಮಾಡಬೇಕು ಎಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಕೆ. ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾತ ಜಿ. ಗೊಂಡಬಾಳ, ಮುದುಕಪ್ಪ ಹೊಸಮನಿ, ಕೇಶವ ಕಟ್ಟಿಮನಿ, ಮಹಾಂತೇಶ ಕೊತಬಾಳ, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ ಇತರರು ಇದ್ದರು.

About Mallikarjun

Check Also

screenshot 2025 09 05 22 19 02 62 6012fa4d4ddec268fc5c7112cbb265e7.jpg

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾದಾಮಿ ಹಾಲು ವಿತರಣೆ.

Distribution of almond milk on the occasion of Eid Milad. ಕನಕಗಿರಿ:ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಬಾಂಧವರಿಂದ ಹಮ್ಮಿಕೊಳ್ಳಲಾಗಿದ್ದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.