Breaking News

ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಸಾಮಾಜಿಕ ಕಾರ್ಯವು ಶ್ಲಾಘನೀಯವಾದುದ್ದು : ಕುಮಾರಸ್ವಾಮಿ .

The social work of the Karnataka Media Journalists Association is commendable: Kumaraswamy.





ವರದಿ : ಬಂಗಾರಪ್ಪ .ಸಿ
ಚಾಮರಾಜನಗರ/ ಗುಂಡ್ಲುಪೇಟೆ: ದಾನದಾನಕ್ಕಿಂತ ಕಣ್ಣಿನ ದಾನವು ಶ್ರೇಷ್ಠವಾದುದ್ದು ,ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘ ಹಾಗೂ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಇಂದು
ಸಾರ್ವಜನಿಕ ಹಿತಾಸಕ್ತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸುತ್ತಿದ್ದು ಅರ್ಹರು ಇದರ ಸದ್ಬಳಕೆ ಮಾಡಿಕೊಳ್ಳಬೇಕು
ಎಂದು ಪಿಡಿಒಗಳ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಕುಮಾರಸ್ವಾಮಿ ತಿಳಿಸಿದರು.

ಜಾಹೀರಾತು

ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆ ಮತ್ತು, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಾಗೂ ಕನ್ನಡದ ನಂ1 ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ನಂತರ ‌ಮಾತನಾಡಿದ ಅವರು
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹಾಗೂ ಚಿಕಿತ್ಸಾವೆಚ್ಚ ಹೆಚ್ಚಾಗುತ್ತಿದೆ. ಆದರೆ ಈ ಶಿಬಿರಗಳಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಜತೆಗೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ಕೊಡಲಾಗುತ್ತಿದೆ.

ಪತ್ರಕರ್ತರು ಸುದ್ದಿಗಳ ಒತ್ತಡದ ನಡುವೆಯೂ ಕೂಡ ಸಮಾಜಮುಖಿ ಆರೋಗ್ಯ ಸೇವಾಮನೋಭಾವ ಬೆಳೆಸಿಕೊಂಡಿರುವುದು ನಿಜಕ್ಕೂ ಪ್ರಶಂಸಾರ್ಹ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ,
ಕ್ಯಾಂಪ್ ಗಳಲ್ಲಿ ಕೇವಲ ತಪಾಸಣೆ ನಡೆಸದೆ ಪೊರೆ ಮಾತ್ರವಲ್ಲ ಕಣ್ಣಿನ ತೊಂದರೆಗಳಾದ ರೆಟಿನೋಪತಿ, ಗ್ಲಾಕೋಮಾ, ಎ ವಿಟಮಿನ್ ಕೊರತೆಯಿಂದ ಬರುವ ಸಮಸ್ಯೆ, ದುರ್ಮಾಂಸ ಬೆಳೆಯುವ ಹಾಗೂ ಸಮೀಪ ಮತ್ತು ದೂರದೃಷ್ಟಿ ದೋಷ ಸೇರಿದಂತೆ ಶೇ.80 ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ‌‌ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುತ್ತಿದೆ ಎಂದು ತಿಳಿಸಿದರು.

ಬಾಕ್ಸ್ ನ್ಯೂಸ್

ಶಿಬಿರದ ಆಯೋಜಕ ಎಂ.ಶ್ರೀನಾಥ್ ಮಾತನಾಡಿ ತಾವು ಬಡಜನರಿಗೆ ಅನುಕೂಲ ಮಾಡುವ ಸಲುವಾಗಿ ಕಳೆದ 10 ವರ್ಷಗಳಿಂದ ಕ್ಯಾಂಪ್ ಆಯೋಜಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಹಾ ಮುಂದುವರೆಸಲಾಗುವುದು ಎಂದರು.
ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನಿಖಿಲಂತ್, ಡಾ.ಅನಿರುಧ್ ಶರ್ಮಾ, ಡಾ.ಗುರು ಚೇತನ್ 85 ಹೊರರೋಗಿಗಳ ಕಣ್ಣಿನ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ಅಗತ್ಯವಾದ
20 ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ದರು.
ಕಾರ್ಯಕ್ರಮದಲ್ಲಿ ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎನ್.ನಾಗೇಂದ್ರ, ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ಕಾರ್ಯಕ್ರಮದ ಆಯೋಜಕ ಶ್ರೀನಾಥ್, ಉದ್ಯಮಿ ರಘು, ಗ್ರಾಮಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕತುಪ್ಪೂರು ಮಲ್ಲು, ಪಿ.ಆರ್.ಓ.ವಿಜಯಕಾಂತ್, ಮಹಲಿಂಗಪ್ಪ, ನೀವೃತ್ತ ಪೋಲೀಸ್ ಅಧಿಕಾರಿ, ಮಹಾದೇವ್, ಪ್ರಗತಿ ಪರ ರೈತ ಮಹಾಲಿಂಗಪ್ಪ, ಅನುಗ್ರಹ ಫೌಂಡೇಶನ್ ಕೆ.ರಮೇಶ್, ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಕೆ.ಎನ್.ಮಹದೇವಸ್ವಾಮಿ, ಉಪಾಧ್ಯಕ್ಚ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಭೈರೇಶ್ ಗಾಣಿಗ್, ರಂಗೂಪುರ ಸುರೇಶ್ ಹೆಗ್ಗಡಳ್ಳಿ ಸಿದ್ದು, ಯಡುಂಡಿ ಪ್ರಸಾದ್, ಮಾಜಿ ಅಧ್ಯಕ್ಷ ರಾ.ಬಾಬು ಇತರರು ಇದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.