World No Drug Day: Building a drug-free society is everyone’s responsibility

ಯಲಬುರ್ಗಾ: ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ,ಯುವ ಸಮುದಾಯ ಗುಟಕಾ, ಸಿಗರೆಟ್, ಧೂಮಪಾನ ಸೇವನೆಯಿಂದ ದುಶ್ಚಟದಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಡಾ. ವಿವೇಕ ವಾಗಲೆ ಅವರು ಯಲಬುರ್ಗಾ ತಾಲೂಕಿನ ಮೂಧೋಳದ ತ್ರೀಲಿಂಗೇಶ್ವರ ಪ್ರೌಡ ಶಾಲೆಯಲ್ಲಿ ಜರುಗಿದ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ, ಜ್ಣಾನ ವಿಕಾಸ ಸಮಿತಿ ಇವುಗಳ ಸಹಕಾರದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ತ್ರೀಲಿಂಗೇಶ್ವರ .ವಿ.ಸಮಿತಿ ಅದ್ಯಕ್ಷ ಚಂದ್ರಶೇಖರ ದೇಸಾಯಿ ಅವರು ಸಸಿಗೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಚಟಗಳಿಗೆ ದಾಸರಾಗಿ ಹಲವು ರೋಗಗಳಿಗೆ ಅಂಟಿಕೊಳ್ಳದೆ ಉತ್ತಮರ ಸಂಘ ಮಾಡಿಕೊಂಡು ಸುಂದರ ಬದುಕು ನಿಮ್ಮದಾಗಿಸಿಕೊಳ್ಳಿ ಎಂದು ಯೋಜನಾಧಿಕಾರಿ ಗಣೇಶ ನಾಯ್ಕ್ ಅವರು ಮಾತನಾಡಿದರು. ಮೋಜು ಮಸ್ತಿಗಾಗಿ ವಿದ್ಯಾರ್ಥಿಗಳು ಸಿಗರೇಟ್ , ಗುಟಕಾ ಅತಿಯಾಗಿ ಸೇವನೆ ಮಾಡುತ್ತಾರೆ ಇದರಲ್ಲಿ ಸಾಕಷ್ಟು ವಿಷವಿರುತ್ತದೆ ಇದರ ಅರಿವು ಇದ್ದರು ಸಹ ಸೇವನೆ ಮಾಡಿ ಇದರಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ ಪರ್ಯಂತಾರ ತೊಂದರೆ ಅನುಭವಿಸಿ ಸಾವನ್ನಪ್ಪುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ರೋಗ ರುಜಿನಗಳಿಂದ ತೊಂದರೆ ಅನುಭವಿಸಿ ಮರಣ ಹೊಂದುತ್ತಾರೆ , ಯುವ ಸಮುದಾಯ ದುಶ್ಚಟಗಳಿಂದ ದೂರ ಇರಬೇಕು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಅದ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ವಿಕಾಸ ಸಮಿತಿಯ ಸಮನ್ವಯಾಧಿಕಾರಿ ರತ್ನ ಪಾಟೀಲ, ತ್ರೀಲಿಂಗೇಶ್ವರ ವಿ.ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಹುನಗುಂದ,ಶಿಕ್ಷಕಿ ಬಸಮ್ಮ ತಳವಾರ ಇವರು ಮಾತನಾಡಿ ಮಕ್ಕಳು ದುಶ್ಚಚಟಗಳಿಂದ ದೂರವಿದ್ದು ತಂದೆ ತಾಯಿಯವರಿಗೆ ಗೌರವ ತರುವ ಕಾರ್ಯಮಾಡಬೇಕು ಎಂದರು. ಒಕ್ಕೂಟದ ಅದ್ಯಕ್ಷೆ ಗೀತಾ ಹಿರೇಹಾಳ,ಸೇವಾ ಪ್ರತಿನಿದಿಗಳಾದ ಕಾಳಮ್ಮ ಬೀಳಗಿಮಠ, ರೇಣುಕಾ ಹುಂಡಿ,,ಶಿಕ್ಷಕರಾದ ಶರಣಪ್ಪ ತಳವಾರ,ಶರಣಪ್ಪ ಚಲವಾದಿ ಸೇರಿದಂತೆ ಸಂಸ್ಥೆಯ ಮುಖ್ಯೋಪಾಧ್ಯಾಯರು,ಶಿಕ್ಷಕ ವೃಂದದವರು ಭಾಗವಹಿಸಿದ್ದರು.