Breaking News

ಪತ್ರಕರ್ತರಿಗೆ ನೂತನ ವಾಹನ ಕೊಡುಗೆ ಇಂಧನ ಸಚಿವರಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಅಭಿನಂದನೆ 

Karnataka Media Journalists Association congratulates Energy Minister on gift of new vehicles to journalists

ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಸರ್ಕಾರಿ ಕಾರ್ಯಕ್ರಮ ಹಾಗೂ ಇನ್ನಿತರ ಸಭೆ ಸಮಾರಂಭಗಳಿಗೆ ಸುದ್ದಿಗೆ ಪ್ರಯಾಣಿಸಲು ವಾಹನದ ಇರಲಿಲ್ಲ. ಜಿಲ್ಲೆಯ ಪತ್ರಕರ್ತರ ಬಹುದಿನಗಳ ಬೇಡಿಕೆ ಕೂಡ ಆಗಿತ್ತು ಇದನ್ನು ಮನಗಂಡು ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಜಾರ್ಜ್ ರವರು ಕೆಪಿಟಿಸಿಎಲ್ ವತಿಯಿಂದ 25 ಲಕ್ಷ ರೂ ವೆಚ್ಚದ ಸಿಎಸ್ಆರ್ ನಿಧಿ ಅಡಿಯಲ್ಲಿ ಪತ್ರಕರ್ತರಿಗೆ ಈ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ.
ವಾಹನದಲ್ಲಿ 34 ಪತ್ರಕರ್ತರು ಪ್ರಯಾಣಿಸಬಹುದಾಗಿದ್ದು, ವಾಹನವು ಪತ್ರಕರ್ತರಿಗೆ ಅಗತ್ಯವಿತ್ತು.

ಜಾಹೀರಾತು


ಜಿಲ್ಲಾ ಪತ್ರಕರ್ತ ಸಂಘವು ಸಚಿವರ ಗಮನಕ್ಕೆ ಹಿಂದೆಯೇ ತರಲಾಗಿತ್ತು. ಸಂಘದ ಬೇಡಿಕೆಗೆ ಸ್ಪಂದಿಸಿದ ಸಚಿವರಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಕರ್ತರ ಸಂಘಟನೆಯ ಜಿ.ಎಂ. ರಾಜಶೇಖರ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಾಹನ ವಿತರಣೆಯ ಸಂದರ್ಭದಲ್ಲಿ ಇಂಧನ ಸಚಿವ ಜಾರ್ಜ್ ರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕುಮಾರ್ ಬಿ.ಆರ್. ಪುರುಷೋತ್ತಮ್, ಅನಿಲ್ ಆನಂದ್, ವಿ.ಜೆ. ರಾಜೇಶ್, ಪ್ರಕಾಶ್ ಮೂರ್ತಿ, ಅಕ್ಷಯ್ ಮುಂತಾದ ಪತ್ರಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯತಿ ಸಿಇಓ ಕೀರ್ತನ, ಎಸ್ ಪಿ. ಡಾ. ವಿಕ್ರಂ ಅಮಟೆ, ಡಿ.ಎಚ್.ಒ ಅಶ್ವತ್ ಬಾಬು, ಮತ್ತು ವಾರ್ತಾಧಿಕಾರಿ ಮಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.