SFI protest against increase in examination fee of graduate students
ಬಳ್ಳಾರಿ ವಿ ವಿ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ವಿಜಯನಗರ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಪೆಡರೇಷನ್ SFI ಹಾಗೂ ವಿದ್ಯಾರ್ಥಿಗಳು ಖಂಡಿಸಿದರು.
ಪ್ರತಿ ಸೆಮಿಸ್ಟರ್ ಗೆ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು SFI ವಿದ್ಯಾರ್ಥಿ ಸಂಘಟನೆ ತೀವ್ರ ವಾಗಿ ಖಂಡಿಸುತ್ತದೆ .
ವರ್ಷ ಹೆಚ್ಚಳ ಮಾಡಿ ಮಕ್ಕಳ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚು ಮಾಡುವ ಹುನ್ನಾರವಾಗಿ.ಕೇವಲ 600 ರಿಂದ 700 ರೂ ಪರೀಕ್ಷಾ ಶುಲ್ಕ ತೆಗೆದುಕೊಳ್ಳುವುದು ಬಿಟ್ಟು ಏಕಾ ಎಕಿ 1500 ರೂಪಾಯಿ ವರೆಗೆ ಹೆಚ್ಚಳ ಮಾಡಿದ್ದು ಸರಿಯಾದ ಕ್ರಮವಲ್ಲ ಕೂಡಲೇ ಸಂಬಂಧ ಪಟ್ಟ ಕುಲಪತಿಗಳ ಜೊತೆ ಶಾಸಕರು ಮಾತನಾಡಿ ಕಡಿತ ಮಾಡಬೇಕೆಂದು ಅಧ್ಯಕ್ಷ ಗ್ಯಾನೇಶ ಕಡಗದ ಆಗ್ರಹಿಸಿದರು
ಸರಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಬಡವರಾಗಿದ್ದು.ಶೈಕ್ಷಣಿಕ ವರ್ಷ ಮುಗಿತಾ ಬಂದರೂ ಇಲ್ಲಿಯವರೆಗೆ ವಿದ್ಯಾರ್ಥಿವೇತನ ಬಂದಿರುವುದಿಲ್ಲ. ಪರೀಕ್ಷೆ ಶುಲ್ಕ ಹೇಗೆ ಕಟ್ಟಬೇಕು.ಸರಕಾರ SC ST ಹಾಗೂ OBC ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿ ಎಂದು ಹೇಳುತ್ತಿದೆ ಆದರೆ ವಿಶ್ವವಿದ್ಯಾಲಯ ಸರಕಾರ ಹೇಳಿದನ್ನು ಉನ್ನತ ಶಿಕ್ಷಣ ಇಲಾಖೆಯ ನಿಯಮವನ್ನು ಪಾಲಿಸುತ್ತಿಲ್ಲ.ಪರೀಕ್ಷಾ ಶುಲ್ಕ ವನ್ನು ಪೂರ್ಣ ಕಟ್ಟಬೇಕೆಂದು ಆದೇಶ ಮಾಡಿರುವುದು ಕಾನೂನು ಬಾಹಿರವಾಗಿ .ರಾಜ್ಯ ಸರಕಾರ ಆದೇಶಕ್ಕೂ ಮನ್ನಣೆ ಕೊಡುತ್ತಿಲ್ಲ. ಮತ್ತು ಪರೀಕ್ಷಾ ಶುಲ್ಕ ತುಂಬಲು 26 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ ಶುಲ್ಕ ತುಂಬಲು ದಿನಾಂಕ ಮುಂದೂಡಬೇಕೆಂದು ಆಗ್ರಹಿಸಿದರು. ಸಂಬಂಧಿಸಿದ ಜಿಲ್ಲೆಯ ಶಾಸಕರುಗಳು ಕುಲಪತಿಗಳೊಂದಿಗೆ ಮಾತಾಡಿ ಕೂಡಲೇ ಪರೀಕ್ಷಾ ಶುಲ್ಕ ಕಡಿತ ಮಾಡಬೆಕೆಂದು ಪ್ರಾಚಾರ್ಯರು ಮೂಲಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಗ್ಯಾನೇಶ ಕಡಗದ.ಉಪಾಧ್ಯಕ್ಷ ನಾಗರಾಜ.ಮುಖಂಡರಾದ.ಅಮರೇಶ.ಶರೀಪ್.ಬಾಲಾಜಿ.ರಾಜಭಕ್ಷಿ. ಬಾಳಪ್ಪ.ಹೊನ್ನುರು ಸಾಬ.ಸುನೀಲ್.ಮಹಾದೇವ.ಗಾದಿಲಿಂಗ.ಸೋಮನಾಥ.ಇತರರು ಇದ್ದರು.