MP A grants Rs 5 lakh to Sri Raghavendra Swamy Math in Gangavathi Nagar

ಗಂಗಾವತಿ: ನಗರದ ರಾಯರಓಣಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಮಂಗಳವಾರ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಮಠದ ಪಾಕಶಾಲಾ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ೫ ಲಕ್ಷ ಅನುದಾನ ನೀಡುವುದಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ತಿಳಿಸಿದರು.
ಸಂಸದರು ವಿಪ್ರ ಸಮಾಜದ ಮನವಿ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿದ್ದು, ಮೃತ್ತಿಕಾವೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ, ಬ್ರಾಹ್ಮಣ ಸಮಾಜ ಹಾಗೂ ಆರ್ಯವೈಶ್ಯ ಸಮಾಜದಿಂದ ಸಂಸದರಾದ ಶ್ರೀ ರಾಜಶೇಖರ ಹಿಟ್ನಾಳ್ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಂಸದರು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮೊದಲನೆ ಹಂತದಲ್ಲಿ ೫ ಲಕ್ಷ ನೀಡುತ್ತಿದ್ದು, ಮುಂದಿನ ವರ್ಷ ಮತ್ತಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷೆ ರೂಪಾರಾಣಿ ಲಕ್ಷö್ಮಣ ರಾಯಚೂರು, ಸಂತೋಷ ಕೆಲೋಜಿ, ಸುರೇಶ ಶ್ರೇಷ್ಠಿ, ಮಾರುತಿ ರಾಯಚೂರು ಸೇರಿದಂತೆ ಇತರರು ಇದ್ದರು.